ಕರಾಚಿ: ಪಾಕಿಸ್ತಾನದಲ್ಲಿ ಹಿಂದೆಂದೂ ಕೇಳಿರದ ಘಟನೆಯೊಂದು ನಡೆದಿದೆ. ವಕೀಲರೊಬ್ಬರ ಮೇಲೆ ದಾಳಿ ನಡೆಸಿ, ಕಚ್ಚಿ ಗಾಯಗೊಳಿಸಿದ ತಪ್ಪಿಗೆ ಎರಡು ಜರ್ಮನ್ ಶೆಫರ್ಡ್(German Shepherds)ಸಾಕು ನಾಯಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ವಿಚಿತ್ರವೆನಿಸಿದರೂ ಇದು ನಿಜವಾಗಿಯೂ ನಡೆದಿರುವ ಘಟನೆಯಾಗಿದೆ.


COMMERCIAL BREAK
SCROLL TO CONTINUE READING

ಈ ಘಟನೆ ಪಾಕಿಸ್ತಾನ(Pakistan)ದ ಕರಾಚಿಯಲ್ಲಿ ನಡೆದಿದೆ. ಹಿರಿಯ ವಕೀಲ ಮಿರ್ಜಾ ಅಕ್ತರ್ ಅವರು ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದರು. ಈ ವೇಳೆ ಅವರ ಮೇಲೆ ದಾಳಿ ನಡೆಸಿದ ಎರಡು ಜರ್ಮನ್ ಶೆಫರ್ಡ್ ಶ್ವಾನಗಳು ನಡುರೋಡಿನಲ್ಲೇ ಕಚ್ಚಿ ಗಾಯಗೊಳಿಸಿವೆ. ಹುಮಾಯೂನ್ ಖಾನ್ ಎಂಬುವರಿಗೆ ಸೇರಿದ ಈ ಸಾಕುನಾಯಿಗಳ ದಾಳಿ ನಡೆಸಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.


Iraq: ಇರಾಕ್‌ನ ನಾಸಿರಿಯಾದಲ್ಲಿ COVID-19 ಆಸ್ಪತ್ರೆಯಲ್ಲಿ ಅಗ್ನಿ ಅವಘಡ, 44 ಮೃತ, ಹಲವರಿಗೆ ಗಾಯ


ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ ನಾಯಿಗಳು ವಕೀಲರ ಮೇಲೆರಗಿ ಮನಬಂದಂತೆ ಕಚ್ಚಿವೆ. ಶ್ವಾನಗಳ ದಾಳಿಯಿಂದ ಆಘಾತಗೊಂಡ ಮಿರ್ಜಾ ಅಕ್ತರ್ ಅವುಗಳಿಂದ ಬಿಡಿಸಿಕೊಳ್ಳಲು ಯತ್ನಿಸಿದರೂ ಪ್ರಯೋಜನವಾಗಿಲ್ಲ. ಗಂಭೀರವಾಗಿ ಗಾಯಗೊಂಡ ಅವರು ಸಾಕುನಾಯಿ ಮಾಲೀಕರ ವಿರುದ್ಧ ಹರಿಹಾಯ್ದಿದ್ದಾರೆ. ತಮ್ಮ ಮೇಲೆ ದಾಳಿ ನಡೆಸಿರುವ ನಾಯಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.


ಈ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆದ ಬಳಿಕ ನೆಟಿಜನ್ ಗಳು ಸಾಕುನಾಯಿ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ವಿಶೇಷ ತಳಿಯ ನಾಯಿಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಹೇಗಿರಬೇಕೆಂಬ ತರಬೇತಿಯನ್ನು ನೀಡದ ಮಾಲೀಕರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದರು. ಈ ರೀತಿ ದಾಳಿ ನಡೆಸಿ ಪ್ರಾಣಕ್ಕೆ ಸಂಚಕಾರ ತರುವ ನಾಯಿಗಳನ್ನು ರಸ್ತೆಯಲ್ಲಿ ಬಿಟ್ಟಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಮಾಲೀಕರು ತೋರಿದ ನಿರ್ಲಕ್ಷ್ಯ, ಬೇಜವಾಬ್ದಾರಿತನವು ಬೇರೆಯವರ ಜೀವನಕ್ಕೆ ಅಪಾಯವನ್ನುಂಟು ಮಾಡುತ್ತದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: "ಹಲವಾರು ದೇಶಗಳಲ್ಲಿ ಉಚಿತ ಮತ್ತು ಮುಕ್ತ ಇಂಟರ್ನೆಟ್ ಮೇಲೆ ದಾಳಿ ನಡೆಯುತ್ತಿದೆ"


 ಘಟನೆ ಬಳಿಕ ಸಾಕುನಾಯಿ(Pet Dogs)ಗಳ ಮಾಲೀಕ ಹುಮಾಯೂನ್ ಖಾನ್ ಅವರನ್ನು ಕ್ಷಮಿಸಿದ ವಕೀಲ ಮಿರ್ಜಾ ಅಕ್ತರ್ ಕೆಲವು ಷರತ್ತುಗಳನ್ನು ವಿಧಿಸಿದ್ದರು. ತಮ್ಮ ಮೇಲೆ ಶ್ವಾನಗಳು ದಾಳಿ ನಡೆಸಿದ್ದಕ್ಕೆ ಮಾಲೀಕರು ಬೇಷರತ್ತಾಗಿ ಕ್ಷಮೆಯಾಚಿಸಬೇಕು. ಅಪಾಯಕಾರಿ ಪ್ರವೃತ್ತಿಯುಳ್ಳ ಶ್ವಾನಗಳನ್ನು ಮನೆಯಲ್ಲಿ ಸಾಕಬಾರದು ಮತ್ತು ಶ್ವಾನಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದರು. ಈ ಷರತ್ತುಗಳಿಗೆ ಮಾಲೀಕರು ಒಪ್ಪಿಕೊಂಡಿದ್ದರು.


ಬಳಿಕ ವಕೀಲರ ಮೇಲೆ ದಾಳಿ ನಡೆಸಿದ ಜರ್ಮನ್ ಶೆಫರ್ಡ್ ಶ್ವಾನಗಳಿಗೆ ಪಶುವೈದ್ಯರು ಮರಣದಂಡನೆ ಶಿಕ್ಷೆ(Death Sentence) ವಿಧಿಸಿ ಆದೇಶ ಹೊರಡಿಸಿದರು. ಇದೇ ತಳಿಯ ಅಪಾಯಕಾರಿ ನಾಯಿಗಳು ನಿಮ್ಮ ಮನೆಯಲ್ಲಿದ್ದರೆ ಕೂಡಲೇ ಅವುಗಳನ್ನು ತಮಗೆ ಒಪ್ಪಿಸಬೇಕು. ಸೂಕ್ತ ತರಬೇತಿಯಿಲ್ಲದ ಶ್ವಾನಗಳನ್ನು ಬೀದಿಗೆ ಬಿಡದಂತೆ ಹುಮಾಯೂನ್ ಖಾನ್ಗೆ ನಿರ್ದೇಶಿಸಿದರು.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.