ನವದೆಹಲಿ: ಭಾರತದ ಖ್ಯಾತ ಸರೋದ್ ಮಾಂತ್ರಿಕ ಅಮ್ಜದ್ ಅಲಿ ಖಾನ್ ಅವರು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವ ಸಂಸ್ಥೆಯ ದಿನದಂದು ಸಂಗೀತ ಕಚೇರಿ ಮೂಲಕ ನೆರೆದಿದ್ದವರನ್ನು ಮಂತ್ರ ಮುಗ್ದರನ್ನಾಗಿಸಿದರು.


COMMERCIAL BREAK
SCROLL TO CONTINUE READING

ಸರೋದ್ ಸಂಗೀತದ ಮೂಲಕ ಇಡೀ ಜಗತ್ತಿನಲ್ಲಿ ತಮ್ಮದೇ ಆದ ಪ್ರಾಮುಖ್ಯತೆಯನ್ನು ಗಳಿಸಿರುವ ಅಮ್ಜದ್ ಅಲಿ ಖಾನ್ ತಮ್ಮ ಪುತ್ರರಾದ ಅಮಾನ್ ಅಲಿ ಬಂಗಾಶ್ ಮತ್ತು ಅಯಾನ್ ಅಲಿ ಬಂಗಾಶ್ ಅವರು ನಿರಾಶ್ರೀತರ ಆರ್ಕೆಸ್ಟ್ರಾ ಪ್ರಾಜೆಕ್ಟನೊಂದಿಗೆ ಪ್ರಾರಂಭವಾದ ವಾರ್ಷಿಕ ಸಂಗೀತ ಕಚೇರಿಯಲ್ಲಿ ಮಹಾತ್ಮಾ ಗಾಂಧಿಯವರಿಗೆ ಗೌರವ ಅರ್ಪಿಸಿದರು. ಈ ವರ್ಷದ ಪ್ರಮುಖ ಮೊಟ್ಟೊ ಶಾಂತಿ ಮತ್ತು ಅಹಿಂಸೆ ಸಂಪ್ರದಾಯಗಳು ಎನ್ನುವ ಹೆಸರಿನಲ್ಲಿ ಕಾರ್ಯಕ್ರಮ ನಡೆದವು.



ಈ ಸಮಾರಂಭದಲ್ಲಿ ಮಾತನಾಡಿದ 73 ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆ ಅಧ್ಯಕ್ಷ ಮಾರಿಯಾ ಫೆರ್ನಂದಾ ಎಸ್ಪಿನೊಸಾ ಗಾರ್ಸಸ್, "ಈ ವರ್ಷದ ಥೀಮ್ ನ್ನು ಆಯ್ಕೆ ಮಾಡಲು ನೆರವಾದ ಭಾರತದ ಖಾಯಂ ಮಿಷನ್ ಗೆ ನನ್ನ ಧನ್ಯವಾದಗಳು ಇದು ಒಂದು ಸುಂದರ ತತ್ವ ಮತ್ತು ಈ ವರ್ಷಕ್ಕೆ ಸೂಕ್ತವಾದ ಥೀಮ್ ಎಂದು ತಿಳಿಸಿದರು.


ವಿಶ್ವಸಂಸ್ಥೆಯಲ್ಲಿ ಭಾರತದ ಯು.ಎನ್. ಪ್ರತಿನಿಧಿಯಾಗಿರುವ ಸೈಯದ್ ಅಕ್ಬರುದ್ದೀನ್ ತನ್ನ ಟ್ವಿಟರ್ ಖಾತೆಯಲ್ಲಿ ಈಗ ಈ ಸಂಗೀತ ಕಚೇರಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ.1948ರಿಂದ ಅಕ್ಟೋಬರ್ 24 ರಂದು ವಿಶ್ವಸಂಸ್ಥೆಯ ದಿನವಾಗಿ ಆಚರಿಸಲಾಗುತ್ತದೆ.