ನ್ಯೂಜೆರ್ಸಿ: ಅಮೇರಿಕಾದ ನ್ಯೂಜೆರ್ಸಿಯಲ್ಲಿ ಗುರುವಾರ ಹಣ ಸಾಗಿಸುತ್ತಿದ್ದ ಟ್ರಕ್ನಿಂದ ಇದ್ದಕ್ಕಿದ್ದಂತೆ ನೋಟಿನ ಮಳೆ ಸುರಿದಿದೆ. ಹೆದ್ದಾರಿಯಲ್ಲಿ ಸಾಗುತ್ತಿದ್ದ ಜನರು ರಸ್ತೆ ಮಧ್ಯೆದಲ್ಲೇ ತಮ್ಮ ವಾಹನಗಳನ್ನು ನಿಲ್ಲಿಸಿ ನೋಟುಗಳನ್ನು ತೆಗೆದುಕೊಳ್ಳುತ್ತಿದ್ದರು. ರಥರ್ಫೋರ್ಡ್ ಪೋಲಿಸ್ ಇಲಾಖೆಯು ಈ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಒಂದು ಶಸ್ತ್ರಸಜ್ಜಿತ ಟ್ರಕ್ ಮಾರ್ಗ ಸಂಖ್ಯೆ 3 ರಲ್ಲಿ ಹಾದು ಹೋಗುತ್ತಿರುವಾಗ, ಹಣ ಲೋಡ್ ಮಾಡಲ್ಪಟ್ಟಿದ್ದ ಟ್ರಕ್ ನಲ್ಲಿ ಲಾಕ್ ಸಿಸ್ಟಂನಲ್ಲಿನ ಸಮಸ್ಯೆಯಿಂದಾಗಿ ಅದರ ಡೋರ್ ಸ್ವಲ್ಪ ತೆರೆಯಲ್ಪಟ್ಟಿತು. ಹಾಗಾಗಿ ನೋಟುಗಳು ಗಾಳಿಯಲ್ಲಿ ಹಾರಾಡುವಂತಾಯಿತು. 


COMMERCIAL BREAK
SCROLL TO CONTINUE READING

ಈ ಸಮಯದಲ್ಲಿ ಎಷ್ಟು ಹಣ ಈ ರೀತಿಯಲ್ಲಿ ಗಾಳಿಯಲ್ಲಿ ಹಾರಾಡಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ಆದರೆ ಈ ಸಮಯದಲ್ಲಿ ರಸ್ತೆಯಲ್ಲಿ ತೆಗೆದುಕೊಂಡ ಎಲ್ಲಾ ಹಣವನ್ನು ಹಿಂದಿರುಗಿಸುವಂತೆ ಮನವಿ ಮಾಡಲಾಗಿದೆ.


ಫಾಕ್ಸ್ ನ್ಯೂಸ್ನ ಸುದ್ದಿ ಪ್ರಕಾರ, ಈ ಘಟನೆಯು ನ್ಯೂಯಾರ್ಕ್ನ ಹೊರಗಿನ ಮೆಟ್ಲೈಟ್ ಸ್ಟೇಡಿಯಂ ಸಮೀಪದಲ್ಲಿ ನಡೆದಿದೆ. ಹಣ ಲೋಡ್ ಮಾಡಲ್ಪಟ್ಟಿದ್ದ ಟ್ರಕ್ ನಲ್ಲಿ ಲಾಕ್ ಸಿಸ್ಟಂನಲ್ಲಿನ ಸಮಸ್ಯೆಯಿಂದಾಗಿ ಅದರ ಡೋರ್ ತೆರೆದು ಹಣ ಗಾಳಿಯಲ್ಲಿ ಹಾರಾಡಿದೆ. ಜನರು ರಸ್ತೆ ಮಧ್ಯೆದಲ್ಲೇ ತಮ್ಮ ವಾಹನಗಳನ್ನು ನಿಲ್ಲಿಸಿ ನೋಟುಗಳನ್ನು ತೆಗೆದುಕೊಳ್ಳುತ್ತಿದ್ದರು. ಅದೇ ಸಮಯದಲ್ಲಿ ಹಿಂಬದಿಯಿಂದ ಬರುತ್ತಿದ್ದ ಯಾರೋ ಒಬ್ಬರು ಈ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.