Dallas Aircraft crash video: ಏರ್ ಶೋನಲ್ಲಿ ಯುದ್ಧ ವಿಮಾನಗಳ ಮುಖಾಮುಖಿ: 6 ಮಂದಿಯ ದುರಂತ ಅಂತ್ಯ!

Dallas Aircraft crash video: ಬೋಯಿಂಗ್ ಬಿ -17 ಫ್ಲೈಯಿಂಗ್ ಫೋರ್ಟ್ರೆಸ್ ಮತ್ತು ಬೆಲ್ ಪಿ -63 ಕಿಂಗ್‌ಕೋಬ್ರಾ ಎಂಬ ವಿಮಾನಗಳು ಏರ್ ಶೋ ಸಂದರ್ಭದಲ್ಲಿ ಡಿಕ್ಕಿ ಹೊಡೆದಿವೆ. ವಿಮಾನಗಳು ವೈಮಾನಿಕ ಪ್ರದರ್ಶನದ ಭಾಗವಾಗಿದ್ದರಿಂದ ಇಡೀ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಧಿಕಾರಿಗಳು ಸಾವುನೋವುಗಳನ್ನು ದೃಢಪಡಿಸಿಲ್ಲ ಆದರೆ ವರದಿಗಳ ಪ್ರಕಾರ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಅನುಮಾನ ವ್ಯಕ್ತವಾಗಿದೆ.

Written by - Bhavishya Shetty | Last Updated : Nov 13, 2022, 11:23 AM IST
    • ವೈಮಾನಿಕ ಪ್ರದರ್ಶನದಲ್ಲಿ ಎರಡು ವಿಶ್ವ ಸಮರ 2 ಯುಗದ ವಿಮಾನಗಳು ಡಿಕ್ಕಿ
    • ವರದಿಗಳ ಪ್ರಕಾರ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಅನುಮಾನ
    • ಕ್ಯಾಮೆರಾದಲ್ಲಿ ಸೆರೆಯಾದ ಭೀಕರ ಅಪಘಾತದಲ್ಲಿ ದೃಶ್ಯಗಳು
Dallas Aircraft crash video: ಏರ್ ಶೋನಲ್ಲಿ ಯುದ್ಧ ವಿಮಾನಗಳ ಮುಖಾಮುಖಿ: 6 ಮಂದಿಯ ದುರಂತ ಅಂತ್ಯ!  title=
Dallas Aircraft crash video

Dallas Aircraft crash video: ಕಳೆದ ದಿನ ಡಲ್ಲಾಸ್‌ನಲ್ಲಿ ನಡೆದ ವೈಮಾನಿಕ ಪ್ರದರ್ಶನದಲ್ಲಿ ಎರಡು ವಿಶ್ವ ಸಮರ 2 ಯುಗದ ವಿಮಾನಗಳು ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ಕ್ಯಾಮೆರಾದಲ್ಲಿ ಸೆರೆಯಾದ ಭೀಕರ ಅಪಘಾತದಲ್ಲಿ ದೃಶ್ಯಗಳು ಮೈ ಜುಂ ಎಂನಿಸುವಂತಿದೆ.

ಇದನ್ನೂ ಓದಿ: ಯುಎಸ್ ಕರೆನ್ಸಿ ಮಾನಿಟರಿಂಗ್ ಪಟ್ಟಿಯಿಂದ ಭಾರತವನ್ನು ಅಮೆರಿಕಾ ತೆಗೆದು ಹಾಕಿದ್ದೇಕೆ...!

ಬೋಯಿಂಗ್ ಬಿ -17 ಫ್ಲೈಯಿಂಗ್ ಫೋರ್ಟ್ರೆಸ್ ಮತ್ತು ಬೆಲ್ ಪಿ -63 ಕಿಂಗ್‌ಕೋಬ್ರಾ ಎಂಬ ವಿಮಾನಗಳು ಏರ್ ಶೋ ಸಂದರ್ಭದಲ್ಲಿ ಡಿಕ್ಕಿ ಹೊಡೆದಿವೆ. ವಿಮಾನಗಳು ವೈಮಾನಿಕ ಪ್ರದರ್ಶನದ ಭಾಗವಾಗಿದ್ದರಿಂದ ಇಡೀ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಧಿಕಾರಿಗಳು ಸಾವುನೋವುಗಳನ್ನು ದೃಢಪಡಿಸಿಲ್ಲ ಆದರೆ ವರದಿಗಳ ಪ್ರಕಾರ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಅನುಮಾನ ವ್ಯಕ್ತವಾಗಿದೆ.

ಪ್ರತ್ಯಕ್ಷದರ್ಶಿಗಳು ಈ ಘಟನೆಯನ್ನು ಕಂಡು ದಂಗಾಗಿದ್ದಾರೆ. ಈ ಬಗ್ಗೆ ವ್ಯಕ್ತಿಯೊಬ್ಬರು ಮಾತನಾಡಿದ್ದು, “ನಾನು ಅಲ್ಲಿಯೇ ನಿಂತಿದ್ದೆ. ಈ ಘಟನೆ ನಡೆದಾಗ ನನಗೆ ನಂಬಲು ಸಾಧ್ಯವಾಗಲಿಲ್ಲ. ಶಾಕ್ ಗೆ ಒಳಗಾದೆ. ಸುತ್ತಮುತ್ತಲಿನವರೆಲ್ಲರೂ ಏದುಸಿರು ಬಿಡುತ್ತಿದ್ದರು. ಎಲ್ಲರೂ ಕಣ್ಣೀರು ಸುರಿಸುತ್ತಿದ್ದರು. ಎಲ್ಲರೂ ಆಘಾತಕ್ಕೊಳಗಾಗಿದ್ದರು" ಎಂದರು.

ಅಪಘಾತದ ವೀಡಿಯೊಗಳು ಹೃದಯವಿದ್ರಾವಕವಾಗಿವೆ ಎಂದು ಡಲ್ಲಾಸ್ ಮೇಯರ್ ಎರಿಕ್ ಜಾನ್ಸನ್ ಹೇಳಿದ್ದಾರೆ. ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ಸ್ಥಳೀಯ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಬೆಂಬಲದೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸುತ್ತಿದೆ ಎಂದು ಮೇಯರ್ ಹೇಳಿದರು.

ಕಿಂಗ್‌ಕೋಬ್ರಾ ಯುಎಸ್ ಯುದ್ಧ ವಿಮಾನವಾಗಿದೆ. ಯುದ್ಧದ ಸಮಯದಲ್ಲಿ ಸೋವಿಯತ್ ಪಡೆಗಳು ಇದನ್ನು ಹೆಚ್ಚಾಗಿ ಬಳಸಿದ್ದವು. B-17 ವಿಶ್ವ ಸಮರ 2ರ ಸಮಯದಲ್ಲಿ ಜರ್ಮನಿಯ ವಿರುದ್ಧದ ದಾಳಿಯಲ್ಲಿ ಬಳಸಲಾದ ನಾಲ್ಕು-ಎಂಜಿನ್ ಬಾಂಬರ್ ಆಗಿದೆ.

ಇದನ್ನೂ ಓದಿ: World Population: ಮುಂದಿನ 2 ದಿನಗಳಲ್ಲಿ 800 ಕೋಟಿ ತಲುಪಲಿದೆ ವಿಶ್ವದ ಜನಸಂಖ್ಯೆ!

ಹೆಚ್ಚಿನ B-17 ಗಳನ್ನು ಯುದ್ಧದ ನಂತರ ಸ್ಕ್ರ್ಯಾಪ್ ಮಾಡಲಾಗಿದೆ ಮತ್ತು ವಸ್ತುಸಂಗ್ರಹಾಲಯಗಳು, ಏರ್ ಶೋಗಳಲ್ಲಿ ಮಾತ್ರ ಗುರುತಿಸಬಹುದಾಗಿದೆ.

 

 

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Trending News