Viral News: ಇದ್ದಕ್ಕಿದ್ದಂತೆ ಬಣ್ಣ ಬದಲಾಯಿಸಿದ ಆಗಸ, ನೋಡಿ ಆಶ್ಚರ್ಯಚಕಿತರಾದ ಜನ
Viral News: ಇತ್ತೀಚೆಗೆ, ಸ್ಕಾಟ್ಲೆಂಡ್‌ನ (Northern Lights) ಆಕಾಶದಲ್ಲಿ ಅನೇಕ ವಿಚಿತ್ರ ಬಣ್ಣಗಳು ಕಾಣಿಸಿಕೊಂಡಿದ್ದು, ಆಗಸದ ಈ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಕತ್ ವೈರಲ್ (Viral Pic) ಆಗುತ್ತಿವೆ. ಇವುಗಳನ್ನು ನೋಡಿದ ಜನರು ಆಶ್ಚರ್ಯಚಕಿತರಾಗುತ್ತಿದ್ದಾರೆ.
Viral News: ಇತ್ತೀಚಿಗೆ ಸ್ಕಾಟ್ಲೆಂಡ್‌ನ ಅನೇಕ ಪ್ರದೇಶಗಳಲ್ಲಿ ಅರೋರಾ ಬೋರಿಯಾಲಿಸ್‌ನ (Aurora Borealis) ಅದ್ಭುತ ದೃಶ್ಯಗಳನ್ನು ನೋಡಲಾಗಿದೆ. ಈ ದೃಶ್ಯ ಆಕಾಶವನ್ನು ಬೆಳಗಿಸಿದ್ದು, ನೋಡುಗರನ್ನು ಮಂತ್ರಮುಗ್ಧಗೊಳಿಸಿದೆ. BBC ವರದಿಯ ಪ್ರಕಾರ, ಅರೋರಾವು ಸೂರ್ಯನ ಭೂಕಾಂತೀಯ ಬಿರುಗಾಳಿಗಳಿಂದ ಉಂಟಾಗುವ ನೈಸರ್ಗಿಕ ವಿದ್ಯಮಾನವಾಗಿದೆ ಮತ್ತು ಇದು ಆಕಾಶದಲ್ಲಿ ಬೆಳಕಿನ ಕಿರಣಗಳಾಗಿ ಹೊರಹೊಮ್ಮಿ ಮಿನುಗುತ್ತದೆ. ಇದು ಸಂಭವಿಸಿದಾಗ ನೀವು ಆಕಾಶವನ್ನು ನೋಡಿದರೆ, ಯಾರೋ ಡ್ಯಾನ್ಸಿಂಗ್ ಫ್ಲೋರ್ ಮೇಲಿನ ದೀಪಗಳನ್ನು ಬೆಳಗುತ್ತಿದ್ದಾರೆ ಏನೋ ಎಂಬಂತೆ ಭಾಸವಾಗುತ್ತದೆ.
ಇದನ್ನೂ ಓದಿ-ಇನ್ಶೂರೆನ್ಸ್ ಇಲ್ಲದೇ ಕೋಟ್ಯಂತರ ರೂ. ಮೌಲ್ಯದ ಕಾರ್ ಡ್ರೈವ್: ಟ್ರಾಫಿಕ್ ಪೊಲೀಸರು ತಡೆದಾಗ ಏನಾಯ್ತು..?
ವೈರಲ್ ಆದ ನಾರ್ದನ್ ಲೈಟ್ಸ್ (Northern Lights) ನ ಅದ್ಭುತ ದೃಶ್ಯಗಳು
ಕಳೆದ ಭಾನುವಾರ, ಕಿನ್‌ರಾಸ್‌ನಿಂದ (Kinross) ಔಟರ್ ಹೆಬ್ರೈಡ್ಸ್‌ವರೆಗಿನ ಹೊಸ ಫೋಟೋಗಳು ರಾತ್ರಿ ಹೊತ್ತಿನ ಆಗಸದ ಅದ್ಭುತ ಹಸಿರು ಮತ್ತು ಗುಲಾಬಿ ಬೆಳಕಿನ ಮಿನುಗನ್ನು ಬಹಿರಂಗಗೊಳಿಸಿವೆ. ಹವಾಮಾನ ಇಲಾಖೆಯ ಪ್ರಕಾರ, ಕರೋನಲ್ ಮಾಸ್ ಎಜೆಕ್ಷನ್ (CME), ಸೂರ್ಯನ ಹೊರಗಿನ ಪದರದಿಂದ ಪ್ಲಾಸ್ಮಾವನ್ನು ಬೃಹತ್ ಪ್ರಮಾಣದಲ್ಲಿ ಹೊರಹಾಕುವುದು ಇದಕ್ಕೆ ಕಾರಣ ಎಂದಿದೆ. ಏತನ್ಮಧ್ಯೆ, ಇದನ್ನು ಗಮನಿಸಿರುವ ಟ್ವಿಟರ್ ಬಳಕೆದಾರರು, ನಾರ್ದನ್ ಲೈಟ್ಸ್ ನ ಅದ್ಭುತ ಚಿತ್ರಗಳನ್ನು ತಮ್ಮ ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದು, ಚಿತ್ರಗಳು ಭಾರಿ ವೈರಲ್ ಆಗುತ್ತಿವೆ.
Coronavirus: ಚೀನಾದಲ್ಲಿ ಮತ್ತೆ ಕರೋನಾ ಸ್ಫೋಟ!
ಈ ನೋಟವನ್ನು ಅರೋರಾ ಬೋರಿಯಾಲಿಸ್ ಎಂದು ಕರೆಯಲಾಗುತ್ತದೆ.
ಅರೋರಾ ಬೋರಿಯಾಲಿಸ್ ಕುರಿತು ಬಿಬಿಸಿಗೆ ಮಾಹಿತಿ ನೀಡಿರುವ ಖಗೋಳಶಾಸ್ತ್ರಜ್ನ ಸ್ಟೀವ್ ಓವೆನ್ಸ್ ಆರೋರಾವನ್ನು ನೋಡಲು UK ಅತ್ಯುತ್ತಮ ಸ್ಥಳವಾಗಿದ್ದು, ಭೂಮಿಯ ಉತ್ತರದಲ್ಲಿ ಸಂಭವಿಸುವ ಈ ನಾರ್ದನ್ ಲೈಘ್ಸ್ ಅನ್ನು ಅಧಿಕೃತವಾಗಿ ಬೋರಿಯಾಲಿಸ್ ಎಂದು ಕರೆಯಲಾಗುತ್ತದೆ ಎಂದಿದ್ದಾರೆ. ಆದರೆ, ದಕ್ಷಿಣದಲ್ಲಿ ಇವುಗಳನ್ನು ಆರೋರಾ ಆಸ್ಟ್ರೇಲಿಸ್ (Aurora Australis) ಎಂದು ಕರೆಯಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.