ವಾಷಿಂಗ್ಟನ್: ಅಮೆರಿಕದ (America) ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರು ದಾಖಲೆಗಳನ್ನು ಹೊಂದಿರದ ಅರ್ಧ ಮಿಲಿಯನ್ ಭಾರತೀಯರು ಸೇರಿದಂತೆ ಸುಮಾರು 10 ಮಿಲಿಯನ್ ವಲಸಿಗರಿಗೆ ಅಮೆರಿಕನ್ ಪೌರತ್ವ ನೀಡಲು ಮಾರ್ಗಸೂಚಿಯನ್ನು ಸಿದ್ಧಪಡಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಇದಲ್ಲದೆ, ಅವರು ವಾರ್ಷಿಕವಾಗಿ 95,000 ನಿರಾಶ್ರಿತರನ್ನು ಅಮೆರಿಕಕ್ಕೆ ಪ್ರವೇಶಿಸುವ ವ್ಯವಸ್ಥೆಯನ್ನು ಸಹ ಮಾಡಲಿದ್ದಾರೆ. ಈ ಮಾಹಿತಿಯನ್ನು ಬೈಡನ್ ಅಭಿಯಾನ ಬಿಡುಗಡೆ ಮಾಡಿದ ನೀತಿ ದಾಖಲೆಯಲ್ಲಿ ನೀಡಲಾಗಿದೆ.


"ಅವರು (ಬೈಡ ನ್) ಶೀಘ್ರದಲ್ಲೇ ಕಾಂಗ್ರೆಸ್ನಲ್ಲಿ ವಲಸೆ ಸುಧಾರಣಾ ಕಾನೂನನ್ನು ಜಾರಿಗೆ ತರುವ ಕೆಲಸವನ್ನು ಪ್ರಾರಂಭಿಸುತ್ತಾರೆ, ಅದರ ಮೂಲಕ ನಮ್ಮ ವ್ಯವಸ್ಥೆಯನ್ನು ಆಧುನೀಕರಿಸಲಾಗುವುದು" ಎಂದು ಈ ದಾಖಲೆ ಹೇಳುತ್ತದೆ. ಇದರ ಅಡಿಯಲ್ಲಿ, ದಾಖಲೆಗಳಿಲ್ಲದ ಐದು ಲಕ್ಷಕ್ಕೂ ಹೆಚ್ಚು ಭಾರತೀಯರು ಸೇರಿದಂತೆ ಸುಮಾರು 10 ಮಿಲಿಯನ್ ವಲಸಿಗರಿಗೆ ಯುಎಸ್ ಪೌರತ್ವ ನೀಡಲು ರೋಡ ಮ್ಯಾಪ್  ಸಿದ್ಧಪಡಿಸಲಾಗುತ್ತದೆ ಎನ್ನಲಾಗಿದೆ.


ಇದನ್ನು ಓದಿ- ಜೋ ಬೈಡನ್ ಹಾಗೂ ಕಮಲಾ ಹ್ಯಾರಿಸ್ ಗೆ ಅಭಿನಂದನೆ ಸಲ್ಲಿಸಿದ PM Modi ಹೇಳಿದ್ದೇನು?


ದಾಖಲೆಯಲ್ಲಿ ಉಲ್ಲೇಖಿಸಿರುವಂತೆ  "ಅವರು ಅಮೆರಿಕದಲ್ಲಿ ವಾರ್ಷಿಕವಾಗಿ 1,25,000 ನಿರಾಶ್ರಿತರನ್ನು ಪ್ರವೇಶಿಸುವ ಗುರಿಯನ್ನು ಹೊಂದಿದ್ದಾರೆ." ಇದಲ್ಲದೆ, ಅವರು ವಾರ್ಷಿಕವಾಗಿ ಕನಿಷ್ಠ 95,000 ನಿರಾಶ್ರಿತರನ್ನು ದೇಶಕ್ಕೆ ಪ್ರವೇಶಿಸಲು ಕಾಂಗ್ರೆಸ್ ಜೊತೆ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ.