ಭಯೋತ್ಪಾದಕರಿಗೆ ಬಿರಿಯಾನಿ ನೀಡುತ್ತಿದ್ದ ಪಾಕಿಸ್ತಾನದಲ್ಲಿ ಈಗ ಹಿಟ್ಟಿಗೂ ಪರದಾಟ
ಬೇರೆ ದೇಶಗಳ ವಿರುದ್ಧ ಹಗೆ ಸಾಧಿಸುವ ನಿಟ್ಟಿನಲ್ಲಿ ಭಯೋತ್ಪಾದಕರಿಗೆ ನೆಲೆಯಾಗಿರುವ ಪಾಕಿಸ್ತಾನವು ಇದೀಗ ಅಳಿವಿನ ಅಂಚಿಗೆ ಬಂದಿದೆ. ಹೌದು ಪ್ರಸ್ತುತ ಪಾಕಿಸ್ತಾನದಲ್ಲಿ ಪರಿಸ್ಥಿತಿ ಬಹಳ ಸೋಚನೀಯವಾಗಿದ್ದು ಇಲ್ಲಿನ ಜನರಿಗೆ ಹಿಟ್ಟಿಗಾಗಿ ಪರದಾಡುವಂತಹ ಸ್ಥಿತಿ ಎದುರಾಗಿದೆ.
ಇಸ್ಲಾಮಾಬಾದ್: ಭಯೋತ್ಪಾದಕರಿಗೆ ಬಿರಿಯಾನಿ ನೀಡುತ್ತಿದ್ದ ಪಾಕಿಸ್ತಾನ ಇದೀಗ ದುಬಾರಿ ಬೆಲೆ ತರಬೇಕಾಗಿದೆ. ಇತರರಿಗೆ ತಲೆನೋವು ಸೃಷ್ಟಿಸಿರುವ ಪಾಕಿಸ್ತಾನದ (Pakistan) ಪರಿಸ್ಥಿತಿ ಹೀನಾಯ ಮಟ್ಟಕ್ಕೆ ತಲುಪಿದೆ. ಕಾನೂನು ಮತ್ತು ಸುವ್ಯವಸ್ಥೆಯ ವಿಷಯದಲ್ಲಿ ಶಿಕ್ಷಣ (Education), ಉದ್ಯೋಗ ಕ್ಷೇತ್ರಗಳಲ್ಲಿ ಈಗಾಗಲೇ ಹಿಂದಿರುವ ಪಾಕಿಸ್ತಾನದಲ್ಲಿ ಇದೀಗ ಆಹಾರದ ಹಾಹಾಕಾರ ಕೇಳಿಬರುತ್ತಿದೆ. ಹೌದು ಪಾಕಿಸ್ತಾನದಲ್ಲಿ ಹಿಟ್ಟಿನ ಕೊರತೆ ಎದುರಾಗಿದ್ದು ಪಾಕಿಸ್ತಾನದ ಜನರು ಎರಡು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ.
ಭಾರತದ ಹೆಚ್ಚುತ್ತಿರುವ ಶಕ್ತಿ ಕಂಡು ಬೆಚ್ಚಿಬಿದ್ದ ಚೀನಾ-ಪಾಕ್, 35 ದಿನಗಳಲ್ಲಿ 10 ಕ್ಷಿಪಣಿ ಪರೀಕ್ಷೆ
ಹೌದು ಪಾಕಿಸ್ತಾನದಲ್ಲಿ ಗೋಧಿಯ ಬೆಲೆ ನಿರಂತರ ಗಗನಕ್ಕೇರುವಿಕೆಯ ಪರಿಣಾಮವು ಈಗ ಹಿಟ್ಟಿನ ಬೆಲೆಯಲ್ಲೂ ಕಾಣಲಾರಂಭಿಸಿದೆ. ಹಿಟ್ಟು ಈಗ ದೇಶದ ಹಲವು ಭಾಗಗಳಲ್ಲಿ ಕೆಜಿಗೆ 75 ರೂ.ಗಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಅಷ್ಟೇ ಅಲ್ಲ ಇನ್ನೂ ಕೆಲವೆಡೆ ಕೇಳಿದಷ್ಟು ಹಣ ನೀಡಿದರೂ ಹಿಟ್ಟು ಲಭ್ಯವಿಲ್ಲ. ಪಾಕಿಸ್ತಾನ, ಸಿಂಧ್, ಬಲೂಚಿಸ್ತಾನ್, ಪಂಜಾಬ್ (Punjab) ಮತ್ತು ಖೈಬರ್ ಪಖ್ತುನ್ಖ್ವಾ ಎಂಬ ನಾಲ್ಕು ಪ್ರಾಂತ್ಯಗಳು ತೀವ್ರ ಹಿಟ್ಟಿನ ಕೊರತೆಯನ್ನು ಎದುರಿಸುತ್ತಿವೆ. ಸಿಂಧ್ ಮತ್ತು ಇತರ ಅನೇಕ ಪ್ರಾಂತ್ಯಗಳಲ್ಲಿ ಜನರು ದೀರ್ಘ ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಾದರೂ ಹಿಟ್ಟು ದೊರೆಯದೆ ಬರಿಗೈಯಲ್ಲಿ ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ನಾನ್ ಮಾರಾಟ ಮಾಡುವ ಅಂಗಡಿಯವರು ಮುಷ್ಕರ ನಡೆಸುತ್ತಿದ್ದಾರೆ.
ಚೀನಾದ ವೀಡಿಯೊ ಹಂಚಿಕೆ ಆ್ಯಪ್ TikTok ನಿಷೇಧಿಸಿದ ಪಾಕಿಸ್ತಾನ
ಭಾರತದೊಂದಿಗೆ ಭಾರಿ ಹೋರಾಟ!
ಪಾಕಿಸ್ತಾನವು ಭಾರತದೊಂದಿಗಿನ ಅತ್ಯಂತ ದುಬಾರಿ ಯುದ್ಧವನ್ನು ಎದುರಿಸುತ್ತಿದೆ. ಪುಲ್ವಾಮಾ (Pulwama) ದಾಳಿಯ ಮೊದಲು ಪಾಕಿಸ್ತಾನವು ಹೆಚ್ಚು ಒಲವು ಹೊಂದಿರುವ ರಾಷ್ಟ್ರಗಳ ಸ್ಥಾನಮಾನವನ್ನು ಹೊಂದಿತ್ತು. ಆದರೆ ಎಷ್ಟೇ ಸಹಾನುಭೂತಿ ತೋರಿದರೂ, ಪಾಕಿಸ್ತಾನದ ತಪ್ಪುಗಳನ್ನು ಕ್ಷಮಿಸುತ್ತಾ ಬಂದರೂ ಬುದ್ದಿ ಕಲಿಯದ ಪಾಕಿಸ್ತಾನದ ವರ್ತನೆಯಿಂದ ಭಾರತವು ತನ್ನ ನಿಲುವಿನಿಂದ ಹಿಂದೆ ಸರಿಯಿತು. ಇದರೊಂದಿಗೆ ಆಮದುಗಳಿಗೆ 200% ಕಸ್ಟಮ್ ಸುಂಕವನ್ನು ವಿಧಿಸಲಾಯಿತು. ಈಗಾಗಲೇ ಬಿರುಗಾಳಿಯ ಮೂಲಕ ಸಾಗುತ್ತಿರುವ ಪಾಕಿಸ್ತಾನಕ್ಕೆ ಇದು ದೊಡ್ಡ ಹಿನ್ನಡೆಯಾಗಿದೆ.