ಅಬುಧಾಬಿ: ಕೆಲವೊಮ್ಮೆ ವಿಚಿತ್ರ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರುತ್ತವೆ. ಇಂತಹ ಪ್ರಕರಣಗಳ ಬಗ್ಗೆ ಕೇಳಿ ಜನರು ಸಹ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಇಂತಹ ಒಂದು ಪ್ರಕರಣಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ (UAE)ಸಾಕ್ಷಿಯಾಗಿದೆ. ಇಲ್ಲಿನ ಮೇಕೆ ಪ್ರಕರಣ(Goat Sale Case)ವೊಂದು ನ್ಯಾಯಾಲಯ ತಲುಪಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅಚ್ಚರಿ ತೀರ್ಪು ನೀಡಿದೆ.


COMMERCIAL BREAK
SCROLL TO CONTINUE READING

ಸುದ್ದಿಯಾದ ಮೇಕೆ ಮಾರಾಟ ಪ್ರಕರಣ!  


ವರದಿಗಳ ಪ್ರಕಾರ ಈ ಪ್ರಕರಣವು ಮೇಕೆ ವ್ಯಾಪಾರ(Goat Dispute)ದ ಕುರಿತದ್ದಾಗಿದೆ. ಖರೀದಿದಾರನು ತನ್ನಿಂದ ಖರೀದಿಸಿದ ಮೇಕೆಗೆ ಹಣವನ್ನು ಪಾವತಿಸದ ಕಾರಣ ವ್ಯಕ್ತಿಯೊಬ್ಬ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ. ಈ ಮೇಕೆ ಬೆಲೆ 19,000 ದಿರ್ಹಮ್ (ಸುಮಾರು 9.5 ಲಕ್ಷ ರೂ.).


ಇದನ್ನೂ ಓದಿ: Snake Birth Video: ಹಾವಿನ ಜನನದ ವಿಡಿಯೋ..! ಅಬ್ಬಬ್ಬಾ, ಇದನ್ನೊಮ್ಮೆ ನೋಡಿ...


ನ್ಯಾಯ ಕೊಡಿಸುವಂತೆ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ


ಇಬ್ಬರು ವ್ಯಕ್ತಿಗಳು ಮೇಕೆ ವಿವಾದ ವಿಚಾರವಾಗಿ ರಾಸ್ ಅಲ್ ಖೈಮಾದ ಸಿವಿಲ್ ನ್ಯಾಯಾಲಯ(Ras Al Khaimah Court)ದ ಮೆಟ್ಟಿಲೇರಿದ್ದರು. ಆರೋಪಿಯು ತನ್ನಿಂದ 19 ಸಾವಿರ ದಿರ್ಹಮ್‌ಗೆ ಮೇಕೆಯನ್ನು ಖರೀದಿಸಿದ್ದ ಆದರೆ, ಆತ ತನಗೆ ಹಣ ಪಾವತಿಸಲು ನಿರಾಕರಿಸಿದ್ದಾನೆ ಎಂದು ಅರ್ಜಿದಾರ ನ್ಯಾಯಾಲಯಕ್ಕೆ ತಿಳಿಸಿದ್ದಾನೆ. ಈ ಪ್ರಕರಣದಲ್ಲಿ ತನಗೆ ನ್ಯಾಯ ಕೊಡಿಸುವಂತೆ ಆತ ನ್ಯಾಯಾಧೀಶರ ಬಳಿ ಮನವಿ ಮಾಡಿಕೊಂಡಿದ್ದಾನೆ.


ಮೇಕೆಗೆ ಅನಾರೋಗ್ಯವಿದೆ ಎಂದ ಆರೋಪಿ!


ಅರ್ಜಿದಾರರಿಂದ ಮೇಕೆ(Goat) ಖರೀದಿಸಿದ್ದ ಆರೋಪಿತ ವ್ಯಕ್ತಿಯು ಸಾರ್ವಜನಿಕ ಪ್ರಾಣಿಗಳ ಹರಾಜು ನಡೆಸುತ್ತಿದ್ದ. ಹೀಗಿರುವಾಗ ಆತನಿಗೆ 19,000 ದಿರ್ಹಮ್‌ಗೆ ಮೇಕೆ ಮಾರಾಟ ಮಾಡಲಾಗಿತ್ತು. ತಾನು ಅರ್ಜಿದಾರನಿಂದ ಖರೀದಿಸಿದ ಮೇಕೆಗೆ ಅನಾರೋಗ್ಯವಿದೆ ಎಂದು ಹೇಳಿದ್ದ ಆತ ಹಣ ಪಾವತಿಸಲು ನಿರಾಕರಿಸಿದ್ದನಂತೆ.


ಇದನ್ನೂ ಓದಿ: ಸೋಶಿಯಲ್ ಮೀಡಿಯಾದ ಅತಿಯಾದ ಬಳಕೆಯಿಂದ ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳಲಿದೆ ಈ ಕಾಯಿಲೆ


ನ್ಯಾಯಾಲಯ ಈ ತೀರ್ಪು ನೀಡಿದೆ


ಪ್ರಕರಣದ ವಿಚಾರಣೆ ನಡೆಸಿದ ಸಿವಿಲ್ ಕೋರ್ಟ್ ತನಿಖೆಯ ಬಳಿಕ ಮೇಕೆ(Goat Sale Case) ಅನಾರೋಗ್ಯದಿಂದ ಬಳಲುತ್ತಿಲ್ಲವೆಂದು ತಿಳಿಸಿದೆ. ಆರೋಪಿಯು ಅರ್ಜಿದಾರನಿಗೆ ಸಂಪೂರ್ಣ 19 ಸಾವಿರ ದಿರ್ಹಮ್‌ ಪಾವತಿಸಬೇಕು ಮತ್ತು ಮೇಕೆಯನ್ನು ತೆಗೆದುಕೊಂಡ ಸಮಯದಿಂದ ವಾರ್ಷಿಕ ಶೇ.6ರ ಬಡ್ಡಿಯನ್ನು ಸಹ ಪಾವತಿಸಬೇಕು ಎಂದು ತೀರ್ಪು ನೀಡಿದೆ. ಅಷ್ಟೇ ಅಲ್ಲದೆ ನ್ಯಾಯಾಲಯದ ವೆಚ್ಚ ಮತ್ತು ವಕೀಲರ ಶುಲ್ಕವನ್ನು ಸಹ ಪಾವತಿಸುವಂತೆ ಆದೇಶಿಸಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.