Black Fungus : ಬ್ಲ್ಯಾಕ್ ಫಂಗಸ್ ಗೆ AIIMS ನಿಂದ ಚಿಕಿತ್ಸಾ ಮಾರ್ಗಸೂಚಿ..!

ದೇಶದಲ್ಲಿ ಕರ್ನಾಟಕ, ಉತ್ತರಾಖಂಡ, ತೆಲಂಗಾಣ, ಮಧ್ಯಪ್ರದೇಶ ಮತ್ತು ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಬ್ಲ್ಯಾಕ್ ಫಂಗಸ್ ಸೋಂಕು ಪ್ರಕರಣಗಳು ವರದಿ

Last Updated : May 18, 2021, 12:43 PM IST
  • ಕೋವಿಡ್ ಗಿಂತಲೂ ಹೆಚ್ಚು ಭೀತಿ ಸೃಷ್ಟಿಸಿರುವ 'ಬ್ಲ್ಯಾಕ್ ಫಂಗಸ್'
  • ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಚಿಕಿತ್ಸಾ ವಿಧಾನದ ಮಾರ್ಗ ಸೂಚಿ
  • ಕರ್ನಾಟಕ, ಉತ್ತರಾಖಂಡ, ತೆಲಂಗಾಣ, ಮಧ್ಯಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಈ ಬ್ಲ್ಯಾಕ್ ಫಂಗಸ್
Black Fungus : ಬ್ಲ್ಯಾಕ್ ಫಂಗಸ್ ಗೆ AIIMS ನಿಂದ ಚಿಕಿತ್ಸಾ ಮಾರ್ಗಸೂಚಿ..! title=

ನವದೆಹಲಿ : ಕೋವಿಡ್ ಗಿಂತಲೂ ಹೆಚ್ಚು ಭೀತಿ ಸೃಷ್ಟಿಸಿರುವ 'ಬ್ಲ್ಯಾಕ್ ಫಂಗಸ್' ಸೋಂಕು ಕುರಿತಂತೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಚಿಕಿತ್ಸಾ ವಿಧಾನದ ಮಾರ್ಗ ಸೂಚಿ ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ.

ದೇಶದಲ್ಲಿ ಕರ್ನಾಟಕ, ಉತ್ತರಾಖಂಡ, ತೆಲಂಗಾಣ, ಮಧ್ಯಪ್ರದೇಶ ಮತ್ತು ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಬ್ಲ್ಯಾಕ್ ಫಂಗಸ್ ಸೋಂಕು ಪ್ರಕರಣಗಳು ವರದಿಯಾಗುತ್ತಿದ್ದು, ಈ ಸಂಬಂಧ ಏಮ್ಸ್(All India Institute Of Medical Sciences) ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿದೆ ಎಂದು ಮೂಲಗಳ ಮಾಹಿತಿ ತಿಳಿದು ಬಂದಿದೆ.

ಇದನ್ನೂ ಓದಿ : ಮನೆಯಲ್ಲಿದ್ದುಕೊಂಡೇ ಫಟಾಪಟ್ ನಿಮ್ಮ ಹಳೆಯ ಸ್ಮಾರ್ಟ್‍ಫೋನ್ ಸೇಲ್ ಮಾಡಿ..!

ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲ(Union Health Ministry)ಯ ಮಾಹಿತಿ ನೀಡಿದ್ದು, ಮ್ಯೂಕೋರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರವು ಶಿಲೀಂಧ್ರಗಳ ಸೋಂಕಿನಿಂದ ಉಂಟಾಗುವ ಒಂದು ಸಮಸ್ಯೆಯಾಗಿದ್ದು, ಪರಿಸರದಲ್ಲಿನ ಶಿಲೀಂಧ್ರ ಬೀಜಕಗಳೊಂದಿಗೆ ಸಂಪರ್ಕಕ್ಕೆ ಬರುವ ಮೂಲಕ ಜನರು ಮ್ಯೂಕೋರ್ಮೈಕೋಸಿಸ್ ಸೋಂಕಿಗೆ ತುತ್ತಾಗುತ್ತಾರೆ. ಕಟ್ ಆದ ಚರ್ಮ, ಸುಟ್ಟಗಾಯ, ಇತರೆ ಚರ್ಮದ ಮೂಲಕ ಈ ಸೋಂಕು ದೇಹದ ಒಳಗೆ ಪ್ರವೇಶಿಸುತ್ತದೆ. ಅಲ್ಲದೆ ಗಾಳಿಯ ಮುಖಾಂತರವೂ ಇದು ಹರಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಬಳಿಕ ಇದ ಚರ್ಮದ ಮೇಲೆ ಬೆಳೆದು, ಸೋಂಕಿತರಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎನ್ನಲಾಗಿದೆ.

ಇದನ್ನೂ ಓದಿ : Tauktae Cyclone: ಚಂಡಮಾರುತಕ್ಕೆ ಸಿಲುಕಿದ ಅನೇಕ ದೊಡ್ಡ ಹಡಗುಗಳು, 146 ಜನರ ಜೀವ ಉಳಿಸಿದ ನೌಕಾಪಡೆ

ಕೋವಿಡ್-19(Covid-19) ನಿಂದ ಚೇತರಿಸಿಕೊಳ್ಳುತ್ತಿರುವ ಅಥವಾ ಚೇತರಿಸಿಕೊಂಡ ರೋಗಿಗಳಲ್ಲಿ ಈ ರೋಗವನ್ನು ಕಂಡುಹಿಡಿಯಲಾಗುತ್ತಿದೆ. ಇದಲ್ಲದೆ, ಮಧುಮೇಹ ಮತ್ತು ಅವರ ರೋಗ ನಿರೋಧಕ ಶಕ್ತಿ ಸರಿಯಾಗಿ ಕಾರ್ಯನಿರ್ವಹಿಸದ ಯಾರಾದರೂ ಈ ಸೋಂಕಿಗೆ ತುತ್ತಾಗಬಲ್ಲರು. ಹೆಚ್ಚಾಗಿ ಮಣ್ಣಿನಲ್ಲಿ ಈ ಶಿಲೀಂದ್ರಗಳು ಕಂಡುಬರುತ್ತದೆ. ಅಲ್ಲದೆ ಎಲೆಗಳು, ಕಾಂಪೋಸ್ಟ್ ಮತ್ತು ರಾಶಿಗಳಂತಹ ಕೊಳೆಯುತ್ತಿರುವ ಸಾವಯವ ಪದಾರ್ಥಗಳಲ್ಲಿ ಇದು ಕಂಡುಬರುತ್ತದೆ.

ಇದನ್ನೂ ಓದಿ : Mutual Funds Vs PPF: 10,000 ರೂಪಾಯಿಗಳನ್ನು 2 ಕೋಟಿ ಮಾಡುವುದು ಹೇಗೆ! PPF-ಮ್ಯೂಚುಯಲ್ ಫಂಡ್‌ಗಳಲ್ಲಿ ಯಾವುದು ಉತ್ತಮ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News