ನವದೆಹಲಿ: ಸೋಶಿಯಲ್ ಮೀಡಿಯಾ ದೈತ್ಯ ಫೇಸ್ ಬುಕ್ (facebook) ತನ್ನ ಬಳಕೆದಾರರಿಗೆ ಅತ್ಯುತ್ತಮ ಫೀಚರ್ ಗಳನ್ನು ನೀಡುತ್ತಿದೆ. ಫೇಸ್ ಬುಕ್ ದಿನೇ ದಿನೇ ಅಪ್ ಡೇಟ್ ಆಗುತ್ತಲೇ ಇದೆ. ಇದೀಗ ಫೇಸ್ ಬುಕ್ ಅಡಿಯೋ ಆಧಾರಿತ ಸೋಶಿಯಲ್ ಆಪ್ ಕ್ಲಬ್ ಹೌಸ್ (Club house) ರೀತಿಯ ಫೀಚರ್ ಗಳನ್ನು ಹೊರತರುತ್ತಿದೆ. ಈ ಫೀಚರಿನ ಹೆಸರು ಲೈವ್ ಆಡಿಯೋ ರೂಮ್ಸ್( Live Audio Rooms).
ಫೇಸ್ ಬುಕ್ ಯೂಸ್ ಮಾಡಿ, ಕೈತುಂಬಾ ದುಡ್ಡು ಮಾಡಿ :
ಫೇಸ್‌ಬುಕ್ (Facebook) ಆಡಿಯೊ ರೂಮ್ಸ್ ಪರಿಕಲ್ಪನೆಯು ಕ್ಲಬ್‌ಹೌಸ್‌ನಂತೆಯೇ (Club house) ಇದೆ. ಆದರೆ, ಫೇಸ್ ಬುಕ್ ಇಲ್ಲಿ ಅನೇಕ ಹೊಸ ಫೀಚರ್ಸ್ ಕೊಟ್ಟಿದೆ. ಉದಾಹರಣೆಗೆ, ನಿಮ್ಮ ಸಂಭಾಷಣೆಯನ್ನು ಇಲ್ಲಿ ರೆಕಾರ್ಡ್ ಮಾಡಬಹುದು. ಮತ್ತು ಅದನ್ನು ಇನ್ನೊಬ್ಬರಿಗೆ ಸೆಂಡ್ ಮಾಡಬಹುದು. ಫೇಸ್‌ಬುಕ್‌ನ ಲೈವ್ ಆಡಿಯೊ ರೂಮ್ಸ್ (Facebook live audio room) ಚಂದಾದಾರಿಕೆಗೂ ಅವಕಾಶ ಇದೆ. ಅಂದರೆ, ಅದನ್ನು ಬಳಸುವ ಯೂಸರ್ಸ್ ಪೇ ಮಾಡಬೇಕಾಗುತ್ತದೆ. ಜೊತೆಗೆ ಅಡಿಯೋ ರೂಮಿಗೆ ಎಂಟರ್ ಆಗಬಯಸುವವರೂ ದುಡ್ಡು ಕೊಡಬೇಕಾಗುತ್ತದೆ. ಈ ರೀತಿ ಇದರ ಬಳಕೆಯಿಂದ ನಿಮ್ಮ ಪಾಕೆಟ್ ತುಂಬಾ ದುಡ್ಡು ಸೇರುವ ಸಾಧ್ಯತೆಗಳೂ ಇವೆ.
ಇದನ್ನೂ ಓದಿ : ಈ ಸ್ಮಾರ್ಟ್ ಪೋನ್ ಮೇಲೆ 10,000 ರೂಪಾಯಿಗಳ ಬೆಲೆ ಕಡಿತ,..!
ಟಿಕ್ ಟಾಕ್ ಆಗಿ ಆಡಿಯೊವನ್ನು ಬಳಸಲು ಸಾಧ್ಯವಾಗುತ್ತದೆ :
ಫೇಸ್ ಬುಕ್ ಆಡಿಯೋ ರೂಮಿನಲ್ಲಿ ಟಿಕ್ ಟೋಕ್ (TikTok) ರೀತಿಯ ಫೀಚರ್ಸ್ ಕೂಡಾ ಅಳವಡಿಸಲಾಗಿದೆ. ಕೆಲವೊಂದು ಹೊಸ ಫೀಚರ್ಸ್ ಕೂಡಾ ಇವೆ. ಇದರಲ್ಲೂ ನೀವು ದುಡ್ಡು ಮಾಡಬಹುದು. ಇದರಲ್ಲಿ ಅಡಿಯೋ ಸಂಭಾಷಣೆಯನ್ನು ಸಣ್ಣ ಸಣ್ಣ ಪೀಸ್ ಮಾಡಿ ಬಳಸಬಹುದಾಗಿದೆ. ಇದಕ್ಕೆ ಚಂದಾದಾರಿಕೆ ಕೂಡಾ ಮಾಡಬಹುದು. ಈ ಫೀಚರ್ಸ್ ಗೆ ಸೌಂಡ್ ಬೈಟ್ (Soundbites) ಎಂದು ಹೆಸರಿಡಲಾಗಿದೆ. ನ್ಯೂಸ್ ಫೀಡ್ ನಲ್ಲಿಯೇ ಈ ಫೀಚರ್ಸ್ ಇದೆ. ಸೌಂಡ್ ಸ್ಟುಡಿಯೋ ಇನ್ ಯುವರ್ ಪಾಕೆಟ್ ಎಂದು ಕಂಪನಿ ಇದಕ್ಕೆ ಹೆಸರಿಟ್ಟಿದೆ.
ಮಾರ್ಕ್ ಜುಕರ್ ಬರ್ಗ್ ಹೇಳಿದ್ದೇನು..?
ತನಗೆ ಆಡಿಯೋ ಬಹಳ ಇಷ್ಟ ಎಂದು ಫೇಸ್ ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್ (Mark Zuckerberg) ಹೇಳಿದ್ದಾರೆ. ಹಾಗಾಗಿ ನೀವು ಇಲ್ಲಿ ಅಡಿಯೋ ಜೊತೆ ಮಲ್ಟಿ ಟಾಸ್ಕ್ ಮಾಡಬಹುದು. ಅಡಿಯೋ ಕೇಳುತ್ತಲೇ ನೀವು ಬೇರೆ ಇತರ ಕೆಲಸ ಕೂಡಾ ಮಾಡಬಹುದು. ಈ ಫೀಚರ್ಸ್ ಈಗ ಎಲ್ಲಾ ಬಳಕೆದಾರರಿಗೆ ಸಿಗುತ್ತಿಲ್ಲ. ಮುಂದಿನ ಕೆಲವು ದಿನಗಳಲ್ಲಿ ಈ ಫೀಚರ್ಸ್ ಎಲ್ಲರಿಗೂ ಸಿಗಲಿದೆ.
ಇದನ್ನೂ ಓದಿ : WhatsApp- ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತೆ ವಾಟ್ಸಾಪ್ ಚಾಟ್, ಯಾವುದೀ ಹೊಸ ವೈಶಿಷ್ಟ್ಯ ತಿಳಿಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.