Viral News: ಕಾಡಿನ ರಾಜ ಸಿಂಹ ಒಂದೊಮ್ಮೆ ಬೇಟೆಗಿಳಿದರೆ, ಕಾಡಿನ ಬಹುತೇಕ ಪ್ರಾಣಿಗಳು ಸಿಂಹದ ಮುಂದೆ ಮಂಡಿಯೂರುತ್ತವೆ. ಸಿಂಹಗಳ ಬೇಟೆಯ ಅಪಾಯಕಾರಿ ಮತ್ತು ಆಕ್ರಮಣಕಾರಿ ದೃಶ್ಯದ ಹಲವಾರು ವಿಡಿಯೋಗಳನ್ನು ನೀವೂ ನೋಡಿರಬಹುದು. ಆದರೆ ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಸಿಂಹಗಳ ಹಿಂಡೊಂದು ನಡೆಸುತ್ತಿರುವ ಅಪಾಯಕಾರಿ ದಾಳಿಯ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಸಿಂಹಗಳ ದಂಡೊಂದು ನೀರು ಕುದುರೆಯ ಮೇಲೆ ದಾಳಿ ನಡೆಸುತ್ತಿದೆ. ಆದರೆ ಅಷ್ಟೊತ್ತಿಗೆ ಈ ಕಾಳಗಕ್ಕೆ ಮನುಷ್ಯರ ಎಂಟ್ರಿಯಾಗುತ್ತದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-Video : ಇಸ್ತಾನ್‌ಬುಲ್'ನಲ್ಲಿ ಆತ್ಮಾಹುತಿ ಬಾಂಬ್ ದಾಳಿ, ನಾಲ್ವರ ಸಾವು, 17 ಕ್ಕೂ ಹೆಚ್ಚು ಜನ ಗಾಯ!


ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನವನದಿಂದ ಹೊರಹೊಮ್ಮಿದೆ. ಹಿಪಪಾಟಮಸ್ ಅನ್ನು ಕೆಲವು ಪರಭಕ್ಷಕ ಸಿಂಹಗಳು ಸುತ್ತುವರೆದಿರುವುದನ್ನು ನೀವು ವೀಡಿಯೊದಲ್ಲಿ ಕಾಣಬಹುದು. ಸಿಂಹಗಳು ಈ ದಾಳಿ ನಡೆಸುತ್ತಿರುವಾಗ ಅಲ್ಲಿ ಉದ್ಯಾನವನಕ್ಕೆ ಭೇಟಿ ನೀಡಲು ಬಂದ ಪ್ರವಾಸಿಗರು ತಲುಪುತ್ತಾರೆ. ಹಿಪ್ಪೋ ತಮ್ಮ ಕಾರಿನ ಮೇಲೆ ನಡೆಸಲು ಯತ್ನಿಸುತ್ತಿರುವುದನ್ನು ಗಮನಿಸಿದ ಪ್ರವಾಸಿಗರು, ಕೂಡಲೇ ಅಲ್ಲಿಂದ ಕಾಲ್ಕಿತ್ತು ದೂರಕ್ಕೆ ಸರಿಯುತ್ತಾರೆ. ಸುಮಾರು 4 ರಿಂದ 5 ವಾಹನಗಳನ್ನು ನೀವು ವಿಡಿಯೋದಲ್ಲಿ ನೋಡಬಹುದು. ಸ್ವಲ್ಪ ಸಮಯದ ನಂತರ, ಹಿಪಪಾಟಮಸ್ ಈ ಸಿಂಹಗಳಿಂದ ತಪ್ಪಿಸಿಕೊಳ್ಳಲು ಮರಗಳು ಮತ್ತು ಪೊದೆಗಳ ನಡುವೆ ಹೋಗುತ್ತದೆ, ಆದರೆ ಸಿಂಹಗಳು ಅದನ್ನು ಬೆನ್ನಟ್ಟಲು ಪ್ರಾರಂಭಿಸುತ್ತವೆ.


Snake Video : ಹಾವಿನ ಚರ್ಮ ಹೀಗೆ ಬದಲಾಗುತ್ತದೆ! ಪೊರೆಬಿಡುವ ವಿಚಿತ್ರ ದೃಶ್ಯ ನೋಡಿದ್ರೆ ಶಾಕ್‌ ಆಗ್ತೀರಾ


ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಕಾರಿನೊಳಗಿಂದ ರೆಕಾರ್ಡ್ ಮಾಡಲಾಗಿದೆ. ಈ ವೀಡಿಯೋ ಹಲವು ವರ್ಷಗಳಷ್ಟು ಹಳೆಯದಾದರೂ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಸಿಂಹಗಳ ಹಿಂಡಿಗೆ ಈ ಬೇಟೆ ಔತಣವೇ ಆಗಿತ್ತೆಂದರೆ ಇಲ್ಲಿ ತಪ್ಪಾಗಲಾರದು. ಏಕೆಂದರೆ ಹಿಪಪಾಟಮಸ್‌ನ ಸಾಮಾನ್ಯ ತೂಕ ಸುಮಾರು 3 ಸಾವಿರ ಕೆ.ಜಿ.ಯಷ್ಟಿರುತ್ತದೆ. ಬಡಪಾಯಿ ಹಿಪಪಾಟಮಸ್ ತನ್ನ ಪ್ರಾಣ ರಕ್ಷಿಸಿಕೊಳ್ಳಲು ಯಶಸ್ವಿಯಾಗಿಲ್ಲ ಮತ್ತು ಇಡೀ ಇಡೀ ಸಿಂಹದ ಹಿಂಡಿನ ಹಸಿವನ್ನು ನೀಗಿಸಲು ತನ್ನ ಪ್ರಾಣವನ್ನೇ ತ್ಯಜಿಸಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.