ನವದೆಹಲಿ: Weird Video - Twitter ಹಾಗೂ Instagram ಹಾವೊಂದರ ವಿಡಿಯೋ (Snake Video)ಇದೀಗ ಭಾರಿ ವೈರಲ್ ಆಗುತ್ತಿದೆ. ಹಾವು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಅದನ್ನು ನೋಡಿ ಬಹುತೇಕರು ಬೆಚ್ಚಿಬೀಳುತ್ತಾರೆ. ಇತ್ತೀಚೆಗಷ್ಟೇ ಇನ್ಸ್ಟಾಗ್ರಾಮ್  (Social Media) ಮೇಲೆ ಅನಕೊಂಡ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ (Viral Video) ಅನಾಕೊಂಡಾ (Anaconda Snake) ಹಾಯಾಗಿ ರಸ್ತೆಯನ್ನು ದಾಟುತ್ತಿದೆ. ಆದರೆ, ಅದನ್ನು ನೋಡುತ್ತಿರುವ ಜನರ ಪರಿಸ್ಥಿತಿ ಮಾತ್ರ ನೋಡುವಂತಿದೆ.


COMMERCIAL BREAK
SCROLL TO CONTINUE READING

ಡಿವೈಡರ್ ದಾಟಿದ ಅನಕೊಂಡ
ಸ್ವಲ್ಪ ಯೋಚಿಸಿ, ನೀವು ರಸ್ತೆಯಲ್ಲಿ ಹೋಗುತ್ತಿರುವಿರೀ ಹಾಗೂ ಇದಕ್ಕಿಂದಂತೆ ಒಂದು ದೊಡ್ಡ ಹಾವು ನಿಮ್ಮ ಮುಂದೆ ಪ್ರತ್ಯಕ್ಷವಾದರೆ? ನೀವು ಏನು ಮಾಡುತ್ತೀರಿ? ನೀವು ಕಾರಿನಲ್ಲಿ ಹೋಗುತ್ತಿರಲಿ ಅಥವಾ ಸವಾರಿ ಮಾಡುತ್ತಿರಲಿ, ರಸ್ತೆಯಲ್ಲಿ ಇಂತಹ ದೃಶ್ಯವನ್ನು ನೋಡಿ ನೀವು ಬೆಚ್ಚಿಬೀಳುವುದು ಮಾತ್ರ ಗ್ಯಾರಂಟಿ. ಈ ವೀಡಿಯೊವನ್ನು (Snake Video) Animals Venture ಹೆಸರಿನ Instagram ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಬ್ರೆಜಿಲ್ (Brazil) ನಿಂದ ಹೊರಹೊಮ್ಮಿದೆ ಎನ್ನಲಾಗುತ್ತಿದೆ.


Viral Video: ರಸ್ತೆಯಲ್ಲಿ ಸಿಕ್ಕ ಮಾಸ್ಕ್ ಹಾಕಿಕೊಂಡ ‘ಮಂಗ’ನಾಟ ನೋಡಿ..!


ಹಾವಿಗಾಗಿ ಸಂಪೂರ್ಣ ಟ್ರ್ಯಾಫಿಕ್ ಸ್ಥಬ್ಧಗೊಂಡಿದೆ
ದೈತ್ಯ ಅನಕೊಂಡ (ಅನಕೊಂಡ ಸ್ನೇಕ್ ವಿಡಿಯೋ) ಒಂದೆಡೆ  ಯಾವುದೇ ಹಿಂಜರಿಕೆಯಿಲ್ಲದೆ ವಿಭಾಜಕದ ಮೂಲಕ ತೆವಳಿಕೊಂಡು ಸಾಗುತ್ತಿದ್ದರೆ, ರಸ್ತೆಯಲ್ಲಿದ್ದ ಜನರು ಮತ್ತು ವಾಹನಗಳ ವೇಗವು ಸ್ಥಗಿತಗೊಂಡಿದೆ. ಅನಕೊಂಡದ ಕಾರಣ ಸಂಪೂರ್ಣ ಸಂಚಾರ ಸ್ಥಗಿತಗೊಂಡಿದೆ ಮತ್ತು ಜನರು ರಸ್ತೆ ದಾಟಲು ಕಾಯುತ್ತಿದ್ದಾರೆ. ಇದು ಅವರ ಭಯವನ್ನು ಹೇಳುತ್ತದೆ.


ಇದನ್ನೂ ಓದಿ- Viral video : ರಸ್ತೆ ಮಧ್ಯೆ ಸ್ಥಿಮಿತ ಕಳೆದು ಕೊಂಡವರಂತೆ ಆಡುತ್ತಿದ್ದ ಪೋಲಿಸ್..! ವಿಚಿತ್ರ ವಾಗಿತ್ತು ಪೋಲಿಸಪ್ಪನ ನಡವಳಿಕೆ


ಲಕ್ಷಾಂತರ ಜನರು ಈ ವಿಡಿಯೋವನ್ನು ವಿಕ್ಷೀಸಿದ್ದಾರೆ
ಇದುವರೆಗೆ 4 ಲಕ್ಷ 20 ಸಾವಿರಕ್ಕೂ ಹೆಚ್ಚು ಜನರು ಈ ವೈರಲ್ (Viral Video) ವಿಡಿಯೋವನ್ನು  (Anaconda Snake Video) ನೋಡಿದ್ದಾರೆ. ಈ ವೀಡಿಯೊದ ಕಾಮೆಂಟ್ ವಿಭಾಗದಲ್ಲಿ, ಜನರು ಮಾನವೀಯತೆಯನ್ನು ಹೊಗಳುತ್ತಿದ್ದಾರೆ. ಒಂದು ಅನಕೊಂಡ ಹಾವಿಗಾಗಿ ಸಂಪೂರ್ಣ ಸಂಚಾರ ಸ್ಥಗಿತಗೊಂಡಿದನ್ನು ನೋಡಿ ಹೆಚ್ಚಿನ ಜನರು ತುಂಬಾ ಸಂತೋಷ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ-Viral Video: ನಾಗರಹಾವಿಗೆ ರಾಖಿ ಕಟ್ಟಲು ಹೋದ ಭೂಪ ಕೊನೆಗೆ ಏನಾದ ಗೊತ್ತಾ..?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ