ನವದೆಹಲಿ: ಈ ರೀತಿಯ ಉದ್ಯೋಗವಕಾಶ ಅದೃಷ್ಟವಂತರಿಗೆ ಮಾತ್ರ ಸಿಗುತ್ತದೆ. ಇದು ಒಂದು ರೀತಿಯ ಡ್ರೀಮ್ ಜಾಬ್(Dream Job) ಅಂತಲೇ ಹೇಳಬಹುದು. ಇಲ್ಲಿ ಯಾವುದೇ ರೀತಿಯ ಒತ್ತಡಮಯ ಕೆಲಸವೂ ಇರುವುದಿಲ್ಲ. ನೀವು ತುಂಬಾ ಆರಾಮಾಗಿ ಓಡಾಡಿಕೊಂಡೇ ಕೆಲಸ ಮಾಡಬಹುದು. ಇದಕ್ಕೆ ಕಂಪನಿಯು ಕೈತುಂಬಾ ಸಂಬಳವನ್ನು ನೀಡುತ್ತದೆ.


COMMERCIAL BREAK
SCROLL TO CONTINUE READING

ಬಹುತೇಕ ಜನರು ಒಂದು ಉತ್ತಮ ಉದ್ಯೋಗಕ್ಕಾಗಿ ಲಕ್ಷಗಟ್ಟಲೆ ರೂಪಾಯಿ ಖರ್ಚು ಮಾಡಿ ಡಿಗ್ರಿ ಪಡೆಯಲು ಓದುತ್ತಾರೆ. ಓದು ಮುಗಿದ ಬಳಿಕ ಅನೇಕ ಕಂಪನಿಗಳಲ್ಲಿ ಕೆಲಸ ಪಡೆಯಲು ಸಂದರ್ಶನಕ್ಕಾಗಿ ರೌಂಡ್ ಹಾಕುತ್ತಾರೆ. ಕೆಲಸ ಸಿಕ್ಕ ಬಳಿಕ ಹಗಲು ರಾತ್ರಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಹೀಗೆ ವರ್ಷಗಟ್ಟಲೇ ಬಿಡುವಿಲ್ಲದ ಕೆಲಸ ಮಾಡಿ ದಣಿದು ಹೋಗುತ್ತಾರೆ. ನಮಗೂ ಯಾವುದೇ ರೀತಿಯ ಒತ್ತಡವಿಲ್ಲದ ಕೆಲಸ ಸಿಗಲಿ ಅಂತಾ ಅಂದುಕೊಳ್ಳುತ್ತಲೇ ಜೀವನ ಸಾಗಿಸುತ್ತಿರುತ್ತಾರೆ. ನಾವು ಇಂದು ತಿಳಿಸುತ್ತಿರುವ ಕೆಲಸ(Food Processing Jobs Salary)ದ ಬಗ್ಗೆ ಗೊತ್ತಾದರೆ ನಿಮಗೆ ಅಚ್ಚರಿಯ ಜೊತೆಗೆ ಆಶ್ಚರ್ಯವೂ ಆಗುತ್ತದೆ.  


ಇದನ್ನೂ ಓದಿ: ಭೂಮಿಯ ಅದ್ಭುತ ಈ ಸ್ಥಳ: ಇಲ್ಲಿನ ಮಣ್ಣನ್ನು ಜನರು ಮಸಾಲೆಯಂತೆ ತಿನ್ನುತ್ತಾರೆ..!


ಆಹಾರ ಸೇವಿಸಿ ರುಚಿ ತಿಳಿಸಲು ಲಕ್ಷ ಲಕ್ಷ ಸಂಬಳ


ನೀವು ಹೊರಗಡೆ ಹೋದಾಗ ಹೋಟೆಲ್ ಗೆ ಹೋಗಿ ತಿಂಡಿ, ಊಟ ಮಾಡುತ್ತೀರಿ. ರೆಸ್ಟೋರೆಂಟ್‌ಗೆ ಹೋದಾಗ ನಿಮ್ಮ ಮೊದಲ ಕೆಲಸ ರುಚಿಕರವಾದ ಆಹಾರದ ಆಯ್ಕೆ ಮಾಡುವುದಾಗಿರುತ್ತದೆ. ಕೆಲವೊಮ್ಮೆ ಜನರು ಬಜೆಟ್ ಪ್ರಕಾರ ಆಹಾರವನ್ನು ಆರ್ಡರ್ ಮಾಡುತ್ತಾರೆ. ಆಹಾರ ಸೇವಿಸಿದ ಬಳಿಕ ಅದರ ರಚಿ ಹೇಗಿತ್ತು ಅನ್ನೋದರ ಬಗ್ಗೆ ನೀವು ರೆಸ್ಟೋರೆಂಟ್ ಮ್ಯಾನೇಜರ್ ಅಥವಾ ವೇಟರ್‌ಗೆ ತಿಳಿಸುತ್ತೀರಿ ತಾನೇ. ಇದೇ ರೀತಿ ಆಹಾರ ಸೇವಿಸಿ ಅದರ ರುಚಿ(Food Eating Jobs) ತಿಳಿಸಲು ಕೆಲವು ಕಂಪನಿಗಳು ಲಕ್ಷ ಲಕ್ಷ ಸಂಬಳ ಕೊಟ್ಟು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತವೆ.


ಇಂಗ್ಲೆಂಡ್ ಕಂಪನಿಯಲ್ಲಿ ಕೆಲಸ ಖಾಲಿ ಇದೆ


ಕೇವಲ ಆಹಾರ ಸೇವಿಸಿ ಅದರ ರುಚಿ ತಿಳಿಸುವ ಕೆಲಸ(Famous Food Taster)ಕ್ಕೆ ಇಂಗ್ಲೆಂಡ್ ನ ಕಂಪನಿಯೊಂದು ಅರ್ಜಿ ಆಹ್ವಾನಿಸಿದೆ. ಇದಕ್ಕಾಗಿ ಜಾಹೀರಾತನ್ನೂ ನೀಡಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಿ ಈ ಉದ್ಯೋಗವನ್ನು ಪಡೆದುಕೊಳ್ಳಬಹುದು. ಆಯ್ಕೆಯಾದ ಉದ್ಯೋಗಿಗೆ ವಿವಿಧ ರೀತಿಯ ಆಹಾರವನ್ನು ನೀಡಲಾಗುತ್ತದೆ. ಆಹಾರ ಸೇವಿಸಿ ಅದರ ರುಚಿ ಹೇಗಿದೆ ಅಂತಾ ತಿಳಿಸುವುದು ಉದ್ಯೋಗಿಯ ಕೆಲಸವಾಗಿರುತ್ತದೆ. ಇದಕ್ಕೆ ಯುಕೆ ಫುಡ್ ಕಂಪನಿ ಲಕ್ಷ ಲಕ್ಷ ಸಂಬಳವನ್ನು ಉದ್ಯೋಗಿಗೆ ಪಾವತಿಸುತ್ತದೆ. ಉದ್ಯೋಗಿ ರುಚಿಯನ್ನು ಪರೀಕ್ಷಿಸುವುದರ ಜೊತೆಗೆ ಆಹಾರವನ್ನು ಎಷ್ಟು ಚೆನ್ನಾಗಿ ತಯಾರಿಸಲಾಗಿದೆ ಎಂಬುದರ ಬಗ್ಗೆ ತಿಳಿಸಬಹುದು. ಅದರಲ್ಲಿ ಏನಾದರೂ ಕೊರತೆಯಿದ್ದರೆ ಉಪಯುಕ್ತ ಸಲಹೆ ನೀಡಬೇಕು.  


ಇದನ್ನೂ ಓದಿ: ಶೂಟಿಂಗ್ ವೇಳೆ ಕ್ಯಾಮೆರಾಮನ್ ಕೊಂದ ಹಿರಿಯ ನಟ: ನಿರ್ದೇಶಕನಿಗೆ ಗಂಭೀರ ಗಾಯ..! 


ಚಿಕನ್ ಡಿಪ್ಪರ್‌ಗಳ ರುಚಿ ಬಗ್ಗೆ ತಿಳಿಸಬೇಕು


‘ಬರ್ಡ್ಸ್ ಐ’(Birds Eye) ಹೆಸರಿನ ಈ ಯುಕೆ ಮೂಲದ ಕಂಪನಿಯು ಚಿಕನ್ ಡಿಪ್ಪರ್‌ಗಳನ್ನು ತಯಾರಿಸುತ್ತದೆ. ಗರಿಗರಿಯಾಗಿ ಡಿಪ್ಪರ್‌ಗಳ ರುಚಿ ಬಗ್ಗೆ ಉದ್ಯೋಗಿ ತಿಳಿಸಬೇಕು. ಕೆಲಸದ ಸಂಪೂರ್ಣ ಮಾಹಿತಿಯನ್ನು ಕಂಪನಿ ತನ್ನ ವೆಬ್‌ಸೈಟ್‌ನಲ್ಲಿ ನೀಡಿದೆ. ಆಯ್ಕೆಯಾದ ಅಭ್ಯರ್ಥಿ ಚೀಫ್ ಡಿಪ್ಪಿಂಗ್ ಆಫೀಸರ್ ಹುದ್ದೆಯನ್ನು ಪಡೆಯುತ್ತಾನೆ. ಬಳಿಕ ಕಂಪನಿಯಲ್ಲಿ ತಯಾರಿಸಿದ ಆಹಾರದ ರುಚಿ ಮತ್ತು ಗುಣಮಟ್ಟದ ಬಗ್ಗೆ ಬಾಸ್‌ಗೆ ತಿಳಿಸಬೇಕಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ