US President ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ Corona Positive
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅತ್ಯಂತ ಆಪ್ತ ಮಹಿಳಾ ಸಹಾಯಕಿ ಹೋಪ್ ಹಿಕ್ಸ್ ಕೊರೊನಾವೈರಸ್ ಸೋಂಕಿಗೆ ಒಳಗಾಗಿದ್ದರು.
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್ (Melania Trump) ಕರೋನಾ (Corona) ಸೋಂಕಿಗೆ ಗುರಿಯಾಗಿದ್ದಾರೆ. ಈ ಬಗ್ಗೆ ಟ್ರಂಪ್ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.
ಇದಕ್ಕೂ ಮೊದಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅತ್ಯಂತ ಆಪ್ತ ಮಹಿಳಾ ಸಹಾಯಕಿ ಹೋಪ್ ಹಿಕ್ಸ್ ಕೊರೊನಾವೈರಸ್ ಸೋಂಕಿಗೆ ಒಳಗಾಗಿದ್ದರು. ಬಳಿಕ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೇಲಿನಿಯಾ ಅವರ ಕೊವಿಡ್ 19 ಪರೀಕ್ಷೆ ನಡೆಸಲಾಗಿದ್ದು, ಇಬ್ಬರ ವರದಿ ಕೂಡ ಸಕಾರಾತ್ಮಕ ಹೊರಬಂದಿದೆ.
ಇದನ್ನು ಓದಿ- ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು Corona Positive, ಟ್ವೀಟ್ ಮೂಲಕ ಮಾಹಿತಿ ನೀಡಿದ ನಾಯ್ಡು
ಟ್ರಂಪ್ ಜೊತೆಗೆ ಪ್ರವಾಸ ಕೈಗೊಂಡಿದ್ದರು
ಓಹಿಯೋದಲ್ಲಿ ನಡೆದ ಮೊದಲ ಅಧ್ಯಕ್ಷೀಯ ಚರ್ಚೆಯಲ್ಲಿ ಪಾಲ್ಗೊಳ್ಳಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಲಹೆಗಾರ ಹಿಕ್ಸ್ ಇತ್ತೀಚೆಗೆ ಟ್ರಂಪ್ ಅವರೊಂದಿಗೆ ಆಗಮಿಸಿದ್ದರು. ಹಿಕ್ಸ್ ಅವರ ಕೊರೊನಾವೈರಸ್ ಟೆಸ್ಟ್ ಸಕಾರಾತ್ಮಕವಾದ ನಂತರ, ಎಲ್ಲರ ಗಮನವು ಟ್ರಂಪ್ ಕಡೆಗೆ ಇತ್ತು.
ಟ್ರಂಪ್ ಅವರ ಅಳಿಯ ಕೂಡ ಅವರೊಂದಿಗೆ ಕಾಣಿಸಿಕೊಂಡಿದ್ದರು
ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್, ಡಾನ್ ಸ್ಕ್ಯಾವಿನೊ ಹಾಗೂ ನಿಕೋಲಸ್ ಲೂನಾ ಅವರೊಂದಿಗೆ ಮರೀನ್ ಒನ್ನಲ್ಲಿ ಹಿಕ್ಸ್ ಕಾಣಿಸಿಕೊಂಡರು. ಆಶ್ಚರ್ಯಕರ ಸಂಗತಿಯೆಂದರೆ, ಆ ಸಮಯದಲ್ಲಿ ಅವರಲ್ಲಿ ಯಾರೂ ಫೇಸ್ ಮಾಸ್ಕ್ ಧರಿಸಿರಲಿಲ್ಲ.
ಇದನ್ನು ಓದಿ- ಎಚ್ಚರಿಕೆ...! ಭಾರತದ ಪಾಲಿಕೆ ಮಾರಕ ಸಾಬೀತಾಗಲಿದೆ ಚೀನಾದ ಮತ್ತೊಂದು ವೈರಸ್
ವೈಟ್ ಹೌಸ್ ಗೆ ಸಂಬಂಧಿಸಿದ ಊಹಾಪೋಹಗಳು
ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಹಿಕ್ಸ್ ಕರೋನಾ ವೈರಸ್ ಪಾಸಿಟಿವ್ ಎಂದು ಕಂಡುಬಂದ ನಂತರವೂ, ಶ್ವೇತಭವನದಲ್ಲಿ ಯಾವುದೇ ವಿಶೇಷ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿರಲಿಲ್ಲ. ಆದರೂ ಕೂಡ ಶ್ವೇತಭವನದ ವಕ್ತಾರ ಜೂಡ್ ಡೀರೆ, "ಅಮೆರಿಕಾದ ಜನರಿಗಾಗಿ ಕೆಲಸ ಮಾಡುವ ತಮ್ಮ ಎಲ್ಲ ಜನರ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಅಧ್ಯಕ್ಷರು ಗಂಭೀರವಾಗಿರುತ್ತಾರೆ" ಎಂದು ಹೇಳಿದ್ದಾರೆ. " ಅಧ್ಯಕ್ಷ ಟ್ರಂಪ್ ಮತ್ತು ಅವರೊಂದಿಗೆ ಪ್ರಯಾಣಿಸುವ ಎಲ್ಲರಿಗೂ ಕೂಡ ಕೊರೊನಾ ವೈರಸ್ ನಿಂದ ಬಚಾವಾಗಲು ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ" ಎಂದು ಜೂಡ್ ಹೇಳಿದ್ದಾರೆ.