ಸೈಕಲ್ ಮತ್ತು ಕಾರಿನ ನಡುವೆ ಉಂಟಾದ ಅಪಘಾತದಲ್ಲಿ ಕಾರಿಗೆ ಸಿಕ್ಕಾಪಟ್ಟೆ ಡ್ಯಾಮೇಜ್ ಆಗಿರುವ ಫೋಟೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 


COMMERCIAL BREAK
SCROLL TO CONTINUE READING

ಈ ಫೋಟೋ ನೋಡಿದವರೆಲ್ಲರೂ ಈ ಸೈಕಲ್ ಅನ್ನು ಯಾವುದರಿಂದ ತಯಾರಿಸಲಾಗಿದೆ ಎಂದು ಹುಬ್ಬೇರಿಸಿದ್ದಾರೆ. ಯಾಕಂದ್ರೆ ಸೈಕಲ್ ಮತ್ತು ಕಾರಿನ ನಡುವೆ ಅಪಘಾತ ನಡೆದರೆ ಸೈಕಲ್ ಡ್ಯಾಮೇಜ್ ಆಗೋದು ಸಾಮಾನ್ಯ. ಆದರೆ ಈ ಘಟನೆಯಲ್ಲಿ ಸೈಕಲ್'ಗೆ ಬದಲಾಗಿ ಕಾರಿನ ಬಂಪರ್ ಸಂಪೂರ್ಣ ಹಾನಿಯಾಗಿದೆ. 


ಅಷ್ಟಕ್ಕೂ ಈ ಘಟನೆ ನಡೆದಿರುವುದು ದಕ್ಷಿಣ ಚೀನಾದಲ್ಲಿ. ಇಲ್ಲಿನ ಶೆನ್​ಝೆನ್​ ಪಟ್ಟಣದಲ್ಲಿ ಕಾರು ಮತ್ತು ಸೈಕಲ್​ ಮುಖಾಮುಖಿಯಾಗಿ ಡಿಕ್ಕಿಯಾಗಿತ್ತು. ಈ ಘಟನೆಯ ವೀಡಿಯೋವನ್ನು ಸಿಜಿಟಿಎನ್ ಚಾನೆಲ್ ಬಿಡುಗಡೆ ಮಾಡಿದೆ



ಈ ಚಿತ್ರ ನಕಲಿ ಎಂದು ಸ್ಥಳಿಯ ಮಾಧ್ಯಮಗಳು ಹೇಳಿವೆಯಾದರೂ, ಪೊಲೀಸರು ಇದನ್ನು ಅಲ್ಲಗಳೆದಿದ್ದಾರೆ. ಈ ವೀಡಿಯೋ ನೈಜ ಅಪಘಾತದದ್ದು. ಈ ಚಿತ್ರವನ್ನು ಎಡಿಟ್ ಆಗಲೀ ಫೋಟೋಶಾಪ್ ಆಗಲೀ ಮಾಡಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಈ ಫೋಟೋ ಇಂಟರ್ನೆಟ್'ನಲ್ಲಿ ಸಖತ್ ವೈರಲ್ ಆಗಿದೆ.