"ದುಶ್ಮನ್ ಕಹಾ ಹೇ ಅಂದ್ರೆ ಬಗಲ್ ಮೆ ಹೇ" ಅನ್ನೋ ಮಾತಿದೆ. ಅಂತೆಯೇ ವ್ಯಕ್ತಿಯೋರ್ವ ತನ್ನ ಪ್ರೇಯಸಿಗೆ ಪ್ರೇಮ ನಿವೇದನೆ ಮಾಡಲು ಮುಂದಾದಾಗ ಸೆಕ್ಯೂರಿಟಿ ಗಾರ್ಡ್ ಅಡ್ಡಬಂದಿರುವ ಘಟನೆ ನಡೆದಿದೆ. ಪ್ರೇಯಸಿಗೆ ರಹಸ್ಯವಾಗಿ ಪ್ರೇಮ ನಿವೇದನೆ ಮಾಡಬೇಕು ಎಂದು ಪ್ಲ್ಯಾನ್ ಮಾಡಿಕೊಂಡಿದ್ದ ಪ್ರಿಯತಮನಿಗೆ ನಿರಾಸೆಯಾಗಿದೆ.
ಪ್ರಪೋಸ್ ಮಾಡುವಾಗ ಯಾರಾದರೂ ಅಡ್ಡಿಪಡಿಸಿದರೆ ಕೋಪ ಬರುವುದು ಸಹಜ. ಇನ್ನು ಅಂತೆಯೇ ಡಿಸ್ನಿಲ್ಯಾಂಡ್‌ನಲ್ಲಿ ಪ್ರಪೋಸ್ ಮಾಡಲು ಕಪಲ್ ಮುಂದಾದಾಗ ಅಲ್ಲಿನ ಉದ್ಯೋಗಿಯೊಬ್ಬರು ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಮದುವೆಯ ಪ್ರಸ್ತಾಪ ಮಾಡುವಂತಿಲ್ಲ ಎಂದು ಅಡ್ಡಿಪಡಿಸಿದ್ದಾರೆ. ಈ ಮೂಲಕ ಪ್ರೇಮಿಗಳ ಅತ್ಯಂತ ಸ್ಮರಣೀಯ ಕ್ಷಣವು ನಾಶವಾಗಿದೆ.
ಇದನ್ನೂ ಓದಿ: ಊಟ ಕೇಳಿದ್ದೆ ತಪ್ಪಾಯ್ತಾ? ಪುಟ್ಟ ಕಂದಮ್ಮನ ಕೈ ಸುಟ್ಟ ಪಾಪಿ ಮಲತಾಯಿ
ಡಿಸ್ನಿಲ್ಯಾಂಡ್ ಉದ್ಯೋಗಿ ಕಪಲ್‌ಗಳ ಸುಂದರ ಕ್ಷಣಕ್ಕೆ ಅಡ್ಡಿಪಡಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತನ್ನ ಗೆಳತಿ ಬಳಿ ಮದುವೆ ಪ್ರಸ್ತಾಪವನ್ನಿಡಲು ಮುಂದಾಗುತ್ತಾನೆ. ಈ ಸಂದರ್ಭದಲ್ಲಿ ಆತ ಮೊಣಕಾಲಿನಲ್ಲಿ ಕುಳಿತು ಉಂಗುರವನ್ನು ಪ್ರೇಯಸಿಗೆ ನೀಡಲು ಮುಂದಾಗುತ್ತಾನೆ. ಆದರೆ ಅವರ ಮಧ್ಯದಲ್ಲಿ ಡಿಸ್ನಿಲ್ಯಾಂಡ್ ಉದ್ಯೋಗಿ ಬಂದು, ವ್ಯಕ್ತಿಯ ಕೈಯಿಂದ ಉಂಗುರವನ್ನು ಕಸಿದುಕೊಂಡು ಜೋಡಿಯನ್ನು ಕೆಳಗೆ ಬರುವಂತೆ ಒತ್ತಾಯಿಸಿದ್ದಾರೆ. ಕೆಳಗಿಳಿದ ನಂತರ ಪ್ರಪೋಸ್ ಮಾಡೋದಾಗಿ ಯುವಕ ಹೇಳಿದ್ದರೂ ಸಹ ಅದಕ್ಕೆ ಸಮ್ಮತಿಸದ ಉದ್ಯೋಗಿ, " ಈ ಜಾಗದಲ್ಲಿ ಪ್ರಪೋಸ್ ಮಾಡುವಂತಿಲ್ಲ. ಇಲ್ಲಿಂದ ಹೊರಗೆ ಹೋಗಿ" ಎಂದು ಹೇಳಿದ್ದಾರೆ.
The happiest place on Earth…unless this loser is on duty pic.twitter.com/Dn0VHwCthx
— BROTHER (@BrotherHQ) June 3, 2022
ವೈರಲ್ ಕ್ಲಿಪ್‌ನ್ನು ರೆಡ್ಡಿಟರ್ ವಾಸ್ಗೆಹ್ಟ್ಲಾನ್ ಅವರು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊದಲ್ಲಿರುವ ವ್ಯಕ್ತಿಯ ಬಗ್ಗೆ ತನಗೆ ತಿಳಿದಿರುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದಾರೆ; "ನೌಕರನು ನನ್ನ ಆತ್ಮೀಯ ಸ್ನೇಹಿತನ ಕ್ಷಣವನ್ನು ಹಾಳುಮಾಡಿದ್ದಾನೆ. ಮೊದಲು ಅನುಮತಿ ಕೇಳಿದ್ದರೂ ಸಹ ಅವಕಾಶ ನೀಡಿಲ್ಲ. ಸದ್ಯ ಡಿಸ್ನಿಲ್ಯಾಂಡ್ ದಂಪತಿ ಬಳಿ ಕ್ಷಮೆಯಾಚಿಸಿದೆ. ಈ ಘಟನೆಯನ್ನು ಸರಿಪಡಿಸುವ ಭರವಸೆ ನೀಡಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಕ್ಕಳ ಹಲ್ಲು-ಒಸಡುಗಳಿಗೆ ಹಾನಿಕಾರಕ ಆಹಾರಗಳಿವು
ಡಿಸ್ನಿಲ್ಯಾಂಡ್ ವಕ್ತಾರರು ನ್ಯೂಸ್‌ವೀಕ್‌ಗೆ ಮಾಹಿತಿ ನೀಡಿದ್ದು, "ಈ ರೀತಿ ಘಟನೆ ನಡೆದಿದ್ದಕ್ಕೆ ವಿಷಾದಿಸುತ್ತೇವೆ. ನಾವು ಜೋಡಿ ಬಳಿ ಕ್ಷಮೆಯಾಚಿಸಿದ್ದೇವೆ. ಈ ಘಟನೆಯನ್ನು ಸರಿಪಡಿಸಲು ಮುಂದಾಗಿದ್ದೇವೆ" ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.