US President : `5 ವರ್ಷದಲ್ಲಿ ಬೈಡನ್ ಸಾಯ್ತಾರೆ, ಕಮಲ ಹ್ಯಾರಿಸ್ US ಅಧ್ಯಕ್ಷೆಯಾಗ್ತಾರೆ` ಸಂಚಲ ಸೃಷ್ಟಿಸಿದ ಹೇಳಿಕೆ!
US Presidential Election 2024: ಜೋ ಬೈಡನ್ 5 ವರ್ಷಗಳಲ್ಲಿ ಸಾಯುತ್ತಾರೆ ಮತ್ತು ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಯುಸ್ ಪ್ರೆಸಿಡೆಂಟ್ ಆಗ್ತಾರೆ ಎಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ನಿಕ್ಕಿ ಹ್ಯಾಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
US Presidential Election 2024: ಅಮೆರಿಕದಲ್ಲಿ ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಬಿಸಿ ಈಗಾಗಲೇ ಕೆಲ ರಾಜಕಾರಣಿಗಳ ತಲೆಯಲ್ಲಿದೆ. ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ನಾಯಕರು ಪರಸ್ಪರ ತೀವ್ರವಾಗಿ ಮಾತಿನ ದಾಳಿ ನಡೆಸುತ್ತಿದ್ದಾರೆ. ಅಧ್ಯಕ್ಷ ಜೋ ಬೈಡನ್ ಆಗಿರಲಿ ಅಥವಾ ಅವರ ಹಿಂದಿನ ಅಧಕ್ಷ್ಯ ಡೊನಾಲ್ಡ್ ಟ್ರಂಪ್ ಆಗಿರಲಿ, ಇಬ್ಬರೂ ಮತ್ತೊಮ್ಮೆ ಚುನಾವಣಾ ಋತುವನ್ನು ಎದುರಿಸಲು ಸಿದ್ಧರಾಗಿದ್ದಾರೆ. ಇಬ್ಬರೂ ತಮ್ಮ ವಯಸ್ಸು ಮತ್ತು ಕೆಲಸದ ಶೈಲಿಗೆ ಸಂಬಂಧಿಸಿದಂತೆ ವಿರೋಧಿಗಳ ಗುರಿಯಲ್ಲಿದ್ದಾರೆ. ಈ ನಡುವೆ ಚುನಾವಣಾ ರೇಸ್ ನಲ್ಲಿ ತೊಡಗಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ನಿಕ್ಕಿ ಹ್ಯಾಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: "ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿದ್ದು ನನ್ನ ಮಗಳಿಂದ" ಎಂದ್ರು ಸುಧಾ ಮೂರ್ತಿ
ಬೈಡನ್ ಸತ್ತರೆ ಅಧ್ಯಕ್ಷರಾಗುವವರು ಯಾರು?
2024 ರ ಚುನಾವಣೆಯಲ್ಲಿ ಜೋ ಬೈಡನ್ ಗೆದ್ದರೆ, ಅವರು 5 ವರ್ಷಗಳಲ್ಲಿ ಸಾಯುತ್ತಾರೆ ಮತ್ತು ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಅವರನ್ನು ದೇಶದ ಅಧ್ಯಕ್ಷರನ್ನಾಗಿ ಮಾಡುತ್ತಾರೆ ಎಂದು ನಿಕ್ಕಿ ಹ್ಯಾಲಿ ಹೇಳಿದ್ದಾರೆ. ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹ್ಯಾಲಿ ಈ ಹೇಳಿಕೆಯನ್ನು ನೀಡಿದ್ದು, ಅದರ ನಂತರ ಅಮೆರಿಕದ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಯಾಗಲಿದೆ ಎಂದಿದ್ದಾರೆ. ಬೈಡನ್ ಎರಡನೇ ಅವಧಿಗೆ ಅಧ್ಯಕ್ಷರಾದರೆ, ಅವರ ಬೆಂಬಲಿಗರು 'ಕಮಲಾ ಹ್ಯಾರಿಸ್ ಅಧ್ಯಕ್ಷರಾಗುತ್ತಾರೆ' ಎಂದು ನಿರೀಕ್ಷಿಸಬೇಕು ಎಂದು ಹ್ಯಾಲಿ ಹೇಳಿದ್ದಾರೆ. ಅವರು 86 ವರ್ಷ ವಯಸ್ಸಿನವರೆಗೂ ಅಧ್ಯಕ್ಷರಾಗಿ ಉಳಿಯುತ್ತಾರೆ ಎಂದು ನಂಬುವುದು ಸಾಧ್ಯವೇ ಇಲ್ಲ ಎಂದು ಹ್ಯಾಲಿ ಹೇಳಿದ್ದಾರೆ.
ತಮ್ಮ ಹಕ್ಕೊತ್ತಾಯದ ಬಗ್ಗೆ ಹ್ಯಾಲಿ ಹೇಳಿದ್ದು ಹೀಗೆ :
ಹ್ಯಾಲಿ ತನ್ನ ಅಭಿಯಾನದಲ್ಲಿ ವಯಸ್ಸು ಮತ್ತು ಸಾಮರ್ಥ್ಯವನ್ನು ಪ್ರಮುಖ ವಿಷಯವನ್ನಾಗಿ ಮಾಡಿಕೊಂಡಿದ್ದಾರೆ. 75 ವರ್ಷ ಮೇಲ್ಪಟ್ಟ ನಾಯಕರ ಮಾನಸಿಕ ಸಾಮರ್ಥ್ಯವನ್ನು ಪರೀಕ್ಷಿಸಬೇಕು ಎಂದು ಹ್ಯಾಲಿ ಹೇಳುತ್ತಾರೆ.
ಇದನ್ನೂ ಓದಿ: America ಹೋಗುವ ಕನಸು ಕಾಣುತ್ತಿರುವವರಿಗೆ ಒಂದು ಸಿಹಿ ಸುದ್ದಿ, 10 ಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಈ ಬಾರಿ ವೀಸಾ ಸಿಗಲಿದೆ
ಬೈಡನ್ ಈ ಬಗ್ಗೆ ಏನು ಹೇಳಿದರು?
ಮತ್ತೊಂದೆಡೆ, ಬೈಡನ್ ತನ್ನ ವಯಸ್ಸಿಗೆ ಸಂಬಂಧಿಸಿದ ಕಳವಳಗಳನ್ನು ತಳ್ಳಿಹಾಕಿದ್ದಾರೆ. ಅತಾವು ಆರೋಗ್ಯವಂತರಾಗಿರುವುದಾಗಿ ಬೈಡನ್ ಹೇಳಿದ್ದಾರೆ. ಶ್ವೇತಭವನವು ಅವರನ್ನು ಸಕ್ರಿಯ ಮತ್ತು ಫಿಟ್ ಆಗಿ ಕಾಣುವಂತೆ ಮಾಡಲು ಶ್ರಮಿಸುತ್ತಿದೆ. ಅವರ ಪ್ರಯಾಣದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ ಮತ್ತು ಅವರು ಜಾಗಿಂಗ್ ಮಾಡುತ್ತಿರುವ ವೀಡಿಯೊಗಳನ್ನು ಸಹ ಬಿಡುಗಡೆ ಮಾಡಲಾಗುತ್ತಿದೆ. ವಾಸ್ತವವಾಗಿ, ಅವರು ಕೆಲವೊಮ್ಮೆ ಕುಂಟುತ್ತಾ ನಡೆಯುತ್ತಾರೆ, ಕೆಲವು ದಿನಗಳ ಹಿಂದೆ ಅವರು ಮೆಟ್ಟಿಲುಗಳನ್ನು ಹತ್ತುವಾಗ ಜಾರಿಬಿದ್ದರು ಆ ಬಳಿಕ ಅವರ ವಯಸ್ಸು ಮತ್ತು ಫಿಟ್ನೆಸ್ ಬಗ್ಗೆ ಪ್ರಶ್ನೆಗಳು ಕೇಳಲಾರಂಭಿಸಿದವು.
ಕೆಲವು ಡೆಮಾಕ್ರಟಿಕ್ ನಾಯಕರು ಬೈಡನ್ ಅವರ ವಯಸ್ಸು ಮತ್ತು ಕ್ಷೀಣಿಸುತ್ತಿರುವ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆ ಬಳಿಕ ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸನ್ ಯೆಲ್ ಸುದ್ದಿಗೋಷ್ಠಿಯಲ್ಲಿ, ಬೈಡನ್ ವಯಸ್ಸು ಕೇವಲ ಒಂದು ಸಂಖ್ಯೆ. ಅದು ಅವರ ಕೆಲಸಕ್ಕೆ ಅಡ್ಡಿಯಾಗಲಾರದರದು ಎಂದು ಹೇಳಿದರು.
ಇದನ್ನೂ ಓದಿ: Sudan Crisis : ಇಬ್ಬರು ಜನರಲ್‌ಗಳ ನಡುವಿನ ಯುದ್ದದಲ್ಲಿ ಹೊತ್ತಿ ಉರಿಯುತ್ತಿದೆ ಸುಡಾನ್ ! 180 ಕ್ಕೂ ಹೆಚ್ಚು ಮಂದಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.