ಶೂಟಿಂಗ್ ವೇಳೆ ಕ್ಯಾಮೆರಾಮನ್ ಕೊಂದ ಹಿರಿಯ ನಟ: ನಿರ್ದೇಶಕನಿಗೆ ಗಂಭೀರ ಗಾಯ..!

ಹಚಿನ್ಸ್ ಅವರ ಆಕಸ್ಮಿಕ ಸಾವಿನಿಂದ ಇಡೀ ಚಿತ್ರತಂಡಕ್ಕೆ ಆಘಾತವಾಗಿದೆ. ಶೂಟಿಂಗ್ ಸೆಟ್ ನಲ್ಲಿದ್ದ ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ಜಿನುಗಿತ್ತು. ಪೊಲೀಸ್ ಠಾಣೆಗೆ ತೆರಳಿದ ಬಳಿಕ ಅಲೆಕ್ ಸಣ್ಣ ಮಗುವಿನಂತೆ ಅಳುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

Written by - Puttaraj K Alur | Last Updated : Oct 23, 2021, 07:33 AM IST
  • ಹಾಲಿವುಡ್ ಸಿನಿಮಾದ ಚಿತ್ರೀಕರಣದ ವೇಳೆ ದೊಡ್ಡ ದುರಂತವೇ ನಡೆದಿದೆ
  • ಸಿನಿಮಾ ಚಿತ್ರೀಕರಣದ ವೇಳೆ ಶೂಟ್ ಮಾಡಿ ಕ್ಯಾಮೆರಾಮ್ಯಾನ್ ಕೊಂದ ನಟ
  • ಖ್ಯಾತ ನಟ ಅಲೆಕ್ ಬಾಲ್ಡ್ವಿನ್ ನಟನೆಯ ‘ರಸ್ಟ್’ ಸಿನಿಮಾ ಶೂಟಿಂಗ್ ವೇಳೆ ಘಟನೆ
ಶೂಟಿಂಗ್ ವೇಳೆ ಕ್ಯಾಮೆರಾಮನ್ ಕೊಂದ ಹಿರಿಯ ನಟ: ನಿರ್ದೇಶಕನಿಗೆ ಗಂಭೀರ ಗಾಯ..!

ಲಾಸ್ ಎಂಜಲೀಸ್: ಹಾಲಿವುಡ್ ಸಿನಿಮಾ(Hollywood Film)ದ ಚಿತ್ರೀಕರಣದ ವೇಳೆ ದೊಡ್ಡ ದುರಂತವೇ ನಡೆದಿದೆನ್ಯೂ ಮೆಕ್ಸಿಕೋದಲ್ಲಿ ನಡೆಯುತ್ತಿದ್ದ ಸಿನಿಮಾ ಚಿತ್ರೀಕರಣದ ವೇಳೆ ಹಾಲಿವುಡ್‌ನ ಖ್ಯಾತ ನಟ ಅಲೆಕ್ ಬಾಲ್ಡ್ವಿನ್(Alec Baldwin) ಶೂಟ್ ಮಾಡಿ ಕ್ಯಾಮೆರಾಮ್ಯಾನ್ ಅನ್ನು ಕೊಂದಿದ್ದಾರೆ. ಘಟನೆಯಲ್ಲಿ ಚಿತ್ರದ ನಿರ್ದೇಶಕನಿಗೂ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ. ಆದರೆ ಅಲೆಕ್ ಬಾಲ್ಡ್ವಿನ್ ಉದ್ದೇಶಪೂರ್ವಕವಾಗಿ ಶೂಟ್ ಮಾಡಿ ಸಾಯಿಸಿಲ್ಲವೆಂದು ತಿಳಿದುಬಂದಿದೆ.

ನ್ಯೂ ಮೆಕ್ಸಿಕೊ ಬಳಿಯ ಸಾಂಟಾ ಫೆ ಎಂಬಲ್ಲಿ ಅಲೆಕ್ ಬಾಲ್ಡ್ವಿನ್ ನಟಿಸುತ್ತಿರುವ ಇಂಗ್ಲೀಷ್‌ನ ‘ರಸ್ಟ್’ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಚಿತ್ರೀಕರಣದ ಸಂದರ್ಭದಲ್ಲಿ ಅಲೆಕ್ ಅವರು ಗನ್ ಚಲಾಯಿಸುವ ದೃಶ್ಯವನ್ನು ಶೂಟಿಂಗ್ ಮಾಡಲಾಗುತ್ತಿತ್ತು. ಅಲೆಕ್ ಬಂದೂಕಿನ ಟ್ರಿಗರ್ ಒತ್ತುತ್ತಲೇ ಎದುರಿನಲ್ಲಿ ದೃಶ್ಯ ಸೆರೆಹಿಡಿಯುತ್ತಿದ್ದ ಕ್ಯಾಮೆರಾವುಮನ್‌ಗೆ(Cinematographer) ಗುಂಡು ತಗುಲಿದೆ. ಪಕ್ಕದಲ್ಲಿದ್ದ ನಿರ್ದೇಶಕನಿಗೂ ಗಂಭೀರ ಗಾಯವಾಗಿದೆ.

ಇದನ್ನೂ ಓದಿ: ಆರ್ಯಾನ್ ಖಾನ್ ಜೊತೆ ಸಿಗರೇಟ್ ವಿಚಾರ ಮಾತನಾಡುತ್ತಿದ್ದೆ ಎಂದ ಅನನ್ಯಾ ಪಾಂಡೆ

‘ರಸ್ಟ್’ ಸಿನಿಮಾ(Rust Film)ಕ್ಕೆ 42 ವರ್ಷದ ಹಲ್ಯಾನಾ ಹಚಿನ್ಸ್(Halyna Hutchins) ಕ್ಯಾಮೆರಾವುಮನ್ ಆಗಿ ಕೆಲಸ ಮಾಡುತ್ತಿದ್ದರು. ಗುಂಡು ತಗುಲುತ್ತಿದ್ದಂತೆಯೇ ಹೆಲಿಕಾಪ್ಟರ್ ಮೂಲಕ ಹಚಿನ್ಸ್ ಹಾಗೂ ಗಾಯಗೊಂಡಿದ್ದ ನಿರ್ದೇಶಕ ಜೋಯೆಲ್ ಸೋವುಜ್(48)ರನ್ನು ಆಂಬ್ಯುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯ್ತು. ಆದರೆ ಅಷ್ಟರಲ್ಲಾಗಲೇ ಹಲ್ಯಾನಾ ಸಾವನ್ನಪ್ಪಿದ್ದಾರೆಂದು ವೈದ್ಯರು ಘೋಷಿಸಿದರು. ನಿರ್ದೇಶಕ ಸೋವುಜ್‌ಗೆ ಅಗತ್ಯ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಅವರು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ.

Alec-Boldvin.jpg

‘ರಸ್ಟ್’ ಸಿನಿಮಾದ ಚಿತ್ರೀಕರಣದ ವೇಳೆ ಬಂದೂಕಿಗೆ ಬ್ಲಾಂಕ್ಸ್‌ ಗುಂಡುಗಳನ್ನು ಬಳಸಲಾಗಿತ್ತು. ಈ ಗುಂಡುಗಳನ್ನು ಶೂಟ್ ಮಾಡಿದಾಗ ಶಬ್ದ ಮತ್ತು ಬೆಂಕಿ ಉತ್ಪತ್ತಿ ಆಗುತ್ತದೆ. ಇದಕ್ಕೆ ನಿಜವಾದ ಬುಲೆಟ್‌ನಷ್ಟೇ ವೇಗವಿರುತ್ತದೆ. ಕ್ಯಾಮೆರಾವುಮನ್ ಹಲ್ಯಾನಾ ಹಾಗೂ ನಿರ್ದೇಶಕ ಜೋಯೆಲ್ ಹತ್ತಿರದಲ್ಲಿದ್ದ ಕಾರಣ ಇಬ್ಬರಿಗೂ ಈ ಬ್ಲ್ಯಾಂಕ್ ಬುಲೆಟ್ ತೀವ್ರ ಗಾಯಗೊಳಿಸಿದೆ. ಬುಲೆಟ್ ನ ಹೊಡೆತಕ್ಕೆ ಹಲ್ಯಾನಾರ ಪ್ರಾಣಪಕ್ಷಿಯೇ ಹಾರಿಹೋಗಿದೆ.

ಇದನ್ನೂ ಓದಿ: ಡ್ರಗ್ಸ್ ಬಗ್ಗೆ Aryan Khan ಮತ್ತು Ananya Panday ನಡುವಿನ ಮಾತುಕತೆ ವಾಟ್ಸ್ ಆಪ್ ಚಾಟ್ ನಲ್ಲಿ ಬಹಿರಂಗ..!

ಲಾಸ್ ಏಂಜಲೀಸ್ ಮೂಲದ ಹಚಿನ್ಸ್ ಅವರನ್ನು 2019ರ ಅಮೇರಿಕನ್ ಸಿನಿಮಾಟೋಗ್ರಾಫರ್ ರೈಸಿಂಗ್ ಸ್ಟಾರ್‌( American Cinematographer's Rising Stars)ಗಳಲ್ಲಿ ಒಬ್ಬರಾಗಿ ಆಯ್ಕೆ ಮಾಡಲಾಗಿದೆ.  ಹಚಿನ್ಸ್ ಮೂಲತಃ ಉಕ್ರೇನ್‌ನವರು. ಅವರು ಆರ್ಕ್ಟಿಕ್ ವೃತ್ತದಲ್ಲಿರುವ ಸೋವಿಯತ್ ಸೇನಾ ನೆಲೆಯಲ್ಲಿ ಬೆಳದಿದ್ದರು. ಬಾಲ್ಯದಿಂದಲೇ ಅವರಿಗೆ ಕ್ಯಾಮೆರಾ ಬಗ್ಗೆ ತೀವ್ರ ಕುತೂಹಲವಿತ್ತು. ಹೀಗಾಗಿ ಅವರು ಅದನ್ನು ಫ್ಯಾಷನ್ ಆಗಿ ತೆಗೆದುಕೊಂಡು ಅತ್ಯುತ್ತಮ ಕ್ಯಾಮೆರಾವುಮನ್ ಆಗಿ ಪ್ರಸಿದ್ಧಿಯನ್ನು ಗಳಿಸಿದ್ದರು.

ಇನ್ನು ಹಚಿನ್ಸ್ ಗೆ ಆಕಸ್ಮಿಕವಾಗಿ ಮಿಸ್ ಫೈರ್ ಮಾಡಿರುವ ಅಲೆಕ್ ಬಾಲ್ಡ್ವಿನ್ ಹಾಲಿವುಡ್‌(Hollywood)ನ ಖ್ಯಾತ ಹಿರಿಯ ನಟರಾಗಿದ್ದಾರೆ.  ‘ಮಿಷನ್ ಇಂಪಾಸಿಬಲ್’, ‘ದಿ ಡಿಪಾರ್ಚರ್’, ‘ಏವಿಯೇಟರ್’ ಸೇರಿ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಚಿನ್ಸ್ ಅವರ ಆಕಸ್ಮಿಕ ಸಾವಿನಿಂದ ಇಡೀ ಚಿತ್ರತಂಡಕ್ಕೆ ಆಘಾತವಾಗಿದೆ. ಶೂಟಿಂಗ್ ಸೆಟ್ ನಲ್ಲಿದ್ದ ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ಜಿನುಗಿತ್ತು. ಪೊಲೀಸ್ ಠಾಣೆಗೆ ತೆರಳಿದ ಬಳಿಕ ಅಲೆಕ್ ಸಣ್ಣ ಮಗುವಿನಂತೆ ಅಳುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News