ನ್ಯೂಯಾರ್ಕ್: ದೇಶದ ಹಲವೆಡೆ ಡೆಲ್ಟಾ ರೂಪಾಂತರಿ ಕೊರೊನಾವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು, ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳುವ ಬಗ್ಗೆ ಯೋಚಿಸಬೇಕಾಗಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬಿಡೆನ್ (Joe Biden) ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ದೇಶದಲ್ಲಿ ಕೊರೊನಾ ಲಸಿಕೆ (Corona Vaccine) ನೀಡುವ ಕಾರ್ಯ ಸಮರೋಪಾದಿಯಲ್ಲಿ ಸಾಗುತ್ತಿದೆ. ಹೊಸ ರೂಪಾಂತರಿ ಡೆಲ್ಟಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ದೇಶದ ಪ್ರತಿಯೊಬ್ಬ ಯುವಕರು ಕೂಡ ತಮ್ಮ ರಕ್ಷಣೆಗಾಗಿ ಕೊರೊನಾ ಲಸಿಕೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕೆಂದು ಅಮೆರಿಕದ ಅಧ್ಯಕ್ಷ ಜೋ ಬಿಡೆನ್ (Joe Biden)  ಸಲಹೆ ನೀಡಿದ್ದಾರೆ.


ಈ ವಾರಾಂತ್ಯದ ವೇಳೆಗೆ ಅಮೆರಿಕವು ಎಲ್ಲ 160 ಮಿಲಿಯನ್ ಜನರಿಗೆ ಲಸಿಕೆ ನೀಡುವ ಗುರಿಯನ್ನು ತಲುಪಲಿದೆ. ಕಳೆದ ಮಾರ್ಚ್ ನಲ್ಲಿ ನಾವು ಈ ಗುರಿಯನ್ನು ರೂಪಿಸಿದ್ದೆವು. ಇದೀಗ ಈ ವಾರಾಂತ್ಯದಲ್ಲಿ ನಾವು ಈ ಗುರಿಯನ್ನು ಸಾಧಿಸಲಿದ್ದೇವೆ. ನಾವು ಅಧಿಕಾರ ವಹಿಸಿಕೊಂಡಾಗ ಕೇವಲ 3 ಮಿಲಿಯನ್ ಜನರಷ್ಟೇ ಲಸಿಕೆ ಪಡೆದುಕೊಂಡಿದ್ದರು. ಇದೀಗ ದೇಶದ ಎಲ್ಲ 160 ಮಿಲಿಯನ್ ಜನರು ಕೂಡ ಲಸಿಕೆ ಪಡೆದುಕೊಳ್ಳಲಿದ್ದಾರೆ ಎಂದು ಯುಎಸ್ ಅಧ್ಯಕ್ಷರು ಹರ್ಷ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ- Corona Third Wave: ಕೆಲವೇ ದಿನಗಳಲ್ಲಿ ಭಾರತಕ್ಕೆ ಲಗ್ಗೆ ಇಡಲಿದೆ ಕರೋನಾ ಮೂರನೇ ತರಂಗ!


ಅಮೆರಿಕದ ಯುವಕರು ಲಸಿಕೆ ಪಡೆಯುವ ವಿಚಾರವಾಗಿ ಎರಡೆರಡು ಬಾರಿ ಯೋಚಿಸಬೇಕು. ಕೊರೊನಾ (Coronavirus) ಮಹಾಮಾರಿಯಿಂದ ನಿಮ್ಮ ಜೀವ ಉಳಿಸಿಕೊಳ್ಳಬೇಕಾದರೆ ಮೊದಲು ಲಸಿಕೆ ಪಡೆದುಕೊಳ್ಳಬೇಕೆಂದು ವೈಟ್ ಹೌಸ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಜೋ ಬಿಡೆನ್ ಮನವಿ ಮಾಡಿಕೊಂಡಿದ್ದಾರೆ.


ಜುಲೈ 4ಕ್ಕೆ ಬಿಡೆನ್ ಸರ್ಕಾರ ದೇಶದ ಶೇ.70ರಷ್ಟು ಜನರಿಗೆ ಲಸಿಕೆ ನೀಡುವ ಗುರಿ ಹೊಂದಿತ್ತು. ಆದರೆ ಲಸಿಕೆ ಕೊರತೆಯಿಂದ ಆ ಗುರಿಯನ್ನು ತಲುಪಲು ಸಾಧ್ಯವಾಗಿರಲಿಲ್ಲ. ಶೇ.67ರಷ್ಟು ವಯಸ್ಕ ಅಮೆರಿಕನ್ನರು ಮೊದಲ ಡೋಸ್ ಅನ್ನು ಪಡೆದುಕೊಂಡಿದ್ದು, ಇದುವರೆಗೆ 157 ಮಿಲಿಯನ್ ಜನರು ಲಸಿಕೆ ಪಡೆದುಕೊಂಡಿದ್ದಾರೆ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಮಾಹಿತಿ ನೀಡಿದೆ.   


ದೇಶದಲ್ಲಿ ಇನ್ನು ಲಕ್ಷಾಂತರ ಜನರು ಲಸಿಕೆಯನ್ನು ಪಡೆದುಕೊಳ್ಳಬೇಕಾಗಿದೆ. ಡೆಲ್ಟಾ ರೂಪಾಂತರಿ ವೈರಸ್ ಆಕ್ರಮಣ ಹೆಚ್ಚಾಗಿರುವುದರಿಂದ ಲಕ್ಷಾಂತರ ಜನರು ಸಂಕಷ್ಟದಲ್ಲಿದ್ದಾರೆ. ಸಾವಿರಾರು ಕುಟುಂಬಗಳು ಇನ್ನೂ ವೈರಸ್ ನ ಭೀತಿಯಲ್ಲಿವೆ. ಹೀಗಾಗಿ ಜೀವರಕ್ಷಣೆಗಾಗಿ ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳುವುದು ಅತ್ಯಗತ್ಯವೆಂದು ಬಿಡೆನ್ ಸಲಹೆ ನೀಡಿದ್ದಾರೆ.


ಇದನ್ನೂ ಓದಿ- Covid-19 RT-PCR Testing: ಇನ್ಮುಂದೆ ಕೇವಲ ರೂ.299 ಕ್ಕೆ RT-PCR ಟೆಸ್ಟ್ ಮಾಡಿಸಬಹುದು


ದೇಶದ ಪ್ರತಿಯೊಬ್ಬ ಪ್ರಜೆಯನ್ನು ರಕ್ಷಿಸುವುದು ನಮ್ಮ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಜನರ ಆರೋಗ್ಯಕ್ಕೆ ಒತ್ತು ನೀಡಿರುವ ನಮ್ಮ ಸರ್ಕಾರ ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ತೆಗೆದುಕೊಳ್ಳುತ್ತಿದೆ. ಲಸಿಕೆಯನ್ನು (Corona Vaccine) ಪಡೆದುಕೊಳ್ಳುವ ಮೂಲಕ ನಿಮ್ಮನ್ನು, ನಿಮ್ಮ ಕುಟುಂಬವನ್ನು ಮತ್ತು ನಿಮ್ಮ ಪ್ರೀತಿ-ಪಾತ್ರರನ್ನು ರಕ್ಷಿಸುವ ಮಹತ್ತರ ಜವಾಬ್ದಾರಿ ನಿಮ್ಮ ಮೇಲಿದೆ. ಹೀಗಾಗಿ ದೇಶದ ಪ್ರತಿಯೊಬ್ಬ ಪ್ರಜೆಯೂ ಕೊರೊನಾ ಮಹಾಮಾರಿಯನ್ನು ಹೊಡೆದೊಡಿಸಲು ಸರ್ಕಾರದ ಜೊತೆ ಕೈಜೋಡಿಸಬೇಕೆಂದು ಬಿಡೆನ್ ದೇಶದ ಜನರಲ್ಲಿ ಮನವಿ ಮಾಡಿದ್ದಾರೆ.


ದೇಶದ ಪ್ರತಿಯೊಂದು ಮೂಲೆಯಲ್ಲಿಯೂ ಆರೋಗ್ಯ ಕಾರ್ಯಕರ್ತರು ಜನರ ರಕ್ಷಣೆಗಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪ್ರತಿದಿನ ಲಸಿಕೆ ನೀಡುವ ಕಾರ್ಯ ನಡೆಯುತ್ತಿದೆ. ಹೀಗಾಗಿ ಪ್ರತಿಯೊಬ್ಬರೂ ತಪ್ಪದೆ ಲಸಿಕೆ ಪಡೆದುಕೊಳ್ಳುವ ಮೂಲಕ ಕೊರೊನಾ ವೈರಸ್ ಅನ್ನು ಸೋಲಿಸಬೇಕೆಂದು ಅವರು ಕರೆ ನೀಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.