ನವದೆಹಲಿ: 2019 ಗಣರಾಜ್ಯೋತ್ಸವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಮುಖ್ಯ ಅತಿಥಿಯಾಗಿ ಭೇಟಿಯಾಗಿ ಆಗಮಿಸಲಿದ್ದಾರೆ ಎಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಶುಕ್ರವಾರದಂದು ಟ್ರಂಪ್ ಆಡಳಿತದ ಉನ್ನತ ಮೂಲಗಳು ಹೇಳುವಂತೆ  ಭಾರತ-ಯುಎಸ್ ಸಂಬಂಧದಲ್ಲಿ "ವಿಸ್ಮಯಕಾರಿಯಾದ ಸಕಾರಾತ್ಮಕ ಮಾರ್ಗವನ್ನು ಕಂಡುಕೊಳ್ಳಲು  ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡಲು ಎದುರು ನೋಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.


ನಮ್ಮ ಸಂಬಂಧದಲ್ಲಿನ ವಿಸ್ಮಯಕಾರಿಯಾಗಿ ಸಕಾರಾತ್ಮಕ ಮಾರ್ಗವನ್ನು ಕಂಡುಕೊಳ್ಳಲು  ಭಾರತದ ಭೇಟಿಗೆ ಅಧ್ಯಕ್ಷ ಟ್ರಂಪ್ ಅವರು ಎದುರು ನೋಡುತ್ತಿದ್ದಾರೆ "ಎಂದು ಬ್ಯೂರೊ ಆಫ್ ಸೌತ್ ಮತ್ತು ಮಧ್ಯ ಏಷ್ಯಾ ಪ್ರದೇಶದ  ಪ್ರಧಾನ ಸಹಾಯಕ  ಕಾರ್ಯದರ್ಶಿ ಆಲಿಸ್ ವೆಲ್ಸ್ನತಿಳಿಸಿದ್ದಾರೆ. 


ಈ ವರ್ಷದ ಆರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ 2019 ರ ಜನವರಿಯಲ್ಲಿ ಟ್ರಂಪ್ಗೆ ಗಣರಾಜ್ಯೋತ್ಸವಕ್ಕೆ ಆಹ್ವಾನಿಸಿದ್ದರು.2019 ರ ಮಧ್ಯದಲ್ಲಿ ಭಾರತವು ಸಾರ್ವತ್ರಿಕ ಚುನಾವಣೆಗೆ ಹೋಗುವುದರಿಂದ ಇದು ಪ್ರಸಕ್ತ ಸರ್ಕಾರದ ಕೊನೆಯ ಗಣರಾಜ್ಯೋತ್ಸವವಾಗಿದೆ.