Vaccine Mix And Match Study: Spain ನಲ್ಲಿ ಅಸ್ಟ್ರಾಜೆನಿಕಾ ಲಸಿಕೆಯ ಮೊದಲ ಡೋಸ್ ಪಡೆದವರಿಗೆ ಫೈಸರ್ ಲಸಿಕೆಯ ಎರಡನೇ ಪ್ರಮಾಣ! ಕಾರಣ ಏನು ಗೊತ್ತಾ?
Vaccine Mix And Match Study - ಸ್ಪೇನ್ ನಲ್ಲಿ ಅಸ್ಟ್ರಾಜೆನಿಕಾ ವ್ಯಾಕ್ಸಿನ್ ನ ಮೊದಲ ಡೋಸ್ ನೀಡಿದವರಿಗೆ ಫೈಜರ್ ಲಸಿಕೆಯನ್ನು ಎರಡನೇ ಡೋಸ್ ರೂಪದಲ್ಲಿ ನೀಡಲಾಗುವುದು. ಅಲ್ಲಿನ ಆರೋಗ್ಯ ಸಚಿವರ ಈ ಪ್ರಸ್ತಾವನೆಗೆ ಅಲ್ಲಿನ ಜನ ಆರೋಗ್ಯ ಆಯೋಗ ಅನುಮೊಂದನೆ ನೀಡಿದೆ.
Vaccine Mix And Match Study - ಸ್ಪೇನ್ ನಲ್ಲಿ ಅಸ್ಟ್ರಾಜೆನಿಕಾ ವ್ಯಾಕ್ಸಿನ್ ನ ಮೊದಲ ಡೋಸ್ ನೀಡಿದವರಿಗೆ ಫೈಜರ್ ಲಸಿಕೆಯನ್ನು ಎರಡನೇ ಡೋಸ್ ರೂಪದಲ್ಲಿ ನೀಡಲಾಗುವುದು. ಅಲ್ಲಿನ ಆರೋಗ್ಯ ಸಚಿವರ ಈ ಪ್ರಸ್ತಾವನೆಗೆ ಅಲ್ಲಿನ ಜನ ಆರೋಗ್ಯ ಆಯೋಗ ಅನುಮೊಂದನೆ ನೀಡಿದೆ. ಇದರ ಅಡಿಯಲ್ಲಿ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮತ್ತು ಅಸ್ಟ್ರಾಜೆನಿಕಾ ಲಸಿಕೆಯ (AstraZeneca Vaccine) ಮೊದಲ ಪ್ರಮಾಣ ಪಡೆದ ಜನರಿಗೆ ಎರಡನೇ ಡೋಸ್ ಫೈಜರ್ ಲಸಿಕೆ ನೀಡಲಾಗುವುದು ಎನ್ನಲಾಗಿದೆ. ಸ್ಪೇನ್ ನ ಪ್ರಮುಖ ನ್ಯೂಸ್ ಪೇಪರ್ EI Pais ಮಂಗಳವಾರ ಮೂಲಗಳಿಂದ ಈ ವರದಿ ಬಿತ್ತರಿಸಿದೆ.
ಸರ್ಕಾರದ ಈ ಪ್ರಸ್ತಾವನೆಯ ಪ್ರಭಾವ ಸುಮಾರು 15 ಲಕ್ಷಕ್ಕೂ ಅಧಿಕ ಜನರ ಮೇಲೆ ಬೀಳಲಿದೆ. ಈ ಜನರು ಸರ್ಕಾರದ ವತಿಯಿಂದ ಅಸ್ಟ್ರಾಜೆನಿಕಾ ಲಸಿಕೆಯ ಮೇಲೆ ಬ್ಯಾನ್ ಘೋಷಿಸುವ ಮುನ್ನ ಲಸಿಕೆಯ ಮೊದಲನೇ ಡೋಸ್ ಪಡೆದುಕೊಂಡಿದ್ದರು. ಸ್ಪೆನ್ಸ್ ನಲ್ಲಿ ಹೆಚ್ಚಾದ ರಕ್ತಹೆಪ್ಪುಗಟ್ಟುವಿಕೆಯ ಪ್ರಕರಣಗಳ ಹಿನ್ನೆಲೆ 60 ವರ್ಷಕ್ಕಿಂತ ಕಡಿಮೆ ವಯಸ್ಸು ಇರುವವರಿಗೆ ವ್ಯಾಕ್ಸಿನ್ ನ ಬಳಕೆಯನ್ನು ನಿಷೇಧಿಸಲಾಗಿತ್ತು. ಕಾರ್ಲೋಸ್ III ಹೆಲ್ತ್ ಇನ್ಸ್ಟಿಟ್ಯೂಟ್ ವತಿಯಿಂದ ನಡೆಸಲಾಗಿರುವ ಅಧ್ಯಯನದ ಬಳಿಕ ಈ ಹೆಜ್ಜೆಯನ್ನು ಇಟ್ಟಿದೆ. ಈ ರೀತಿ ವ್ಯಾಕ್ಸಿನ್ ನ ಮಿಶ್ರಣ ಸುರಕ್ಷಿತವಾಗಿದ್ದು, ಮತ್ತಷ್ಟು ಪರಿಣಾಮಕಾರಿಯಾಗಿದೆ ಎಂದು ಅಧ್ಯಯನ ವರದಿ ಹೇಳಿದೆ.
ಆಕ್ಸ್ಫರ್ಡ್-ಅಸ್ಟ್ರಾಜೆನಿಕಾ (Oxford-AstraZeneca Vaccine) ಮೊದಲ ಲಸಿಕೆಯ ಬಳಿಕ ಫೈಜರ್ ನ mRNA ಕೊವಿಡ್-19 ವ್ಯಾಕ್ಸಿನ್ (Pfizer Vaccine) ನ ಎರಡನೆಯ ಡೋಸ್ ನೀಡಬಹುದಾಗಿದೆ ಎಂದು ಅಧ್ಯಯನ ತಜ್ಞರು ಹೇಳಿದ್ದಾರೆ. ಇದು ತುಂಬಾ ಸುರಕ್ಷಿತ ಮತ್ತು ಪ್ರಭಾವಶಾಲಿಯಾಗಿದೆ. ಆರಂಭಿಕ ಫಲಿತಾಂಶಗಳ ಪ್ರಕಾರ, ಮೊದಲು ಅಸ್ಟ್ರಾಜೆನಿಕಾ ವ್ಯಾಕ್ಸಿನ್ ಹಾಕಿಸಿಕೊಂಡು ನಂತರ ಎರಡನೇ ಡೋಸ್ ರೂಪದಲ್ಲಿ ಫೈಜರ್ ಲಸಿಕೆ ಪಡೆದ ಜನರ ರಕ್ತದಲ್ಲಿ IgG ಆಂಟಿಬಾಡಿಗಳು ಶೇ.30 ರಿಂದ ಶೇ.40ರಷ್ಟು ಹೆಚ್ಚಾಗಿವೆ ಎಂದು ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ-CoWIN ಅಪ್ಲಿಕೇಶನ್‌ನಲ್ಲಿ ನೋಂದಣಿ ಇನ್ನಷ್ಟು ಸುಲಭ, ಶೀಘ್ರದಲ್ಲೇ ಸಿಗಲಿದೆ ಈ ಸೌಲಭ್ಯ
ಈ ಟ್ರಯಲ್ ನಲ್ಲಿ ಶಾಮೀಲಾಗಿದ್ದ ತಜ್ಞರ ಪ್ರಕಾರ ಅಸ್ಟ್ರಾಜೆನಿಕಾ ಲಸಿಕೆಯ (Corona Vaccine)ಎರಡನೇ ಡೋಸ್ ಆಂಟಿ ಬಾಡಿಗಳನ್ನು ಡಬಲ್ ಮಾಡುತ್ತದೆ. ಆದರೆ ಒಂದು ವೇಳೆ ಫೈಜರ್ ಲಸಿಕೆಯನ್ನು (Covid-19 Vaccine) ಎರಡನೇ ಡೋಸ್ ರೂಪದಲ್ಲಿ ಪಡೆದರೆ, ಆಂಟಿಬಾಡಿಗಳು ಹಲವು ಪಟ್ಟು ಹೆಚ್ಚಾಗುತ್ತವೆ ಎಂದು ತಜ್ಞರು ಹೇಳಿದ್ದಾರೆ. 18-59 ವಯಸ್ಸಿನ ಮತ್ತು ಅಸ್ಟ್ರಾಜೆನಿಕಾ ವ್ಯಾಕ್ಸಿನ್ ಹಾಕಿಸಿಕೊಂಡ ಸುಮಾರು 670 ಜನರ ಮೇಲೆ ಈ ಅಧ್ಯಯನ ನಡೆಸಲಾಗಿದೆ. ಇವರಲ್ಲಿ ಸುಮಾರು 450 ಜನರಿಗೆ ಎರಡನೇ ಡೋಸ್ ಆಗಿ ಫೈಜರ್ ಲಸಿಕೆ ನೀಡಲಾಗಿದೆ.
ಇದನ್ನೂ ಓದಿ- ಕರೋನಾ ಯುದ್ಧದಲ್ಲಿ ರೆಮ್‌ಡೆಸಿವಿರ್ ಇಂಜೆಕ್ಷನ್ ಪರಿಣಾಮಕಾರಿ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ
ಈ ಕುರಿತು ಹೇಳಿಕೆ ನೀಡಿರುವ ಮತ್ತು ಅಧ್ಯಯನದಲ್ಲಿ ಶಾಮೀಲಾಗಿದ್ದ ವೈದ್ಯ ಡಾ. ಮಾಗ್ದಾಲೇನಾ ಕ್ಯಾಂಪಿನ್ಸ್, 'ಕೇವಲ ಶೇ.1.7 ರಷ್ಟು ಜನರಲ್ಲಿ ಇದರಿಂದ ತಲೆನೋವು, ಸ್ನಾಯು ಸೆಳೆತ ನೋವು, ಸಾಮಾನ್ಯ ಕಸಿವಿಸಿಯಂತಹ ಲಕ್ಷಣಗಳು ಕಂಡು ಬಂದಿವೆ ಮತ್ತು ಈ ಲಕ್ಷಣಗಳು ಗಂಭೀರ ಶ್ರೇಣಿಗೆ ಸೇರುವುದಿಲ್ಲ ' ಎಂದಿದ್ದಾರೆ. ಈ ರೀತಿಯ ಒಂದು ಸಂಶೋಧನೆ ಬ್ರಿಟನ್ ನಲ್ಲಿಯೂ ಕೂಡ ನಡೆಸಲಾಗಿದೆ. ಆದರೆ, ಅಲ್ಲಿ ಮೊದಲ ಡೋಸ್ ರೂಪದಲ್ಲಿ ಫೈಜರ್ ಲಸಿಕೆ ನೀಡಲಾಗಿದ್ದು, ಎರಡನೆಯ ಡೋಸ್ ರೂಪದಲ್ಲಿ ಅಸ್ಟ್ರಾಜೆನಿಕಾ ವ್ಯಾಕ್ಸಿನ್ ನೀಡಲಾಗಿದೆ. ಅಲ್ಲಿ ಬಹುತೇಕ ಜನರಿಗೆ ತಲೆನೋವು ಹಾಗೂ ಚಳಿಯಂತಹ ಲಕ್ಷಣಗಳು ಕಂಡುಬಂದಿವೆ ಎನ್ನಲಾಗಿದೆ.
ಇದನ್ನೂ ಓದಿ- ಬ್ಲ್ಯಾಕ್ ಫಂಗಸ್ ಗೆ AIIMS ನಿಂದ ಚಿಕಿತ್ಸಾ ಮಾರ್ಗಸೂಚಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.