Snake Birth Video: ಹಾವಿನ ಜನನದ ವಿಡಿಯೋ..! ಅಬ್ಬಬ್ಬಾ, ಇದನ್ನೊಮ್ಮೆ ನೋಡಿ...

Snake Birth Video: ಈ ವೀಡಿಯೋ ನೋಡಿದ ಮೇಲೆ ಹಲವರು ನಿಸರ್ಗ ಈ ಭೂಮಿಯ ಮೇಲೆ ಎಷ್ಟು ವಿಚಿತ್ರಗಳನ್ನು ಸೃಷ್ಟಿ ಮಾಡಿದೆ ಎಂದು ಯೋಚಿಸಬಹುದು. ಈ ವಿಡಿಯೋದಲ್ಲಿ ಮೊಟ್ಟೆಯಲ್ಲಿ ಕುಳಿತಿರುವ ಹಾವಿನ ಮಗು ಬೇರೊಂದು ಜೀವಿಯ ಮಗುವಿನಂತೆ ಕಾಣುವುದನ್ನು ನೋಡಬಹುದು.  

Written by - Yashaswini V | Last Updated : Mar 31, 2022, 08:58 AM IST
  • ಹಾವಿನ ಜನನದ ವಿಡಿಯೋ ವೈರಲ್
  • ಮೊಟ್ಟೆಯಿಂದ ಹೊರಬರುವ ಹಾವಿನ ಮರಿ
  • ಈ ವಿಡಿಯೋ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದೆ
Snake Birth Video: ಹಾವಿನ ಜನನದ ವಿಡಿಯೋ..! ಅಬ್ಬಬ್ಬಾ, ಇದನ್ನೊಮ್ಮೆ ನೋಡಿ... title=
Snake birth video

Snake Birth Video: ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಮೊಟ್ಟೆಯಿಂದ ಹಾವಿನ ಮರಿ ಹೊರಬರುವ ಹಾವಿನ ಜನನದ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ಅತ್ಯಂತ ಅಚ್ಚರಿಯ ವಿಷಯವೆಂದರೆ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಕೈಯಲ್ಲಿ ಹಾವಿನ ಮೊಟ್ಟೆಯನ್ನು ಹಿಡಿದಿದ್ದಾರೆ. ಈ ಮೊಟ್ಟೆಯಿಂದ ಹಾವು ಹೊರಬರುತ್ತಿದೆ.

ವೈರಲ್ ವೀಡಿಯೋ (Viral Video) ನೋಡಿದ್ರೆ ಈ ಭೂಮಿ ಮೇಲೆ ನಿಸರ್ಗ ಎಷ್ಟು ವಿಚಿತ್ರಗಳನ್ನು ಸೃಷ್ಟಿ ಮಾಡಿದೆ ಎಂದೆನಿಸುವುದಂತೂ ಸುಳ್ಳಲ್ಲ. ವೀಡಿಯೋ ನೋಡಿದ ಮೇಲೆ ನಿಮಗೆ ಒಂದು ಸಾರಿ ಸ್ವಲ್ಪ ಭಯವಾಗುತ್ತೆ. ಮೊಟ್ಟೆಯಲ್ಲಿ ಕುಳಿತಿರುವ ಹಾವಿನ ಮಗು ಬೇರೊಂದು ಜೀವಿಯ ಮಗುವಿನಂತೆ ಕಾಣುವುದನ್ನು ನೋಡಬಹುದು. ಆದರೆ, ಇದನ್ನು ನೋಡಿದಾಗ ನಿಮ್ಮ ಮನಸ್ಸಿನಲ್ಲಿ ನಾಲಿಗೆಯನ್ನು ಅಲುಗಾಡಿಸುವ ಭಯಂಕರ ನಾಗರಹಾವು ನೆನಪಾಗುತ್ತದೆ. ಪ್ರಸ್ತುತ, ಈ ಹಾವಿನ ಜಾತಿಯು ತಿಳಿದಿಲ್ಲ.

ಇದನ್ನೂ ಓದಿ- Thirsty Snake Video: ಅಂಗೈಯಲ್ಲಿ ನೀರಿಡಿದು ಹಾವಿನ ಬಾಯಾರಿಕೆ ನೀಗಿಸಿದ ವ್ಯಕ್ತಿ! ವಿಡಿಯೋ ವೈರಲ್

ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿರುವ ಈ ಹಾವಿನ ವೈರಲ್ ವಿಡಿಯೋದಲ್ಲಿ (Snake Viral Video), ವ್ಯಕ್ತಿಯೊಬ್ಬ ಹಳದಿ ಹಾವಿನ ಮೊಟ್ಟೆಯನ್ನು ಕೈಯಲ್ಲಿ ಹಿಡಿದಿರುವುದನ್ನು ನೋಡಬಹುದು. ಇದಲ್ಲದೆ, ಹಾವು ಮೊಟ್ಟೆಯಿಂದ ಹರಿದು ಹೊರಗೆ ಬರಲು ಯತ್ನಿಸುತ್ತಿರುವುದನ್ನೂ ಸಹ ಕಾಣಬಹುದು. ಹಳದಿ ಬಣ್ಣದ ಸಣ್ಣ ಹಾವು ಮೊಟ್ಟೆಯ ಒಳಗಿನಿಂದ ಹೊರಗಿನ ಪ್ರಪಂಚವನ್ನು ನೋಡುತ್ತಿದೆ. ಒಂದೆರಡು ಬಾರಿ ಹೊರ ಬರಲು ಯತ್ನಿಸಿ ನಂತರ ಮತ್ತೆ ಮೊಟ್ಟೆಯೊಳಗೆ ಹೋಗುತ್ತಿರುವುದು ಇದರಲ್ಲಿ ಕಾಣಬಹುದು.

ಈ ಹಾವಿನ ವೈರಲ್ ವಿಡಿಯೋವನ್ನು ನೀವೂ ನೋಡಿ...

ಇದನ್ನೂ ಓದಿ- ಭಯಾನಕ ವಿಡಿಯೋ: ಫೋಟೋ ತೆಗೆಯಲು ಹೋದವನ ಮೇಲೆ ಅಟ್ಯಾಕ್ ಮಾಡಿದ ಹಾವು..!

ಇಂಟರ್ನೆಟ್‌ನಲ್ಲಿ ವೈರಲ್ ಆಗಿರುವ ಈ ವೀಡಿಯೊದಲ್ಲಿ ನೀವು ಹಾವಿನ ದೇಹದ ಮೇಲೆ ಕಪ್ಪು ಮತ್ತು ಕಂದು ಬಣ್ಣದ ಚುಕ್ಕೆಗಳನ್ನು ನೋಡಬಹುದು. ವೈರಲ್ ವೀಡಿಯೊವನ್ನು snakes.empire ಹೆಸರಿನ Instagram ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ಅಪಾಯಕಾರಿ ವೀಡಿಯೊವನ್ನು ಜನರು ಹೆಚ್ಚಾಗಿ ವೀಕ್ಷಿಸುತ್ತಿದ್ದಾರೆ ಮತ್ತು ವೀಡಿಯೊಗೆ ವಿಭಿನ್ನ ರೀತಿಯಲ್ಲಿ ಕಾಮೆಂಟ್ ಗಳನ್ನೂ ಮಾಡುತ್ತಿದ್ದಾರೆ. ವೀಡಿಯೊವನ್ನು ನೋಡಿದ ನಂತರ ಹೆಚ್ಚಿನ ಜನರು ಭಯದಿಂದ ಪ್ರತಿಕ್ರಿಯಿಸುತ್ತಿದ್ದಾರೆ, ಆದರೆ ಕೆಲವರು ಪುಟ್ಟ ಹಾವು ಕೂಡ ಮುದ್ದಾಗಿದೆ ಎಂದು ಬರೆದಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News