ಭಾರತದೊಂದಿಗಿನ 3 ಯುದ್ಧದಿಂದ ಬಡತನ & ನಿರುದ್ಯೋಗ; ನಾವು ಪಾಠ ಕಲಿತಿದ್ದೇವೆಂದ ಶೆಹಬಾಜ್ ಷರೀಫ್
ನಾವು ದೇಶದಲ್ಲಿನ ಬಡತನ ಕಡಿಮೆ ಮಾಡಲು, ಸಮೃದ್ಧಿ ಸಾಧಿಸಲು. ನಮ್ಮ ಜನರಿಗೆ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯದ ಜೊತೆಗೆ ಉದ್ಯೋಗ ಒದಗಿಸಲು ಬಯಸುತ್ತೇವೆಯೇ ಹೊರತು ಬಾಂಬ್ ದಾಳಿ ನಡೆಸುವುದಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.
ನವದೆಹಲಿ: ಕಾಶ್ಮೀರದಂತಹ ಜ್ವಲಂತ ಸಮಸ್ಯೆ ಪರಿಹರಿಸಲು ನಾವು ಗಂಭೀರ ಮತ್ತು ಪ್ರಾಮಾಣಿಕವಾಗಿ ಮಾತುಕತೆ ನಡೆಸೋಣವೆಂದು ಪ್ರಧಾನಿ ಮೋದಿಯವರಿಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸಂದೇಶ ನೀಡಿದ್ದಾರೆ.
ಪಾಕಿಸ್ತಾನದ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಭಾರತ ಮತ್ತು ಪಾಕಿಸ್ತಾನ ನೆರೆಹೊರೆಯವರಾಗಿದ್ದು, ಪರಸ್ಪರ ಅರ್ಥೈಸಿಕೊಂಡು ಬಾಳಬೇಕು ಎಂದು ಹೇಳಿದ್ದಾರೆ. ‘ನಾವು ಶಾಂತಿ ಮತ್ತು ಪ್ರಗತಿಗಾಗಿ ಬದುಕುತ್ತೇವೆಯೇ ಅಥವಾ ನಾವು ಜಗಳವಾಡುತ್ತೇವೆಯೇ? ಸಮಯ ಮತ್ತು ಸಂಪನ್ಮೂಲಗಳನ್ನು ವ್ಯರ್ಥ ಮಾಡುತ್ತೇವೆ? ಎಂಬುದು ನಮಗೆ ಬಿಟ್ಟದ್ದು. ನಾವು ಭಾರತದೊಂದಿಗೆ 3 ಯುದ್ಧಗಳನ್ನು ಮಾಡಿದ್ದೇವೆ. ಆದರೆ ಇದರಿಂದ ನಮ್ಮ ಜನರಿಗೆ ಹೆಚ್ಚಿನ ದುಃಖ, ಬಡತನ ಮತ್ತು ನಿರುದ್ಯೋಗ ಸಮಸ್ಯೆಯನ್ನು ತಂದಿದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕೇರಳದ ಸಾರ್ವಜನಿಕ ಸ್ಥಳಗಳಲ್ಲಿ ಮೂಗು ಮತ್ತು ಬಾಯಿ ಮುಚ್ಚಿಕೊಳ್ಳುವಂತೆ ಸಲಹೆ
‘ನಾವು ಹಿಂದೆ ಮಾಡಿದ ತಪ್ಪುಗಳಿಂದ ಪಾಠಗಳನ್ನು ಕಲಿತಿದ್ದೇವೆ. ನಮ್ಮ ನೈಜ ಸಮಸ್ಯೆಗಳನ್ನು ಪರಿಹರಿಸಲು ನಾವು ಸಮರ್ಥರಾಗಿದ್ದು, ಶಾಂತಿಯಿಂದ ಬದುಕಲು ಬಯಸುತ್ತೇವೆ. ಮದ್ದುಗುಂಡುಗಳ ದಾಳಿಯಿಂದ ಅಮೂಲ್ಯ ಸಂಪನ್ಮೂಲಗಳನ್ನು ವ್ಯರ್ಥ ಮಾಡಬಯಸುವುದಿಲ್ಲ. ಇದು ನಾನು ಪ್ರಧಾನಿ ಮೋದಿಯವರಿಗೆ ನೀಡಲು ಬಯಸುವ ಸಂದೇಶ’ವೆಂದು ಅವರು ಹೇಳಿದ್ದಾರೆ.
‘ನಾವು ದೇಶದಲ್ಲಿನ ಬಡತನವನ್ನು ಕಡಿಮೆ ಮಾಡಲು, ಸಮೃದ್ಧಿ ಸಾಧಿಸಲು. ನಮ್ಮ ಜನರಿಗೆ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯದ ಜೊತೆಗೆ ಉದ್ಯೋಗ ಒದಗಿಸಲು ಬಯಸುತ್ತೇವೆಯೇ ಹೊರತು ಬಾಂಬ್ ದಾಳಿ ನಡೆಸುವುದಿಲ್ಲ. ನಿಮ್ಮ ಸಂಪನ್ಮೂಲಗಳನ್ನು ಮದ್ದುಗುಂಡುಗಳಿಗಾಗಿ ವ್ಯರ್ಥ ಮಾಡಲು ನಾವು ಬಯಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: 500 ವಿಮಾನಗಳನ್ನು ಖರೀದಿಸಲು ಮುಂದಾದ ಏರ್ ಇಂಡಿಯಾ
ಭಾರತದಲ್ಲಿ ಅಲ್ಪಸಂಖ್ಯಾತರು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಇದೇ ವೇಳೆ ಆರೋಪಿಸಿರುವ ಷರೀಫ್ ಕಾಶ್ಮೀರದ ಕುರಿತು ಮಾತನಾಡಿದ್ದಾರೆ. ‘ಕಾಶ್ಮೀರದಲ್ಲಿ ದಿನದಿಂದ ದಿನಕ್ಕೆ ಮಾನವ ಹಕ್ಕುಗಳ ಭೀಕರ ಉಲ್ಲಂಘನೆಯಾಗುತ್ತಿದೆ. ಭಾರತವು 2019ರ ಆಗಸ್ಟ್‍ನಲ್ಲಿ ಭಾರತೀಯ ಸಂವಿಧಾನದ 370ನೇ ವಿಧಿಯಡಿ ಕಾಶ್ಮೀರಿಗಳಿಗೆ ನೀಡಲಾದ ಎಲ್ಲಾ ರೀತಿಯ ಹಕ್ಕುಗಳನ್ನು ಕಿತ್ತುಕೊಂಡಿದೆ ಎಂದು ಅವರು ಹೇಳಿದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.