ನವದೆಹಲಿ: ಮೊಟ್ಟೆ(Eggs)ಗಳನ್ನು ಗುಳುಂ ಮಾಡಲು ಬಂದಿದ್ದ ಹಾವನ್ನು ಕೋಳಿಯೊಂದು ಕುಕ್ಕಿ ಕುಕ್ಕಿ ಓಡಿಸಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗುತ್ತಿದೆ. ಮೊಟ್ಟೆ ನುಂಗುವ ಆಸೆಯಿಂದ ಅದೆಲ್ಲಿದಂಲೋ ಬಂದ ಕಪ್ಪು ಹಾವು ಕೋಳಿ ಫಾರ್ಮ್ ಗೆ ನುಗ್ಗಿದೆ. ಸರಸರಣೆ ಏರಿ ಕೋಳಿ ಗೂಡಿನಲ್ಲಿ ಹತ್ತಿ ಕುಳಿತಿದೆ. ಈ ವೇಳೆ ಅಲ್ಲೇ ಇದ್ದ ಕೋಳಿಯೊಂದು ತನ್ನ ಮೊಟ್ಟೆಗಳನ್ನು ಗುಳುಂ ಮಾಡಲು ಬಂದ ಹಾವಿಗೆ ಪ್ರತಿರೋಧ ಒಡ್ಡಿದೆ.


COMMERCIAL BREAK
SCROLL TO CONTINUE READING

ತನ್ನ ಮೊಟ್ಟೆಗಳನ್ನು ತಿನ್ನಲು ಬಂದ ಹಾವಿಗೆ ಕೋಳಿ(Chicken) ಸರಿಯಾಗಿಯೇ ಬುದ್ದಿ ಕಲಿಸಿದೆ. ಹಾವು ಗೂಡು ಏರಿ ಬರುತ್ತಲೇ ಕೋಳಿ ಮೊಟ್ಟೆಗಳ ಮೇಲೆ ಏರಿ ಕುಳಿತು ಅವುಗಳಿಗೆ ರಕ್ಷಣೆ ನೀಡಿದೆ. ಜೋರಾಗಿ ಕೂಗುತ್ತಾ ಕೋಳಿ ಹಾವಿಗೆ ಅವಾಜ್ ಹಾಕಿದೆ. ಇದರಿಂದ ಬೆದರಿದ ಹಾವು ಸಂದಿಯೊಂದರಲ್ಲಿ ಅಡಗಿ ಕುಳಿತುಕೊಂಡಿದೆ. ಕೋಳಿಯ ಕೂಗು ಕೇಳಿಸಿಕೊಂಡ ಫಾರ್ಮ್ ಮಾಲೀಕರು ಕೂಡಲೇ ಗೂಡಿನತ್ತ ಓಡೋಡಿ ಬಂದಿದ್ದಾರೆ.


Viral Video: ಮದುವೆ ಮಂಟಪದಲ್ಲಿಯೇ ವರನಿಗೆ ಬಿತ್ತು ವಧುವಿನಿಂದ ಏಟು!: ಕಾರಣವೇನು ಗೊತ್ತಾ?


ಹಾವು(Snake) ಇರುವ ವಾಸನೆ ಅರಿತ ನಾಯಿಮರಿಯೊಂದು ಸಂದಿಯ ಬಳಿಗೆ ಬಂದು ಬೊಗಳಿದೆ. ಏನಿರಬಹುದು ಎಂದು ಇಣುಕಿ ನೋಡಿದಾಗ ಕರಿ ಹಾವು ಬುಸುಗುಡುತ್ತ ಗೂಡಿನೊಳಗೆ ಕುಳಿತಿರುವುದನ್ನು ಕಂಡು ಕೋಳಿ ಫಾರ್ಮ್ ಮಾಲಕಿ ಹೌಹಾರಿದ್ದಾಳೆ. ಇನ್ನು ತಡಮಾಡಿದರೆ ಕೋಳಿ ಮತ್ತು ಮೊಟ್ಟೆಗಳಿಗೆ ತೊಂದರೆ ಕೊಡುತ್ತದೆ ಎಂದರಿತ ಮಾಲಕಿ ಒಂದು ಕೋಲಿನಿಂದ ಗೂಡಿನಲ್ಲಿದ್ದ ಹಾವನ್ನು ಕೆಳಕ್ಕೆ ತಳ್ಳಿದ್ದಾಳೆ.


ಗೂಡಿನಿಂದ ನೆಲಕ್ಕೆ ಬೀಳುತ್ತಲೇ ಹಾವಿನ ಮೇಲೆ ಕೋಳಿ(Chicken) ದಾಳಿ ನಡೆಸಿದೆ. ಚೀರಾಡುತ್ತಾ ನನ್ನ ಮೊಟ್ಟೆ ತಿನ್ನಲು ಬಂದಿದ್ದೀಯಾ ಎಂದು ಹಾವಿಗೆ ಕುಕ್ಕಲು ಶುರು ಮಾಡಿದೆ. ಈ ವೇಳೆ ಕೋಳಿಗೆ ಸುಮ್ಮನಿರುವಂತೆ ಅದರ ಮಾಲಕಿ ಹೇಳುತ್ತಾಳೆ. ಆದರೆ ಕೋಳಿ ಮಾತ್ರ ಕುಕ್ಕಿ ಕುಕ್ಕಿ ಹಾವಿನ ಮೇಲೆ ದಾಳಿ ನಡೆಸಿದೆ. ಒಂದು ಕಡೆ ನಾಯಿಮರಿ ಬೊಗಳುವುದು, ಇನ್ನೊಂದೆಡೆ ಕೋಳಿ ಕಾಟದಿಂದ ಬೇಸತ್ತ ಹಾವು ಜೀವ ಉಳಿದರೆ ಸಾಕು ಅಂತಾ ಓಡಿಹೋಗಲು ಪ್ರಯತ್ನಿಸಿದೆ.


ಇದನ್ನೂ ಓದಿ: RBI Alert : ಹಳೆಯ ನಾಣ್ಯ ಅಥವಾ ನೋಟು ಮಾರಾಟ ಮಾಡುವ ಮುನ್ನ ಎಚ್ಚರ..! ಆರ್‌ಬಿಐ ನೀಡಿದೆ ಮಹತ್ವದ ಸಂದೇಶ


ಕುಕ್ಕುತ್ತಿದ್ದ ಕೋಳಿಯಿಂದ ಬಿಡಿಸಿಕೊಂಡ ಹಾವು ಸರಸರನೆ ಓಡಿ ಫಾರ್ಮ್ ಹೊರಗಿನ ಬಿಲ ಸೇರಿಕೊಂಡಿದೆ. ವೈರಲ್ ಹಾಗ್(Viral Hog) ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋವ(Viral Video)ನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಕೋಳಿಯ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿ ಅನೇಕರು ಕಾಮೆಂಟ್ ಮಾಡಿದ್ದಾರೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.