World's Most Beatuiful Car: ವಿಶ್ವದ ಅತ್ಯಂತ ಸುಂದರ ಕಾರು ಎಂಬ ಹೆಗ್ಗಳಿಕೆಗೆ ಈ ಕಾರು ಪಾತ್ರ, ಭಾರತದ ಮಾರುಕಟ್ಟೆಯಲ್ಲಿ ಇದರ ಬೆಲೆ ಎಷ್ಟು ಗೊತ್ತಾ?

World's Most Beatuiful Car - Audi e-tron GT ಯ ಎರಡೂ ಎಲೆಕ್ಟ್ರಿಕ್ ಕಾರುಗಳು 'ವಿಶ್ವದ ಅತ್ಯಂತ ಸುಂದರ ಕಾರು' ಎಂಬ ಬಿರುದನ್ನು ಪಡೆದಿವೆ. ಅವುಗಳನ್ನು ಸೆಪ್ಟೆಂಬರ್‌ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿತ್ತು. 

Written by - Nitin Tabib | Last Updated : Nov 12, 2021, 10:20 PM IST
  • ಆಡಿ ಇ-ಟ್ರಾನ್ ಜಿಟಿ ಉತ್ತಮ ಲುಕ್ ಹೊಂದಿದೆ.
  • ವಿಶ್ವದ ಅತ್ಯಂತ ಸುಂದರ ಕಾರು ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
  • ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಈ ಕಾರಿನ ವಿತರಣೆ ಆರಂಭವಾಗಲಿದೆ.
World's Most Beatuiful Car: ವಿಶ್ವದ ಅತ್ಯಂತ ಸುಂದರ ಕಾರು ಎಂಬ ಹೆಗ್ಗಳಿಕೆಗೆ ಈ ಕಾರು ಪಾತ್ರ, ಭಾರತದ ಮಾರುಕಟ್ಟೆಯಲ್ಲಿ ಇದರ ಬೆಲೆ ಎಷ್ಟು ಗೊತ್ತಾ? title=
World's Most Beatuiful Car (File Photo)

ಹೊಸದಿಲ್ಲಿ:  World's Most Beatuiful Car - ಜರ್ಮನಿಯ ವಾಹನ ತಯಾರಕ ಕಂಪನಿಯಾಗಿರುವ Audi India  ಭಾರತದಲ್ಲಿ ಕೆಲವು ಸಮಯದ ಹಿಂದೆ ಆಡಿ ಇ-ಟ್ರಾನ್ ಜಿಟಿಯನ್ನು (Audi e-tron GT) ಬಿಡುಗಡೆ ಮಾಡಿತ್ತು. ಭಾರತೀಯ ಮಾರುಕಟ್ಟೆಯಲ್ಲಿ ಈ ಕಾರಿನ ಆರಂಭಿಕ ಬೆಲೆಯನ್ನು 1.79 ಕೋಟಿ ಎಕ್ಸ್ ಶೋರೂಂನಲ್ಲಿ ಇರಿಸಲಾಗಿದೆ. ಈ ಐಷಾರಾಮಿ ಕಾರಿನಲ್ಲಿ ಹಲವು ಉತ್ತಮ ವೈಶಿಷ್ಟ್ಯಗಳಿವೆ. ಇದರ ಹೊರತಾಗಿ, ಅತ್ಯಂತ ಅದ್ಭುತವಾದ ವಿಷಯವೆಂದರೆ ಜನರು ಅದರ ಲುಕ್ ತುಂಬಾ ಇಷ್ಟಪಡುತ್ತಾರೆ.  2021 Goldenes Lenkrad awards (Golden Steering Wheel) ಕಾರ್ಯಕ್ರಮದಲ್ಲಿ ಈ ಕಾರಿಗೆ '2021 ರ ವಿಶ್ವದ ಅತ್ಯಂತ ಸುಂದರವಾದ ಕಾರು' ಎಂಬ ಬಿರುದನ್ನು ನೀಡಲಾಗಿದೆ.

ಭಾರತೀಯರಿಗೂ ಕೂಡ ಇಷ್ಟವಾಗುತ್ತಿವೆ ಈ ಎರಡೂ ಇಲೆಕ್ಟ್ರಿಕ್ ಕಾರುಗಳು
ಭಾರತೀಯ ಮಾರುಕಟ್ಟೆಯಲ್ಲಿ ಆಡಿ ಇ-ಟ್ರಾನ್ ಜಿಟಿ ಎಲೆಕ್ಟ್ರಿಕ್ ಕಾರಿನ ಎರಡು ರೂಪಾಂತರಗಳಿವೆ. Audi e-tron GT Quattro ಮತ್ತು Audi RS e-tron GT ಎಂದು ಜನಪ್ರೀಯವಾಗಿರುವ ಈ ಎರಡೂ ಕಾರುಗಳು ಒಂದೇ ಚಾರ್ಜ್‌ನಲ್ಲಿ 488 ಕಿಲೋಮೀಟರ್‌ಗಳವರೆಗೆ ಬ್ಯಾಟರಿ ವ್ಯಾಪ್ತಿಯನ್ನು ಹೊಂದಿವೆ. ಇವೆರಡೂ 245kmph ವರೆಗಿನ ಗರಿಷ್ಠ ವೇಗವನ್ನು ಹೊಂದಿವೆ.

ಇದನ್ನೂ ಓದಿ-Maruti Suzuki Celerio: ಮಾರುಕಟ್ಟೆಗೆ ಹೊಸ ಮಾರುತಿ ಸುಜುಕಿ ಸೆಲೆರಿಯೊ ಲಗ್ಗೆ, ಬೆಲೆ ಎಷ್ಟು ಗೊತ್ತಾ..?

ಆಡಿ ಕಾರುಗಳ ವಿನ್ಯಾಸ
Audi e-tron GT ನಾಲ್ಕು-ಬಾಗಿಲಿನ ಸೆಡಾನ್ ಕಾರು (Sedan Car) ಭಾರತದಲ್ಲಿ ಜರ್ಮನ್ ಬ್ರಾಂಡ್‌ನ ಎಲೆಕ್ಟ್ರಿಕ್ ವಾಹನ ಶ್ರೇಣಿಗೆ ಶಾಮೀಲಾಗಿದೆ. ಈ ಎರಡೂ Audi e-tron GT ಮತ್ತು RS e-tron GT ಮಾದರಿಗಳ ವಿನ್ಯಾಸವನ್ನು ತುಂಬಾ ವಿಶೇಷವಾಗಿ ಮಾಡಲಾಗಿದ್ದು, ಇದಕ್ಕೆ ಸ್ಪೋರ್ಟಿ ಲುಕ್ ನೀಡಲಾಗಿದೆ. ಅದರ ಬಾನೆಟ್, ಮುಂಭಾಗದ ಬಂಪರ್ ಎಷ್ಟು ಅದ್ಭುತವಾಗಿ ನೀಡಲಾಗಿದೆ ಎಂಬುದನ್ನು ಬಾಡಿ ಲುಕ್ ನೋಡಿಯೇ ನೀವು ಊಹಿಸಬಹುದು.

ಇದನ್ನೂ ಓದಿ-Cheapest MPV:ಕಡಿಮೆ ವೆಚ್ಚದಲ್ಲಿ ಅತ್ಯಂತ ಅಗ್ಗದ 7 ಸೀಟರ್ ಖರೀದಿಸಬೇಕೆ? ಇಲ್ಲಿದೆ ಸುವರ್ಣಾವಕಾಶ

e-tron GT ಹಾಗೂ  RS e-tron GT ಕಾರಿನ ಡ್ರೈವಿಂಗ್ ರೇಂಜ್ ಹಾಗೂ ವೇಗ 
Audi e-tron GT ಮತ್ತು RS e-tron GT ಗಳು 93 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಮತ್ತು ಎರಡು ಎಲೆಕ್ಟ್ರಿಕ್ ಮೋಟಾರ್‌ಗಳಿಂದ ಸಂಚಾಲಿತವಾಗಿವೆ. RS ಇ-ಟ್ರಾನ್ GT 590 bhp ಪವರ್ ಮತ್ತು 830 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಆಡಿ ಕಾರು 4.1 ಸೆಕೆಂಡ್‌ಗಳಲ್ಲಿ ಗಂಟೆಗೆ 100 ಕಿಮೀ ವೇಗವನ್ನು ಪಡೆಯುತ್ತದೆ. ಎಲೆಕ್ಟ್ರಿಕ್ ಸೆಡಾನ್ ಒಂದು ಸಂಪೂರ್ಣ ಚಾರ್ಜ್‌ನಲ್ಲಿ 388 ಕಿಮೀ ನಿಂದ 500 ಕಿಮೀವರೆಗೆ ಡಬ್ಲ್ಯುಎಲ್‌ಟಿಪಿ ಡ್ರೈವಿಂಗ್ ಶ್ರೇಣಿಯನ್ನು ಹೊಂದಿದೆ. ವೇಗದ ವಿಷಯದಲ್ಲಿ, ಇ-ಟ್ರಾನ್ GT ಕೇವಲ 3.3 ಸೆಕೆಂಡುಗಳಲ್ಲಿ 0 ರಿಂದ 100 kmph ಗೆ ಹೋಗುತ್ತದೆ. ಆದರೆ, ಸ್ಟ್ಯಾಂಡರ್ಡ್ ಇ-ಟ್ರಾನ್ GT 469 bhp ಪವರ್ ಮತ್ತು 630 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 

ಇದನ್ನೂ ಓದಿ-Maruti Suzuki : 1.81ಲಕ್ಷ ಕಾರುಗಳನ್ನು ವಾಪಸ್ ಕರೆಸಿಕೊಳ್ಳುತ್ತಿರುವ ಮಾರುತಿ ಸುಜುಕಿ, ನಿಮ್ಮ ಕಾರು ಇದರಲ್ಲಿದೆಯೇ ಚೆಕ್ ಮಾಡಿಕೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News