ವಾಷಿಂಗ್ಟನ್ (ಯುಎಸ್): ಇತ್ತೀಚೆಗೆ ಯುಎಸ್‌ನಲ್ಲಿ ಒಂದಾದ ನಂತರ ಒಂದು ಸಾಮೂಹಿಕ ಗುಂಡಿನ ದಾಳಿಗಳು ನಡೆಯುತ್ತಲೇ ಇವೆ. ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಸಾಮೂಹಿಕ ಗುಂಡಿನ ದಾಳಿಗಳ ಬಗ್ಗೆ ಅಧ್ಯಕ್ಷ ಜೋ ಬೈಡನ್‌ ಕಳವಳ ವ್ಯಕ್ತಪಡಿಸಿದ್ದಾರೆ. ಮಕ್ಕಳು ಮತ್ತು ಕುಟುಂಬಗಳನ್ನು ರಕ್ಷಿಸುವ ಸಲುವಾಗಿ ಆಕ್ರಮಣಕಾರಿ ಶಸ್ತ್ರಾಸ್ತ್ರಗಳನ್ನು ನಿಷೇಧಿಸುವ ಅಗತ್ಯವಿದೆ. ಇದಕ್ಕಾಗಿ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಇರುವ ನಿರ್ಬಂಧಗಳನ್ನು ಬಿಗಿಗೊಳಿಸಬೇಕಿದೆ. ಹಾಗಾಗಿ ಶಸ್ತ್ರಾಸ್ತ್ರ ಖರೀದಿಯ ಕನಿಷ್ಠ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಹೆಚ್ಚಿಸಬೇಕು ಎಂದು ಬೈಡನ್‌ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Boris Johnson: ವಿಶ್ವಾಸ ಮತಯಾಚನೆಯಲ್ಲಿ ಗೆದ್ದು, ಪ್ರಧಾನಿ ಪಟ್ಟ ಉಳಿಸಿಕೊಂಡ ಬೋರಿಸ್


ಶ್ವೇತಭವನದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಬೈಡನ್‌, ನಾವು ಆಕ್ರಮಣಕಾರಿ ಶಸ್ತ್ರಾಸ್ತ್ರಗಳನ್ನು ನಿಷೇಧಿಸಬೇಕಾಗಿದೆ. ಇದು ಸಾಧ್ಯವಾಗದಿದ್ದರೆ, ನಾವು ಅವುಗಳನ್ನು ಖರೀದಿಸುವ ವಯಸ್ಸನ್ನು ಹೆಚ್ಚಿಸಬೇಕಿದೆ. ಜತೆಗೆ ಬಂದೂಕು ತಯಾರಕರ ಹೊಣೆಗಾರಿಕೆಯಿಂದ ವಿನಾಯಿತಿಯನ್ನು ರದ್ದುಗೊಳಿಸಿ ಎಂದಿದ್ದಾರೆ.


ಯಾರ ಹಕ್ಕುಗಳನ್ನು ಕಸಿದುಕೊಳ್ಳುವ ಉದ್ದೇಶ ಇದರ ಹಿಂದೆ ಇಲ್ಲ. ನಮ್ಮ ಮಕ್ಕಳನ್ನು, ಕುಟುಂಬಗಳನ್ನು ಹಾಗೂ ಸಮುದಾಯಗಳನ್ನು ರಕ್ಷಿಸುವ ಉದ್ದೇಶದಿಂದ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಹೇಳಿದ್ದಾರೆ. 


ಇದೇ ವರ್ಷದ ಮೇ 24ರಂದು ಟೆಕ್ಸಾಸ್‌ನ ಉವಾಲ್ಡೆಯಲ್ಲಿರುವ ರಾಬ್ ಎಲಿಮೆಂಟರಿ ಶಾಲೆಯಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆಯಿತು. ಈ ದಾಳಿಯಲ್ಲಿ 19 ಮಕ್ಕಳು ಸೇರಿದಂತೆ ಹಲವರು ದುರ್ಮರಣ ಹೊಂದಿದರು. ಸಿಎನ್‌ಎನ್ ಪ್ರಕಾರ, ಫ್ಲೋರಿಡಾದ ಪಾರ್ಕ್‌ಲ್ಯಾಂಡ್‌ನಲ್ಲಿ 2018ರಲ್ಲಿ ಮಾರ್ಜೊರಿ ಸ್ಟೋನ್‌ಮ್ಯಾನ್ ಡೌಗ್ಲಾಸ್ ಹೈಸ್ಕೂಲ್ ಗುಂಡಿನ ದಾಳಿಯ ನಂತರ ಇದು ಅತ್ಯಂತ ಭೀಕರ ದಾಳಿಯಾಗಿದೆ.  ಮೇ 31 ರಂದು, ನ್ಯೂ ಓರ್ಲಿಯನ್ಸ್‌ನಲ್ಲಿ ಪ್ರೌಢಶಾಲಾ ಪದವಿ ಸಮಾರಂಭದಲ್ಲಿ ಗುಂಡೇಟಿನಿಂದ ಓರ್ವ ವೃದ್ಧೆ ಸಾವನ್ನಪ್ಪಿದರು. ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದರು. ಹಾಗೆ ಜೂನ್ 1ರಂದು ಆಸ್ಪತ್ರೆಯ ಕ್ಯಾಂಪಸ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಸುಮಾರು ನಾಲ್ಕು ಜನರು ಅಸುನೀದಿದ್ದರು.


ಈ ಎಲ್ಲ ದಾಳಿಗಳ ಬೆನ್ನಲ್ಲೇ ಯುಎಸ್‌ ಅಧ್ಯಕ್ಷ ಬೈಡನ್‌ ಈ ಹೇಳಿಕೆಯನ್ನು ನೀಡಿದ್ದಾರೆ. 


ಇದನ್ನೂ ಓದಿ: ಡಿಸ್ನಿಲ್ಯಾಂಡ್‌ನಲ್ಲಿ ಪ್ರೇಯಸಿಗೆ ಪ್ರಪೋಸ್‌: ಅಡ್ಡಬಂದ ಉದ್ಯೋಗಿ ಮಾಡಿದ್ದೇನು ಗೊತ್ತಾ?


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.