ವಾಷಿಂಗ್ಟನ್: ಅಮೆರಿಕಾಗೆ ಯುದ್ಧದ ಧಮ್ಕಿ ನೀಡಿರುವ ಇರಾನ್ ಗೆ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರುಗೇಟು ನೀಡಿದ್ದು, "ಒಂದೂ ಯುದ್ಧವನ್ನು ಗೆಲ್ಲದ ಇರಾನ್, ಮಾತಿನಲ್ಲಿ ಎಂದು ಸೋತಿಲ್ಲ" ಎಂದಿದ್ದಾರೆ. ಇದಕ್ಕೂ ಮೊದಲು ಸುದ್ದಿ ಸಂಸ್ಥೆ ರಾಯ್ಟರ್ಸ್ ಪ್ರಕಟಿಸಿರುವ ವರದಿ ಪ್ರಕಾರ ಇರಾನ್ ನಲ್ಲಿರುವ ತೈಲ ಕಂಪನಿಗಳು ಯುಎಸ್ ಪೌರತ್ವ ಪಡೆದಿರುವ ಹೊಂದಿರುವ ನಾಗರಿಕರು ಇರಾನ್ ಬಿಡುವಂತೆ ಸೂಚಿಸಿವೆ. ಅಮೇರಿಕ ನಡೆಸಿರುವ ಹಲ್ಲೆಯ ಕುರಿತು ಪ್ರತಿಕ್ರಿಯೆ ನೀಡಿರುವ ಇರಾಕ್, ಇರಾನ್ ಮೇಲೆ ಅಮೇರಿಕ ನಡೆಸಿರುವ ದಾಳಿಯನ್ನು ನಿಂದಿಸಿದೆ.


COMMERCIAL BREAK
SCROLL TO CONTINUE READING

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ ನಡೆದ ದಾಳಿಯ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಇರಾನ್‌ನ ಸರ್ವೋಚ್ಛ ನಾಯಕ ಅಯತೊಲ್ಲಾ ಸೈಯದ್ ಅಲಿ ಖಮೇನಿ ಪ್ರತಿಜ್ಞೆ ಮಾಡಿದ್ದಾರೆ. ಗುರುವಾರ ರಾತ್ರಿ ಅಮೇರಿಕಾದ ಮಿಲಿಟರಿ ನಡೆಸಿದ ದಾಳಿಯಲ್ಲಿ  ಹಷಾದ್ ಶಬಿ ಅಥವಾ ಇರಾಕಿ ಪಾಪ್ಯುಲರ್ ಮೊಬಿಲೈಸೇಶನ್ ಫೋರ್ಸ್ (ಪಿಎಂಎಫ್)ನ  ಡೆಪ್ಯೂಟಿ ಕಮಾಂಡರ್ ಅಬು ಮಹ್ದಿ ಅಲ್-ಮುಹಂದಿಸ್ ಮತ್ತು ಸುಲೇಮಾನಿ ಮೃತಪಟ್ಟಿದ್ದಾರೆ ಎಂದು IRGC ವರದಿ ಮಾಡಿದೆ. ಇವರ ವಾಹನವನ್ನು ಬಾಗ್ದಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮೇಲೆ ಗುರಿಯಾಗಿಸಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.



ಈ ದಾಳಿಯ ಬಳಿಕ ಇರಾನ್ ಬೆಂಬಲಿತ ಪ್ರತಿಭಾಟನಾಕಾರರು ಮಂಗಳವಾರ ಬಾಗ್ದಾದ್ ನ ದೂತಾವಾಸದ ಪರಿಸರದ ಹೊರ ಆವರಣದ ಗೋಡೆಯನ್ನು ಧ್ವಂಸಗೊಳಿಸಿದ್ದರು.  ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಮುಂದಾಗಿದ್ದ ಅಮೇರಿಕಾದ ಭದ್ರತಾ ಪಡೆಗಳು ಪರಿಸರದಲ್ಲಿ ಅಶ್ರುವಾಯು ಸಿಲಿಂಡರ್ ಗಳನ್ನು ಉರುಳಿಸಿದ್ದರು. ಈ ಹಲ್ಲೆಯ ಬಳಿಕ ಟ್ವೀಟ್ ಮಾಡಿದ್ದ ಅಮೆರಿಕಾದ ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್ ತಮ್ಮ ದೃಢ ನಿಲುವು ಸ್ಪಷ್ಟಪಡಿಸಿದ್ದರು. ಹಲ್ಲೆಯ ಬಳಿಕ ಟ್ವೀಟ್ ಮಾಡಿರುವ ಟ್ರಂಪ್, "ನಮ್ಮ ಯಾವುದೇ ರೀತಿಯ ಆಸ್ತಿ ಹಾಗೂ ಪ್ರಾಣ ಹಾನಿಗೆ ಇರಾನ್ ಅನ್ನು ಸಂಪೂರ್ಣ ಹೊಣೆಯನ್ನಾಗಿಸಲಾಗುವುದು ಹಾಗೂ ಇದಕ್ಕಾಗಿ ಭಾರೀ ಬೆಲೆ ತೆತ್ತಲು ಇರಾನ್ ಸಿದ್ಧವಾಗಿರಬೇಕು. ಇದು ಕೇವಲ ಎಚ್ಚರಿಕೆ ಆಗಿರದೆ ಒಂದು ಬೆದರಿಕೆಯಾಗಿದೆ ಎಂದು ಇರಾನ್ ಭಾವಿಸಬೇಕು. ಹೊಸವರ್ಷದ ಶುಭಾಷಯಗಳು" ಎಂದು ಹೇಳಿದ್ದರು.


ಡೊನಾಲ್ಡ್ ಟ್ರಂಪ್ ಅವರ ಈ ಬೆದರಿಕೆಯ ನಂತರ, ಅಮೆರಿಕ ಒಂದು ದೊಡ್ಡ ಹೆಜ್ಜೆ ಇಡಬಹುದೆಂದು ಇರಾನ್ ಊಹಿಸಿತ್ತು. ಆದರೆ,  ಅದು ಇರಾನ್‌ನ ಅತ್ಯಂತ ಶಕ್ತಿಶಾಲಿ ಮೇಜರ್ ಜನರಲ್ ಗೆ ಮರಣದಂಡನೆ ನೀಡುತ್ತದೆ ಎಂದು ನಿರೀಕ್ಷಿಸಿರಲಿಲ್ಲ.


ಇದುವರೆಗೆ ಅಮೇರಿಕ ಮತ್ತು ಇರಾನ್ ಎರಡೂ ದೇಶಗಳ ಮಧ್ಯೆ ಪ್ರತಿಕಾರ ತೀರಿಸಿಕೊಳ್ಳುವ ಕುರಿತು ಕೇವಲ ವಾಗ್ವಾದ ಮುಂದುವರೆದಿತ್ತು. ಆದರೆ, ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ ನಡೆದ ವಾಯುದಾಳಿಯಲ್ಲಿ ಇರಾನ್  ನ ಅತ್ಯಂತ ಶಕ್ತಿಶಾಲಿ ಕಮಾಂಡರ್ ಮೇಜರ್ ಜನರಲ್ ಕಾಸೀಮ್ ಸುಲೇಮಾನಿ ಮರಣಹೊಂದಿದ್ದು, ಪ್ರಶ್ನೆಗಳು ಮೂಡಲಾರಂಭಿಸಿವೆ. ಇಡೀ ವಿಶ್ವದ ಚಿತ್ತ ಇದೀಗ ಅಮೇರಿಕ ಮತ್ತು ಇರಾನ್ ಮಧ್ಯೆ ಏರ್ಪಟ್ಟ ವೈಮನಸ್ಯದ ಮೇಲೆ ನೆಟ್ಟಿದ್ದು, ಮುಂದೆ ಏನಾಗಲಿದೆ? ಎಂಬ ಭೀತಿಯ ವಾತಾವರಣ ವಿಶ್ವಾದ್ಯಂತ ಮನೆ ಮಾಡಿದ್ದು, ಇದು ಮೂರನೇ ಮಹಾಯುದ್ಧದ ಮುನ್ಸೂಚನೆಯೇ? ಎಂಬ ಭೀತಿ ವ್ಯಕ್ತವಾಗುತ್ತಿದೆ.