ಲಂಡನ್ :  ಅತ್ತೆ ಸೊಸೆಯರ ಜಗಳ ಯಾವಾಗಲೂ ಸ್ವಾರಸ್ಯಕರವಾಗಿರುತ್ತದೆ. ಅತ್ತೆ ಸೊಸೆಯ ಸಂಬಂಧ  ಎಷ್ಟು ನಾಜೂಕಾಗಿರುತ್ತದೆಯೋ, ಕೆಲವೊಮ್ಮೆ ಅಷ್ಟೇ ಗಾಢವೂ ಆಗಿರುತ್ತದೆ. ಅತ್ತೆ ಸೊಸೆಯರ ಸಂಬಂಧದ ಕತೆಗಳು ಎಷ್ಟು ಸುತ್ತಿದರೂ ಅದು ಮುಗಿಯುವುದಿಲ್ಲ. ಹಾಗಾಗಿಯೇ ಅತ್ತೆ ಸೊಸೆಯರ ಕಥೆ ಹೊಂದಿರುವ ಟೀವಿ ಸೀರಿಯಲ್ ಗಳು ಐದಾರು ವರ್ಷ ಕಳೆದರೂ ಮುಗಿಯುವ ಲಕ್ಷಣ ಕಾಣುವುದಿಲ್ಲ.  ಅತ್ತೆ - ಸೊಸೆಯರ ಸಂಬಂಧ ಹಾಗಾಗಿ ಬಹಳ ಕ್ರೇಜಿ ಆಗಿರುತ್ತದೆ.  ನಾವಿಲ್ಲಿ ಹೇಳುತ್ತಿರುವುದು ಅತ್ತೆ ಸೊಸೆಯ ಜಗಳದ ಒಂದು ರಸ ಪ್ರಸಂಗವನ್ನು.


COMMERCIAL BREAK
SCROLL TO CONTINUE READING

ಅತ್ತೆಯ ಮಿರ ಮಿರ ಬಟ್ಟೆಯ ಮೇಲೆ ಊಟ ಚೆಲ್ಲಿದ ವೇಟರ್.!
ತನ್ನ ಮದುವೆಯ (Marriage)ದಿನ ಗಡಿಬಿಡಿಯಲ್ಲಿ ವೇಟರ್ ಕೈಯಲ್ಲಿದ್ದ ಊಟದ ತಟ್ಟೆ ಅತ್ತೆಯ ಮಿರ ಮಿರ ಮಿಂಚುವ ಶ್ವೇತ ವರ್ಣದ ಬಟ್ಟೆ ಮೇಲೆ ಆಕಸ್ಮಿಕವಾಗಿ ಬಿತ್ತು.   ಬಟ್ಟೆ ಮೇಲೆ ಊಟದ ಚೆಲ್ಲಿದ್ದು ನೋಡಿ ಅತ್ತೆ ಕೋಪದಲ್ಲಿ ದೂರ್ವಾಸ ಮುನಿಯಂತಾಗಿಬಿಟ್ಟಿದ್ದರು. ವೇಟರ್ ಗೆ ಭೂಮಿ ಕಂಪಿಸಿದ  ದರ್ಶನವಾಗುತ್ತಿತ್ತು. ಆದರೆ, ಅಷ್ಟರಲ್ಲಿ ಆಗಿದ್ದೇ ಬೇರೆ. ಆ ಹೊತ್ತಲ್ಲೆ ಅಲ್ಲಿಗೆ ಬಂದ ಸೊಸೆ ಅತ್ತೆಯ ಮಿರ ಮಿರ ಬಟ್ಟೆ ಹಾಳಾದ ಖುಷಿಗೆ ವೇಟರ್ಗೆ  ಬರೊಬ್ಬರಿ 7500 ರೂಪಾಯಿ ಟಿಪ್ಸ್ (Tips) ಕೊಟ್ಟು, ಆಚೆಗೆ ಕಳುಹಿಸಿಬಿಟ್ಟಿದ್ದರು. 


ಇದನ್ನೂ ಓದಿ :  Imran Khan: ಬಾಲಿವುಡ್ ಫಿಲ್ಮ್ ಕ್ಲಿಪ್ ಶೇರ್ ಮಾಡಿ ಟ್ರೋಲ್‌ಗೆ ಒಳಗಾದ ಇಮ್ರಾನ್ ಖಾನ್


ಟಿಕ್ ಟಾಕ್ ನಲ್ಲಿ ಈ ಕತೆ ಹೇಳಿದ ವೇಟರ್ :
ಈ ಘಟನೆ ನಡೆದಿದ್ದು ಬ್ರಿಟನ್ ನಲ್ಲಿ. ಕ್ಲೊಬಿ ಎಂಬ ಮಹಿಳೆ ಮದುವೆ ಕಾರ್ಯಕ್ರಮದಲ್ಲಿ ವೇಟರ್ ಕೆಲಸ ಮಾಡುತ್ತಿದ್ದಾಗ ಈ ಘಟನೆ ನಡೆದಿತ್ತು. ತನ್ನ ಟಿಕ್ ಟಾಕ್ (Tiktok) ಖಾತೆಯಲ್ಲಿ ಕ್ಲೊಬಿ ಈ ಘಟನೆಯ ಎಲ್ಲಾ ವಿವರ ನೀಡಿದ್ದಾರೆ. ಆಕಸ್ಮಿಕ ವಾಗಿ ಊಟ  ಅತ್ತೆಯ ಬಟ್ಟೆಯ ಮೇಲೆ ಬಿತ್ತು. ಆಗ ಸೊಸೆಗಾದ ಆನಂದಕ್ಕೆ ಪಾರವೇ ಇರಲಿಲ್ಲ. ಖುಷಿಯಲ್ಲಿ ಉಬ್ಬಿ ಹೋದ ಸೊಸೆ ಭರ್ಜರಿ ಟಿಪ್ಸ್ ಕೊಟ್ಟು ಬಿಟ್ರು ಎಂದು ಹೇಳಿದ್ದಾರೆ ಕ್ಲೋಬಿ. ಈ ವಿಡಿಯೊ ಈ ವೈರಲ್ (Viral) ಆಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. 


ಅತ್ತೆಯ ಬಿಳಿ ದಿರಿಸಿನ ಮೇಲೆ ಸೊಸೆಗೆ ಕೋಪ  ಇತ್ತು:
ಮದುವೆಗೆ ಬಿಳಿ ದಿರಸು ಧರಿಸಿ ಬಂದ ಅತ್ತೆಯ ಮೇಲೆ ಸೊಸೆಗೆ ಸಿಕ್ಕಾಪಟ್ಟೆ ಕೋಪ  ಇತ್ತು.  ಸಾಮಾನ್ಯವಾಗಿ ಮದುವೆಯ ದಿನ ವಧು (Bride) ಬಿಳಿ ಬಣ್ಣದ ದಿರಿಸು ಧರಿಸುತ್ತಾಳೆ. ಉಳಿದವರು ಧರಿಸುವುದಿಲ್ಲ.  ಅತ್ತೆಯ ಬಿಳಿ ಬಟ್ಟೆಯ ಮೇಲೆ ಊಟ ಚೆಲ್ಲಿದಾಗ ಸೊಸೆಗೆ ಆನಂದವಾಗಿದ್ದು ಇದೇ ಕಾರಣಕ್ಕೆ. ಅತ್ತೆಯ ಡ್ರೆಸ್ ಹಾಳಾದ ಖುಷಿ ತಡೆಯಲಾಗದೆ ಸೊಸೆ ಓಡಿ ಹೋಗಿ ವೇಟರ್ ಗೆ 100 ಡಾಲರ್ ಅಂದರೆ ಭರ್ತಿ 7500 ಟಿಪ್ಸ್ ಕೊಟ್ಟು ಬಿಟ್ಟಿದ್ದರು. ಪಾಪ  ಅತ್ತೆ ಮತ್ತೆ ಮನೆಗೆ ಹೋಗಿ ಡ್ರೆಸ್ ಚೇಂಜ್ ಮಾಡಿಕೊಂಡು ಬಂದು ಮದುವೆ ಮುಗಿಸಿದ್ರು.


ಇದನ್ನೂ ಓದಿ :  ಭಾರತದಿಂದ ಹಿಂತಿರುಗಿದವರಿಗೆ 10 ದಿನಗಳ ಕ್ವಾರಂಟೈನ್ ಹೇರಿದ ಫ್ರಾನ್ಸ್


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.