ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ (Coronavirus) ರಸ್ತೆಯಿಂದ ಹಿಡಿದು ಸಂಸತ್ತಿನವರೆಗೆ ತನ್ನ ಪಾದಗಳನ್ನು ಚಾಚಿದೆ. ಕಳೆದ ಕೆಲ ದಿನಗಳ ಹಿಂದ ಸಂಸತ್ತಿನ ಅಧಿವೇಶನ ಆರಂಭಕ್ಕೂ ಮುನ್ನವೇ ಹಲವು ಸಂಸದರು ಕೊವಿಡ್ 19 ಸೋಂಕಿಗೆ ಗುರಿಯಾಗಿರುವುದರ ಕುರಿತು ಸುದ್ದಿ ಬಿತ್ತರಗೊಂಡಿತ್ತು. ಇದೀಗ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ರುಟೀನ್ ಟೆಸ್ಟ್ ವೇಳೆ ಕೊರೊನಾ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ. ಈ ಕುರಿತಾದ ಮಾಹಿತಿ ವೆಂಕಯ್ಯ ನಾಯ್ಡು ಅವರ ಉಪರಾಷ್ಟ್ರಪತಿಗಳ ಅಧಿಕೃತ ಟ್ವಿಟ್ಟರ್ ಪುಟ @VPSecretariatನಲ್ಲಿ ನೀಡಲಾಗಿದೆ.
The Vice President of India who underwent a routine COVID-19 test today morning has been tested positive. He is however, asymptomatic and in good health. He has been advised home quarantine. His wife Smt. Usha Naidu has been tested negative and is in self-isolation.
— Vice President of India (@VPSecretariat) September 29, 2020
71 ವರ್ಷ ವಯಸ್ಸಿನ ಉಪರಾಷ್ಟ್ರಪತಿಗಳು ತಾವು ಮಾಡಿರುವ ಟ್ವೀಟ್ ನಲ್ಲಿ, “ಇಂದು ಬೆಳಗ್ಗೆ ರುಟೀನ್ ಕೊರೊನಾ ಟೆಸ್ಟ್ ಗೆ ಒಳಗಾಗಿದ್ದಾರೆ. ಇದರಲ್ಲಿ ಅವರು ಕೊವಿಡ್ ಪಾಸಿಟಿವ್ ಆಗರುವುದು ಪತ್ತೆಯಾಗಿದೆ. ಆದರೆ, ಅವರಲ್ಲಿ ಇದುವರೆಗೆ ಯಾವುದೇ ಕೊವಿಡ್ ಲಕ್ಷಣಗಳು ಕಂಡುಬಂದಿಲ್ಲ ಹಾಗೂ ಅವರ ಆರೋಗ್ಯ ಸಂಪೂರ್ಣ ಸ್ಥಿರವಾಗಿದೆ. ಸೆಲ್ಫ್ ಐಸೊಲೆಶನ್ ಗಾಗಿ ಅವರನ್ನು ಕ್ವಾರಂಟೀನ್ ಮಾಡಲಾಗಿದೆ. ಇನ್ನೊಂದೆಡೆ ಅವರ ಪತ್ನಿ ಉಷಾ ನಾಯ್ಡು ಅವರ ಕೊರೊನಾ ವರದಿ ನೆಗೆಟಿವ್ ಬಂದಿದೆ.
ಇದನ್ನು ಓದಿ- ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕೊರೊನಾ ಧೃಢ, ಆಸ್ಪತ್ರೆಗೆ ದಾಖಲು
ಇದಕ್ಕೂ ಮೊದಲು ದೇಶದ ರಾಜಕೀಯಕ್ಕೆ ಸಂಬಂಧಿಸಿದ ಹಲವಾರು ದಿಗ್ಗಜರು ಕೊವಿಡ್ 19 ಸೋಂಕಿಗೆ ಗುರಿಯಾಗಿದ್ದಾರೆ. ಈ ಪಟ್ಟಿಯಲ್ಲಿ ಅಮಿತ್ ಷಾ, ರಾಜನಾಥ್ ಸಿಂಗ್, ಶಿವರಾಜ್ ಸಿಂಗ್ ಚೌಹಾನ್ ರಂತಹ ದಿಗ್ಗಜ ನಾಯಕರು ಶಾಮೀಲಾಗಿದ್ದಾರೆ.
ಇದನ್ನು ಓದಿ- ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ಗೆ ಕರೋನಾ ಪಾಸಿಟಿವ್