ನವದೆಹಲಿ: Viral Video - ಪ್ರಸ್ತುತ ಭಾರತ ಕೊರೊನಾ ವೈರಸ್ (Coronavirus In India) ವಿರುದ್ಧ ಹೋರಾಡುತ್ತಿದೆ. ಕೊರೊನಾ ವೈರಸ್ ನ ಎರಡನೆಯ ಅಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಭಾರಿ ನಷ್ಟವನ್ನುಂಟು ಮಾಡುತ್ತಿದೆ. ದಿನದಿಂದ ದಿನಕ್ಕೆ ಕೊರೊನಾದಿಂದ ಸೋಂಕಿತರಾಗುವವರು ಹಾಗೂ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ಇನ್ನೊಂದೆಡೆ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಸಿಗದೇ ಜನರು ಪರದಾಡುವಂತಹ ಸ್ಥಿತಿ ಎದುರಾಗಿದೆ. ವಿಶ್ವದ ಹಲವು ದೇಶಗಳು ಭಾರತದ ನೆರವಿಗೆ ಧಾವಿಸುತ್ತಿವೆ ಹಾಗೂ ಎಲ್ಲಾ ಭಾರತೀಯರ ಸುರಕ್ಷತೆಗಾಗಿ ಪಾರ್ಥನೆ ಸಲ್ಲಿಸುರ್ರಿದ್ದಾರೆ. ಇಸ್ರೇಲ್ ಕೂಡ ಭಾರತೀಯರಿಗಾಗಿ ಜಪ ಮಾಡಿದೆ.


COMMERCIAL BREAK
SCROLL TO CONTINUE READING

'ಓಂ ನಮಃ ಶಿವಾಯ್' ಮಂತ್ರ ಹೇಳಿದ ಇಸ್ರೇಲ್ ಜನರು
ಇಸ್ರೇಲ್ ನಲ್ಲಿ ಭಾರತೀಯರ ಸುರಕ್ಷತೆಗಾಗಿ ಸಾಮೂಹಿಕವಾಗಿ  'ಓಂ ನಮಃ ಶಿವಾಯ್' (Om Namah Shivay) ಮಂತ್ರ ಹೇಳಲಾಗಿದೆ. ಸಾಮಾಜಿಕ ಮಾಧಯ್ಮಗಳಲ್ಲಿ ಈ ಕುರಿತಾದ ವಿಡಿಯೋ ಇದೀಗ ಬಾರಿ ವೈರಲ್ ಆಗುತ್ತಿದೆ. ಇದನ್ನು ನೋಡಿ ನೀವೂ ಕೂಡ ಇಮೋಶನಲ್ (Emotional Video) ಆಗುವಿರಿ. ಈ ವಿಡಿಯೋ ದಲ್ಲಿ ಯಾವ ರೀತಿ ಜನಸಾಮಾನ್ಯರು ಸಾರ್ವಜನಿಕ ಸ್ಥಳಗಳಲ್ಲಿ ನೆರೆದು ಕೊವಿಡ್-19 ನಿಂದ ಭಾರತೀಯರ ರಕ್ಷಣೆಗೆ  ಓಂ ನಮಃ ಶಿವಾಯ್ ಮಂತ್ರ ಹೇಳುತ್ತಿದ್ದಾರೆ ಎಂಬುದನ್ನು ನೀವು ಸ್ಪಷ್ಟವಾಗಿ ಗಮನಿಸಬಹುದಾಗಿದೆ. ಈ ವಿಡಿಯೋ ಎಲ್ಲ ಭಾರತೀಯರ ಮನ ಮುಟ್ಟುವಂತಿದೆ.



ಇದನ್ನೂ ಓದಿ-ಕಂಪ್ಲೀಟ್ ಲಾಕ್ ಡೌನ್ ಅನುಷ್ಠಾನಕ್ಕೆ ಬರುತ್ತಾ..? ಐಎಂಎ ಹೇಳಿದ್ದೇನು..?


ಈ ವಿಡಿಯೋದಲ್ಲಿ ಜನರು ಕುಣಿಯುತ್ತಿದ್ದಾರೆ, ಹಾಡುತ್ತಿದ್ದಾರೆ ಹಾಗೂ ತೇಲಾಡುತ್ತಿದ್ದಾರೆ.  ಇತ್ತೀಚೆಗಷ್ಟೇ ಇಸ್ರೇಲ್ (Israel) ಕೊರೊನಾ ಮುಕ್ತ ರಾಷ್ಟ್ರ ಎಂದು ಘೋಷಣೆಯಾಗಿದೆ ಹಾಗೂ ಇಸ್ರೇಲ್ ಭಾರತದ ಅತ್ಯಂತ ಹತ್ತಿರದ ಮಿತ್ರರಾಷ್ಟ್ರವಾಗಿದೆ. ಉಭಯ ರಾಷ್ಟ್ರಗಳು ಪರಸ್ಪರರ ಸುಖ-ದುಃಖಗಳಲ್ಲಿ ಶಾಮೀಲಾಗುತ್ತವೆ. ಇಂತಹುದರಲ್ಲಿ ಇಸ್ರೇಲ್ ನ ಈ ಪ್ರಯತ್ನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.


ಇದನ್ನೂ ಓದಿ- 14 ದಿನಗಳ 'ಸಂಪೂರ್ಣ ಲಾಕ್ ಡೌನ್' ಮಾರ್ಗಸೂಚಿಯಲ್ಲಿ ಬದಲಾವಣೆ..!


ಲಕ್ಷಾಂತರ ವೀಕ್ಷಣೆಗೆ ಒಳಗಾಗಿದೆ ಈ ವೀಡಿಯೊ
ಈ ವಿಡಿಯೋ ಅನ್ನು ಇದುವರೆಗೆ ಲಕ್ಷಾಂತರ ಜನರು ವಿಕ್ಷೀಸಿದ್ದಾರೆ. ಈ ವಿಡಿಯೋ ಕ್ಯಾಪ್ಶನ್ ನಲ್ಲಿ 'ಗೆಟ್ ವೆಲ್ ಸೂನ್ ಇಂಡಿಯಾ, ಬ್ಲೆಸ್ಸಿಂಗ್ಸ್ ಫ್ರಮ್ ಇಂಡಿಯಾ' ಎಂದು ಬರೆಯಲಾಗಿದೆ. ಈ ವಿಡಿಯೋಗೆ ನಾಲ್ಕು ಸಾವಿರಕ್ಕೂ ಅಧಿಕ ಜನರು ಕಾಮೆಂಟ್ ಮಾಡಿದ್ದಾರೆ. ಎಲ್ಲ ಜನರು ಇಸ್ರೇಲ್ ನ ಈ ಹೆಜ್ಜೆಯನ್ನು ಸ್ವಾಗತಿಸುತ್ತಿದ್ದಾರೆ.


ಇದನ್ನೂ ಓದಿ- Delhi Lockdown : ರಾಷ್ಟ್ರ ರಾಜಧಾನಿಯಲ್ಲಿ ಮೇ 17ರ ವರೆಗೆ ಮತ್ತೆ ಲಾಕ್‌ಡೌನ್ ವಿಸ್ತರಣೆ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.