ಭಾರತದ ಜೊತೆ ಮಾನವ ಹಕ್ಕುಗಳ ವಿಚಾರವಾಗಿ ಚರ್ಚಿಸಿದ ಅಮೆರಿಕಾದ ರಕ್ಷಣಾ ಕಾರ್ಯದರ್ಶಿ
ದೇಶದ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಬಗ್ಗೆ ಭಾರತೀಯ ಸಚಿವರೊಂದಿಗೆ ಸಂವಾದ ನಡೆಸಿದ್ದೇನೆ ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ಜನರಲ್ ಲಾಯ್ಡ್ ಆಸ್ಟಿನ್ ಶನಿವಾರ ಹೇಳಿದ್ದಾರೆ.
ನವದೆಹಲಿ: ದೇಶದ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಬಗ್ಗೆ ಭಾರತೀಯ ಸಚಿವರೊಂದಿಗೆ ಸಂವಾದ ನಡೆಸಿದ್ದೇನೆ ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ಜನರಲ್ ಲಾಯ್ಡ್ ಆಸ್ಟಿನ್ ಶನಿವಾರ ಹೇಳಿದ್ದಾರೆ.
ವಿಶೇಷವಾಗಿ ಈಶಾನ್ಯದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆ'ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಯವರೊಂದಿಗೆ ಮಾತನಾಡಿದ್ದೀರಾ? ಎಂದು ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜನರಲ್ ಆಸ್ಟಿನ್, ಅವರೊಂದಿಗೆ ಮಾತನಾಡಲು ನನಗೆ ಅವಕಾಶವಿಲ್ಲ.ನಾನು ಈ ವಿಷಯದ ಬಗ್ಗೆ ಕ್ಯಾಬಿನೆಟ್‌ನ ಇತರ ಸದಸ್ಯರೊಂದಿಗೆ ಸಂವಾದ ನಡೆಸಿರುವುದಾಗಿ ಹೇಳಿದ್ದಾರೆ.
'ಭಾರತವು ನಮ್ಮ ಪಾಲುದಾರ ಎಂದು ನಾವು ನೆನಪಿಟ್ಟುಕೊಳ್ಳಬೇಕು, ಅವರ ಪಾಲುದಾರಿಕೆಯನ್ನು ನಾವು ಗೌರವಿಸುತ್ತೇವೆ. ಮತ್ತು ಪಾಲುದಾರರು ಆ ರೀತಿಯ ಚರ್ಚೆಗಳನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ"ಎಂದು ಅವರು ಹೇಳಿದರು.
ಇದನ್ನೂ ಓದಿ: PM Modi: 15 ತಿಂಗಳ ಬಳಿಕ ವಿದೇಶಕ್ಕೆ ಹಾರಲು ಸಜ್ಜಾದ ಪ್ರಧಾನಿ ಮೋದಿ!
'ಅಮೇರಿಕಾಕ್ಕೆ ಮಾನವ ಹಕ್ಕುಗಳು ಮತ್ತು ಕಾನೂನಿನ ನಿಯಮಗಳು ಮುಖ್ಯವೆಂದು ಅಧ್ಯಕ್ಷ ಬಿಡೆನ್ ಹೇಳಿದ್ದನ್ನು ನೀವು ಕೇಳಿದ್ದೀರಿ. ನಾವು ಯಾವಾಗಲೂ ನಮ್ಮ ಮೌಲ್ಯಗಳೊಂದಿಗೆ ಮುನ್ನಡೆಸುತ್ತೇವೆ. ಪ್ರಜಾಪ್ರಭುತ್ವವಾಗಿ ನಮಗೆ ಬಹಳ ಮುಖ್ಯವಾಗಿದೆ. ಭಾರತವು ಪ್ರಜಾಪ್ರಭುತ್ವ ರಾಷ್ಟ್ರ ಮತ್ತು ನೀವು ನಿಮ್ಮ ಮೌಲ್ಯಗಳನ್ನೂ ಸಹ ಅಮೂಲ್ಯವಾಗಿರಿಸಿಕೊಳ್ಳಿ. ನಾವು ಮಾಡಬಹುದಾದ ಮತ್ತು ಒಟ್ಟಾಗಿ ಕೆಲಸ ಮಾಡುವ ಹಲವಾರು ವಿಷಯಗಳಿವೆ "ಎಂದು ಅವರು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.