ಬೀಜಿಂಗ್: ಮದುವೆ ಸಂಭ್ರಮದಲ್ಲಿ ಅತ್ಯಾಕರ್ಷಕವಾಗಿ ಕಾಣಬೇಕೆಂಬುದು ಪ್ರತಿಯೊಬ್ಬ ವರಣ ಕನಸಾಗಿರುತ್ತದೆ. ಹೀಗಾಗಿ ಮದುವೆಗೂ ಮುನ್ನಅನೇಕರು ಇನ್ನಿಲ್ಲದ ಸರ್ಕಸ್ ಮಾಡುತ್ತಾರೆ. ಅದೇ ರೀತಿ ತನ್ನ ಮದುವೆ(Marriage)ಗೂ ಮುನ್ನ ವರನೊಬ್ಬ ಬಾಡಿ ಬಿಲ್ಡ್ ಮಾಡಲು ಹೋಗಿ ಜಿಮ್ ಸೇರಿ ದೊಡ್ಡ ಯಡವಟ್ಟು ಮಾಡಿಕೊಂಡಿದ್ದಾನೆ. ಜಿಮ್ ಮಾಡಲು ಹೋಗಿ ಆತ ಮಾಡಿಕೊಂಡಿರುವ ಯಡವಟ್ಟು ಜೀವನಪರ್ಯಂತ ಮರೆಯುವ ಹಾಗಿಲ್ಲ.


COMMERCIAL BREAK
SCROLL TO CONTINUE READING

ಮದುವೆಗೂ ಮುನ್ನ ಬಾಡಿ ಬಿಲ್ಡ್ ಮಾಡಲು ಸಜ್ಜಾದ..!


ಚೀನಾದ ಶೆನ್‌ಜೆನ್(Shenzhen) ಪ್ರಾಂತ್ಯದಲ್ಲಿ ವಾಸಿಸುತ್ತಿರುವ ಅಹುವಾನ್‌ಗೆ 25 ವರ್ಷ. ಈತನ ಮದುವೆಗೆ ದಿನಾಂಕ ನಿಗದಿಯಾಗಿತ್ತು. ಪ್ರೀ ವೆಡ್ಡಿಂಗ್ ಶೂಟ್(Pre-Wedding Shoot) ವೇಳೆ ಆತ ತಾನು ಸ್ಲಿಮ್ ಆಗಿಲ್ಲವೆಂದು ಕೊರಗಿದ್ದಾನೆ. ಸ್ವಲ್ಪ ದಪ್ಪ ಇದ್ದ ಕಾರಣ ಫೋಟೋಗಳು ಸರಿಯಾಗಿ ಬಂದಿಲ್ಲವೆಂದು ಆತ ಅರಿತುಕೊಂಡಿದ್ದಾನೆ. ಆದರೆ ಮದುವೆಯಲ್ಲಿ ತಾನು ಸ್ಲಿಮ್ ಆಗಿ ಸುಂದರವಾಗಿ ಕಾಣಬೇಕೆಂದು ಆತ ನಿರ್ಧರಿಸಿದ್ದಾನೆ. ಹೀಗಾಗಿ ಮದುವೆಗೂ ಕೆಲ ದಿನ ಮುನ್ನ ಬಾಡಿ ಬಿಲ್ಡ್ ಮಾಡಲು ಜಿಮ್ ಸೇರಿದ್ದಾನೆ.


ಇದನ್ನೂ ಓದಿ: ಅಫ್ಘಾನಿಸ್ತಾನದ ನಂಗರ್‌ಹಾರ್ ಮಸೀದಿಯಲ್ಲಿ ಸ್ಫೋಟ, ಕನಿಷ್ಠ 12 ಮಂದಿಗೆ ಗಾಯ


ಜಿಮ್‌ನಲ್ಲಿ ತರಬೇತುದಾರರನ್ನು ನೇಮಿಸಿಕೊಂಡ


ಗ್ಲೋಬಲ್ ಟೈಮ್ಸ್ ವರದಿಯ ಪ್ರಕಾರ, ಅಹುವಾನ್‌(Ahuan)ತಾನು ತ್ವರಿತವಾಗಿ ಬಾಡಿ ಬಿಲ್ಡ್ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದ. ಏಕೆಂದರೆ ಆತನ ಮದುವೆಯ ದಿನಾಂಕ ಹತ್ತಿರವಾಗಿತ್ತು. ಹೀಗಾಗಿ ಆತ ಜಿಮ್‌ನಲ್ಲಿ ವೈಯಕ್ತಿಕ ತರಬೇತುದಾರನನ್ನು ನೇಮಿಸಿಕೊಂಡಿದ್ದಾನೆ. ತರಬೇತುದಾರ ಆತನಿಗೆ ಸ್ಟೀರಾಯ್ಡ್ ಡೋಸ್‌ಗಳ ಜೊತೆಗೆ ಭಾರೀ ತೂಕದ ಬೆಂಚ್ ಪ್ರೆಸ್‌ಗಳನ್ನು ಎತ್ತಲು ಮತ್ತು ಇತರ ವ್ಯಾಯಾಮಗಳನ್ನು ಮಾಡಲು ಸಲಹೆ ನೀಡಿದ್ದ.   


ವ್ಯಾಯಾಮದ ನಂತರ ಹದಗೆಟ್ಟ ಆರೋಗ್ಯ


ಕೆಲವು ದಿನಗಳ ವ್ಯಾಯಾಮ( Gym Exercise)ದ ನಂತರ ಒಂದು ದಿನ ಅಹುವಾನ್‌ ಜಿಮ್‌ನಿಂದ ಹೊರಬಂದಾಗ ಆತನ ಆರೋಗ್ಯ ಸ್ಥಿತಿ ಇದ್ದಕ್ಕಿದ್ದಂತೆ ಹದಗೆಟ್ಟಿತ್ತು. ಆತ ನಿರಂತರವಾಗಿ ವಾಂತಿ ಮಾಡಲು ಶುರು ಮಾಡಿದ್ದ ಮತ್ತು ತಲೆಸುತ್ತು ಬಂದವರಂತೆ ವರ್ತಿಸುತ್ತಿದ್ದ. ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ಇತರರು ತಕ್ಷಣವೇ ಆತನನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು.


ಇದನ್ನೂ ಓದಿ: World's Most Beatuiful Car: ವಿಶ್ವದ ಅತ್ಯಂತ ಸುಂದರ ಕಾರು ಎಂಬ ಹೆಗ್ಗಳಿಕೆಗೆ ಈ ಕಾರು ಪಾತ್ರ, ಭಾರತದ ಮಾರುಕಟ್ಟೆಯಲ್ಲಿ ಇದರ ಬೆಲೆ ಎಷ್ಟು ಗೊತ್ತಾ?


ಅಹುವಾನ್‌ಗೆ ಬ್ರೈನ್ ಸ್ಟ್ರೋಕ್ ಆಗಿತ್ತು


ಜಿಮ್‌ನಲ್ಲಿ ನಿರಂತರ ವ್ಯಾಯಾಮ ಮಾಡಿದ್ದರಿಂದ ಅಹುವಾನ್‌ ಸ್ನಾಯುಗಳು ಒತ್ತಡಕ್ಕೆ ಒಳಗಾಗಿದ್ದವು, ಇದರಿಂದಾಗಿ ಆತ ಬ್ರೈನ್ ಸ್ಟ್ರೋಕ್‌(Brain Stroke)ಗೆ ಒಳಗಾಗಿದ್ದ. ಆತನ ಗಂಭೀರ ಸ್ಥಿತಿಯನ್ನು ಗಮನಿಸಿದ ವೈದ್ಯರು ತಕ್ಷಣವೇ ಶಸ್ತ್ರಚಿಕಿತ್ಸೆಗೆ ನಿರ್ಧರಿಸಿದರು. ಹಲವಾರು ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಆತನ ಜೀವವನ್ನು ಉಳಿಸಲಾಯಿತು.


ಮದುವೆಯನ್ನು 3 ತಿಂಗಳು ಮುಂದೂಡಬೇಕಾಯಿತು


ಈ ಘಟನೆಯಿಂದ ಅಹುವಾನ್‌ ಸುಮಾರು 14 ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಇರಬೇಕಾಯಿತು. ಇದರಿಂದ ಆತ ತನ್ನ ಮದುವೆಯ ದಿನಾಂಕವನ್ನು ಮುಂದೂಡಬೇಕಾಯಿತು. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಆತ ನಿಶ್ಚಿತ ವಧುವಿನೊಂದಿಗೆ 3 ತಿಂಗಳ ಬಳಿಕ ವಿವಾಹವಾಗಿದ್ದಾನೆ. ಇದಾದ ಬಳಿಕ ಆತನ ಜಿಮ್‌ನ ಕಡೆ ತಲೆಯನ್ನೇ ಹಾಕಿಲ್ಲ. ಬಾಡಿ ಬಿಲ್ಡ್ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡ ಅಹುವಾನ್‌ ಗೆ ಪತ್ನಿ ಸೇರಿದಂತೆ ಆತನ ಸಂಬಂಧಿಕರು ಗೇಲಿ ಮಾಡಿದ್ದಾರೆ.


ಜಿಮ್ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ


ಜಿಮ್‌(Gym)ನಲ್ಲಿ ಯಾರೂ ಕೂಡ ಅತಿಯಾಗಿ ವ್ಯಾಯಾಮ ಮಾಡಬಾರದು ಎಂದು ಅಹುವಾನ್‌ಗೆ ಚಿಕಿತ್ಸೆ ನೀಡಿದ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಆರಂಭದಲ್ಲಿ ತಮ್ಮ ಗಾತ್ರ ಮತ್ತು ತೂಕಕ್ಕೆ ಅನುಗುಣವಾಗಿ ಕಡಿಮೆ ತೂಕವನ್ನು ಎತ್ತಬೇಕು. ಅದರ ನಂತರ ನೀವು ಭಾರೀ ತೂಕವನ್ನು ಎತ್ತಲು ಪ್ರಯತ್ನಿಸಬೇಕು. ಕೆಲವೇ ದಿನಗಳಲ್ಲಿ ನಾನು ಬಾಡಿ ಬಿಲ್ಡ್ ಮಾಡುತ್ತೇನೆಂದು ಹೆಚ್ಚು ತೂಕ ಎತ್ತುವುದು ಹಾಗೂ ಹೆಚ್ಚು ಹೆಚ್ಚು ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ.  ವ್ಯಾಯಾಮದ ನಡುವೆ ನಾವು ಆಗಾಗ ದೇಹಕ್ಕೆ ವಿಶ್ರಾಂತಿ ನೀಡಬೇಕು. ಹೀಗೆ ಮಾಡದಿದ್ದರೆ ಹೃದಯಾಘಾತ ಅಥವಾ ಮೆದುಳಿನ ಸ್ಟ್ರೋಕ್ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯ ಸಲಹೆ ನೀಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.