Covid-19 RT-PCR Testing - ಫ್ರಾನ್ಸ್ ಮೂಲದ ಕಂಪನಿ PathStore ಭಾರತದಲ್ಲಿ ಕೇವಲ ರೂ.299 ರೂ. ಬೆಲೆಗೆ ತನ್ನ Covid-19 RT-PCR Testing ಅನ್ನು ಬಿಡುಗಡೆ ಮಾಡಿರುವುದಾಗಿ ಘೋಷಿಸಿದೆ. ದೇಶಾದ್ಯಂತ ಕೊವಿಡ್-19 ಮೂರನೇ ಅಲೆಯ ಸಾಧ್ಯತೆಗಳ (Coronavirus Third Wave) ಹಿನ್ನೆಲೆ, ಅಗ್ಗದ ಬೆಲೆಯ ಈ ಟೆಸ್ಟಿಂಗ್ ಜನರಿಗೆ ತುಂಬಾ ಸಹಾಯ ಒದಗಿಸಲಿದೆ. ಇದರಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ಟೆಸ್ಟಿಂಗ್ ಪ್ರಕ್ರಿಯೆಯನ್ನು ನಡೆಸಬಹುದು. ಈ ಕುರಿತು ಹೇಳಿಕೆ ನೀಡಿರುವ ಕಂಪನಿ, ಈ ಅಗ್ಗದ ಬೆಲೆಯ ಟೆಸ್ಟ್ ಪ್ರವಾಸೋದ್ಯಮ, ಔದ್ಯೋಗಿಕ ಹಾಗೂ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅನುಕೂಲಕರವಾಗಲಿದೆ ಎಂದು ಹೇಳಿದೆ.
ಈ ಕುರಿತು ಹೇಳಿದೆ ನೀಡಿರುವ GeneStore ಕಂಪನಿಯ ಗ್ಲೋಬಲ್ ಕಾರ್ಯನಿರ್ವಾಹಕ ಅಧಿಕಾರಿ ಅನುಭವ ಅನೇಶ್, ಆರ್ಥಿಕವಾಗಿ ಹಿಂದುಳಿದ ಜನರಿಗೆ RT-PCR ಪರೀಕ್ಷೆಯ ವೆಚ್ಚವು COVID-19 ಡಯಾಗ್ನೋಸ್ಟಿಕ್ಸ್ ಸೌಲಭ್ಯಗಳನ್ನು ಪಡೆಯಲು ಒಂದು ದೊಡ್ಡ ಅಡೆತಡೆಯಾಗಿದೆ ಎಂದಿದ್ದಾರೆ. PathStoreನ ವಿಶಿಷ್ಟ ಮಿಷನ್ ಮತ್ತು ಸವಾಲು ಅದರ ಪ್ರಯೋಗಾಲಯ ಪರೀಕ್ಷೆ ಮತ್ತು ಗ್ರಾಹಕ ಸೇವೆಯ ಅಂತರರಾಷ್ಟ್ರೀಯ ಗುಣಮಟ್ಟವನ್ನು ಭಾರತದ ಜನಸಂಖ್ಯೆಯ ಶೇಕಡಾ 80 ಕ್ಕಿಂತ ಹೆಚ್ಚು ಜನರಿಗೆ ಪ್ರವೇಶಿಸಬಹುದಾದ ವೆಚ್ಚದಲ್ಲಿ ಒದಗಿಸುವುದಾಗಿದೆ ಎಂದು ಅನೀಶ್ ಹೇಳಿದ್ದಾರೆ. GeneStore ಫ್ರಾನ್ಸ್, PathStoreನ ಮೂಲ ಕಂಪನಿಯಾಗಿದೆ.
ಇದನ್ನೂ ಓದಿ-Central Government Jobs: 2022ರಿಂದ ಸರ್ಕಾರಿ ನೌಕರಿ ಪಡೆಯಲು CET Exam, ಕೇಂದ್ರ ಸರ್ಕಾರದ ಮಹತ್ವದ ಘೋಷಣೆ
ಗುರುಗ್ರಾಮ್ ನಲ್ಲಿ ದೊಡ್ಡ ಲ್ಯಾಬ್ ನಿರ್ಮಾಣ
PathStore ಈ ಪರೀಕ್ಷೆಗಳನ್ನು ಮುಂಬರುವ ಒಂದರಿಂದ ಮೂರು ತಿಂಗಳಲ್ಲಿ ಎಲ್ಲಾ ಪ್ರಮುಖ ಕೋವಿಡ್ -19 ಪೀಡಿತ ರಾಜ್ಯಗಳಿಗೆ ವಿಸ್ತರಿಸಲಿದೆ ಮತ್ತು ಭಾರತದಾದ್ಯಂತ RT-PCR ಮಾದರಿ ಸಂಗ್ರಹಕ್ಕಾಗಿ 2 ಸಾವಿರಕ್ಕೂ ಹೆಚ್ಚು ವೈದ್ಯಕೀಯ ಪ್ರತಿನಿಧಿಗಳನ್ನು ತೊಡಗಿಸಿಕೊಳ್ಳಲಿದೆ ಎಂದು ಅನೀಶ್ ಮಾಹಿತಿ ನೀಡಿದ್ದಾರೆ. ಗುರುಗ್ರಾಮ್ನಲ್ಲಿ ಕಂಪನಿಯು ದೊಡ್ಡ RT-PCR ಮತ್ತು ಜೈವಿಕ ಸುರಕ್ಷತಾ (Bio-Safety) ಪ್ರಯೋಗಾಲಯವನ್ನು ಸ್ಥಾಪಿಸಿದೆ, ಇದು ದಿನಕ್ಕೆ ಒಂದು ಲಕ್ಷ ಮಾದರಿಗಳನ್ನು ಪರೀಕ್ಷಿಸುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ-ಕೇಂದ್ರ ಶಿಕ್ಷಣ ಸಚಿವರಿಂದ JEE Main Exam 3ನೇ ಮತ್ತು 4ನೇ ಹಂತಗಳ ದಿನಾಂಕ ಘೋಷಣೆ
ಕಳೆದ ಮೇ ತಿಂಗಳಿನಲ್ಲಿ ICMR ಈ ಹೋಮ್ ಟೆಸ್ಟಿಂಗ್ ಕಿಟ್ ಗೆ ಅನುಮೋದನೆ ನೀಡಿತ್ತು. ಈ ಕಿಟ್ ಮೂಲಕ ಮನೆಯಿಂದಲೇ ಮೂಗಿನಿಂದ ಸ್ಯಾಂಪಲ್ ಪಡೆಯಬಹುದು. ಈ ಹೊಸ ಟೆಸ್ಟಿಂಗ್ ಕಿಟ್ ಕುರಿತು ICMR ನೂತನ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಿದೆ. ಹೋಮ್ ಟೆಸ್ಟಿಂಗ್ ಕೇವಲ ಲಕ್ಷಣವುಳ್ಳ ರೋಗಿಗಳಿಗೆ ಮಾತ್ರವೇ ಸೀಮಿತವಾಗಿದೆ ಎಂದು ICMR ತನ್ನ ಮಾರ್ಗಸೂಚಿಗಳಲ್ಲಿ ತಿಳಿಸಿದೆ. ಲ್ಯಾಬ್ ನಲ್ಲಿ ಕನ್ಫರ್ಮ್ ಆಗಿರುವ ರೋಗಿಗಳ ನೇರ ಸಂಪರ್ಕಕ್ಕೆ ಬಂದವರು ಕೂಡ ಇದನ್ನು ಬಳಕೆ ಮಾಡಬಹುದು. ಹೋಂ ಟೆಸ್ಟಿಂಗ್ ಗಾಗಿ ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಸ್ಟೋರ್ ನಿಂದ ಮೊಬೈಲ್ ಆಪ್ ಡೌನ್ ಲೋಡ್ ಮಾಡಬೇಕಾಗಲಿದೆ. ಮೊಬೈಲ್ ಆಪ್ ಮೂಲಕವೇ ಧನಾತ್ಮಕ ಹಾಗೂ ಋಣಾತ್ಮಕ ವರದಿ ಸಿಗಲಿದೆ.
ಇದನ್ನೂ ಓದಿ-GPF Interest Rate: ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, GPF ಹೊಸ ಬಡ್ಡಿದರಗಳು ಪ್ರಕಟ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.