ಭಾರತದ ಹೆಚ್ಚುತ್ತಿರುವ ಶಕ್ತಿ ಕಂಡು ಬೆಚ್ಚಿಬಿದ್ದ ಚೀನಾ-ಪಾಕ್, 35 ದಿನಗಳಲ್ಲಿ 10 ಕ್ಷಿಪಣಿ ಪರೀಕ್ಷೆ

ಭಾರತವು 35 ದಿನಗಳಲ್ಲಿ 10 ಬ್ರಹ್ಮಾಸ್ತ್ರಗಳನ್ನು ಸ್ವಾದೀನಪಡಿಸಿಕೊಂಡಿದೆ. ಇವು ಚೀನಾ ಮತ್ತು ಪಾಕಿಸ್ತಾನ ಎರಡಕ್ಕೂ ಬೆದರಿಕೆ ಒಡ್ಡಿವೆ.

Last Updated : Oct 12, 2020, 10:33 AM IST
  • ಡಿಆರ್‌ಡಿಒ 35 ದಿನಗಳಲ್ಲಿ 10 ಕ್ಷಿಪಣಿಗಳನ್ನು ಪರೀಕ್ಷಿಸಿದೆ.
  • ಚೀನಾವನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಸೇನೆ ತನ್ನ ಶಕ್ತಿಯನ್ನು ಬಲಪಡಿಸುತ್ತಿದೆ.
  • ಟ್ಯಾಂಕ್ ಫೈರ್ಡ್ ಕ್ಷಿಪಣಿ ಪರೀಕ್ಷೆ
ಭಾರತದ ಹೆಚ್ಚುತ್ತಿರುವ ಶಕ್ತಿ ಕಂಡು ಬೆಚ್ಚಿಬಿದ್ದ ಚೀನಾ-ಪಾಕ್, 35 ದಿನಗಳಲ್ಲಿ 10 ಕ್ಷಿಪಣಿ ಪರೀಕ್ಷೆ title=

ನವದೆಹಲಿ: ಇಂಡೋ-ಚೀನಾ ನಡುವಿನ ಉದ್ವಿಗ್ನತೆಯ ಮಧ್ಯೆ ಪಾಕಿಸ್ತಾನ ಕೂಡ ಚೀನಾದೊಂದಿಗೆ ಸೇರಿ ಭಾರತದ ವಿರುದ್ಧ ಕತ್ತಿ ಮಸೆಯುತ್ತಿದೆ. ಏತನ್ಮಧ್ಯೆ ಭಾರತವು ಕಳೆದ 35 ದಿನಗಳಲ್ಲಿ 10 ಬ್ರಹ್ಮಾಸ್ತ್ರಗಳನ್ನು ಸ್ವಾದೀನಪಡಿಸಿಕೊಂಡಿದ್ದು ಇದು ಚೀನಾ-ಪಾಕಿಸ್ತಾನ (Pakistan) ಎರಡೂ ದೇಶಗಳ ನಿದ್ದೆಗೆಡಿಸಿದೆ. ಇದರ ಮತ್ತೊಂದು ಹೆಮ್ಮೆಯ ವಿಷಯ ಎಂದರೆ ಈ ಅಸ್ತ್ರಗಳು ಬೇರೆ ದೇಶಗಳಿಂದ ಕೊಂಡಿರುವುದಲ್ಲ ಬದಲಿಗೆ ನಮ್ಮ ದೇಶದಲ್ಲಿಯೇ ತಯಾರಾಗಿವೆ.

35 ದಿನಗಳಲ್ಲಿ 10 ಕ್ಷಿಪಣಿಗಳನ್ನು ಪರೀಕ್ಷಿಸಿದ DRDO:
DRDO ಕಳೆದ 35 ದಿನಗಳಲ್ಲಿ 10 ಕ್ಷಿಪಣಿಗಳನ್ನು ಪರೀಕ್ಷಿಸಿ ದಾಖಲೆ ಬರೆದಿದೆ. ಇದಲ್ಲದೆ LACಯಲ್ಲಿ ಉದ್ವಿಗ್ನತೆ ಹೆಚ್ಚಿಸಿರುವ ಚೀನಾ (China) ಭಾರತದ ವಿರುದ್ಧ ಇನ್ನೊಂದು ಹೆಜ್ಜೆ ಮುಂದಿಡುವ ಮೊದಲು ನೂರು ಸಾರಿ ಯೋಚಿಸುವಂತೆ ಮಾಡಿದೆ. ಇದಲ್ಲದೆ DRDO ತನ್ನ ಕೆಲವು ಕ್ಷಿಪಣಿಗಳನ್ನು ಅಪ್ಗ್ರೇಡ್ ಕೂಡ ಮಾಡಿದೆ. ಇದರ ಭಾಗವಾಗಿ ಬ್ರಹ್ಮೋಸ್ ಶ್ರೇಣಿಯನ್ನು 290 ಕಿ.ಮೀ.ನಿಂದ 400 ಕಿ.ಮೀ.ಗೆ ಹೆಚ್ಚಿಸಲಾಗಿದೆ. 

ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪರೀಕ್ಷೆ: 
ಕಳೆದ 35 ದಿನಗಳಲ್ಲಿ DRDO ಮಾಡಿರುವ ಕ್ಷಿಪಣಿ ಪರೀಕ್ಷೆಗಳನ್ನು ಕೇವಲ ಟ್ರಯಲ್ ಎಂದು ಹೇಳಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಭಾರತ ಇನ್ನೂ ಹೆಚ್ಚಿನ ಕ್ಷಿಪಣಿಗಳನ್ನು ಪರೀಕ್ಷಿಸಲಿದೆ ಎಂದು ಹೇಳಲಾಗುತ್ತಿದೆ. ಇದರ ನಂತರ ಚೀನಾ ಮತ್ತು ಪಾಕಿಸ್ತಾನ ಎರಡೂ ದೇಶಗಳ ಭಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಡಿಆರ್‌ಡಿಒ ಪರೀಕ್ಷಿಸಿದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ. ಇದು ಈ ಕ್ಷಿಪಣಿಯ ನವೀಕರಿಸಿದ ಆವೃತ್ತಿಯ ಪರೀಕ್ಷೆಯಾಗಿದೆ. ಅದರ ಫೈರ್‌ಪವರ್ ಅನ್ನು 400 ಕಿ.ಮೀ.ಗೆ ಹೆಚ್ಚಿಸಲಾಗಿದೆ.

ಚೀನಾದ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಲಡಾಕ್‌ನಲ್ಲಿ ಮಾತ್ರವಲ್ಲದೆ ವಾಸ್ತವಿಕ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಇತರ ಪ್ರದೇಶಗಳಲ್ಲಿ ಬ್ರಹ್ಮೋಸ್ ಅನ್ನು ನಿಯೋಜಿಸಲಾಗಿದೆ. ಸೆಪ್ಟೆಂಬರ್ 23 ರಂದು ಭಾರತೀಯ ಸೇನೆಯು (Indian Army) ದೇಶದಲ್ಲಿ ಅಭಿವೃದ್ಧಿಪಡಿಸಿದ ಪೃಥ್ವಿ -2 ಕ್ಷಿಪಣಿಯನ್ನು ಪರೀಕ್ಷಿಸಿತು, ಅದು ಸಂಪೂರ್ಣವಾಗಿ ಯಶಸ್ವಿಯಾಯಿತು. ಈ ಕ್ಷಿಪಣಿ ಪರಮಾಣು ಸಿಡಿತಲೆಗಳಿಂದ ಮೇಲ್ಮೈಗೆ ಹೊಡೆಯುವ ಸಾಮರ್ಥ್ಯ ಹೊಂದಿದೆ. ಪೃಥ್ವಿ -2 ಕ್ಷಿಪಣಿಯು 350 ಕಿ.ಮೀ ದೂರದಲ್ಲಿರುವ ಶತ್ರುಗಳನ್ನು ಹೊಡೆದುರುಳಿಸಬಲ್ಲದು.

'ಚೈನೀಸ್ ಟ್ಯಾಂಕ್'ನ ಬಲದ ಮೇಲೆ ಬಜ್ವಾ, ಆದರೆ ನಮ್ಮ' ಅರ್ಜುನ್ 'ಮುಂದೆ ನಿಲ್ಲಲೂ ಸಾಧ್ಯವಿಲ್ಲ

ಟ್ಯಾಂಕ್ ಫೈರ್ಡ್ ಕ್ಷಿಪಣಿ ಪರೀಕ್ಷೆ :
ಸೆಪ್ಟೆಂಬರ್ 23 ರಂದು ಭಾರತವು ಸ್ಥಳೀಯ ಲೇಸರ್-ಗೈಡೆಡ್ ಆಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿಯನ್ನು (ಎಟಿಜಿಎಂ) ಯಶಸ್ವಿಯಾಗಿ ಪರೀಕ್ಷಿಸಿತು. ಈ ಕ್ಷಿಪಣಿಯನ್ನು ಅರ್ಜುನ್ ಟ್ಯಾಂಕ್ ಮೂಲಕ ಹಾರಿಸಲಾಯಿತು. ಪರೀಕ್ಷಾ ಫೈರ್ಡ್ ನಲ್ಲಿ ಅದು ಮೂರು ಕಿಲೋಮೀಟರ್ ದೂರದಲ್ಲಿರುವ ಗುರಿಯನ್ನು ನಾಶಪಡಿಸಿತು. ಎಟಿಜಿಎಂನಲ್ಲಿ ಹೈ ಸ್ಫೋಟಕ ವಿರೋಧಿ ಟ್ಯಾಂಕ್ ವಾರ್ ಹೆಡ್ ಅನ್ನು ಬಳಸಲಾಗುತ್ತದೆ. ಇದು ಶಸ್ತ್ರಸಜ್ಜಿತ ಟ್ಯಾಂಕ್‌ಗಳನ್ನು ಸಹ ನಾಶಪಡಿಸುತ್ತದೆ.

ಸ್ಥಳೀಯ ಫೈಟರ್ ಡ್ರೋನ್ ವಿಮಾನಗಳನ್ನು ಸಿದ್ಧಪಡಿಸಿದ ಭಾರತ:
ಸೆಪ್ಟೆಂಬರ್ 22ರಂದು ಭಾರತವು ಸ್ಥಳೀಯ ಹೈಸ್ಪೀಡ್ ಟಾರ್ಗೆಟ್ ಡ್ರೋನ್ ವ್ಯಾಯಾಮವನ್ನು (ಎಚ್‌ಎಸ್‌ಟಿಡಿಎ) ಯಶಸ್ವಿಯಾಗಿ ಪರೀಕ್ಷಿಸಿತು. ಇದು ಅತಿ ವೇಗದ ಡ್ರೋನ್ ಆಗಿದೆ, ಇದನ್ನು ಶತ್ರುಗಳನ್ನು ಶಸ್ತ್ರಾಸ್ತ್ರಗಳಿಂದ ಆಕ್ರಮಣ ಮಾಡಲು ಬಳಸಬಹುದು. ಡಿಆರ್‌ಡಿಒದ ಈ ಯಶಸ್ವಿ ಪ್ರಯೋಗವನ್ನು ಮೈಲಿಗಲ್ಲು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಣ್ಣಿಸಿದರು.

ಕ್ಷಿಪಣಿ ಗುಂಡಿನ ವಾಹನ ಕೂಡ ಸಿದ್ಧವಾಗಿದೆ:
ಡಿಆರ್‌ಡಿಒ ಸೆಪ್ಟೆಂಬರ್ 7 ರಂದು ಎಚ್‌ಎಸ್‌ಟಿಡಿವಿಯ ಯಶಸ್ವಿ ಹಾರಾಟ ಪರೀಕ್ಷೆಯನ್ನು ನಡೆಸಿತು. ಎಚ್‌ಎಸ್‌ಟಿಡಿವಿ ಎಂದರೆ ಹೈಪರ್ ಸೋನಿಕ್ ಟೆಕ್ನಾಲಜಿ ಡೆಮನ್‌ಸ್ಟ್ರೇಟರ್ ವೆಹಿಕಲ್. ಇದು ಹೈಪರ್ ಸೋನಿಕ್ ಮತ್ತು ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಲು ಬಳಸಬಹುದಾದ ತಂತ್ರವಾಗಿದೆ. ಈ ಹೈಟೆಕ್ ವಿಮಾನವನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ.

ಡಿಆರ್‌ಡಿಒ ಸೂಪರ್ಸಾನಿಕ್ ಕ್ಷಿಪಣಿ-ಟಾರ್ಪಿಡೊ ವ್ಯವಸ್ಥೆಯನ್ನು ಪ್ರಾರಂಭಿಸಿತು:-
ಅಕ್ಟೋಬರ್ 5 ರಂದು ಡಿಆರ್‌ಡಿಒ ಸೂಪರ್ಸಾನಿಕ್ ಕ್ಷಿಪಣಿ ನೆರವಿನ ಟಾರ್ಪಿಡೊ (ಸ್ಮಾರ್ಟ್) ಬಿಡುಗಡೆಯನ್ನು ಯಶಸ್ವಿಯಾಗಿ ನಡೆಸಿತು. ಈ ಅತ್ಯಾಧುನಿಕ ವ್ಯವಸ್ಥೆಯು ಟಾರ್ಪಿಡೊಗಳಿಗೆ ಸೂಪರ್ಸಾನಿಕ್ ವೇಗದಲ್ಲಿ ಜಲಾಂತರ್ಗಾಮಿ ನೌಕೆಗಳ ಮೇಲೆ ದಾಳಿ ಮಾಡಲು ಅನುವು ಮಾಡಿಕೊಡುತ್ತದೆ. ಕ್ಷಿಪಣಿ ಸೂಪರ್ಸಾನಿಕ್ ವೇಗದಲ್ಲಿ ಗಾಳಿಯಲ್ಲಿ ಚಲಿಸುತ್ತದೆ. ಸಮುದ್ರದಿಂದ ಕೆಲವು ಕಿಲೋಮೀಟರ್ ದೂರದಲ್ಲಿ, ಟಾರ್ಪಿಡೊವನ್ನು ಈ ಕ್ಷಿಪಣಿ ವ್ಯವಸ್ಥೆಯಿಂದ ಬೇರ್ಪಡಿಸಲಾಗುತ್ತದೆ ಮತ್ತು ಸಮುದ್ರದೊಳಗಿನ ತನ್ನ ಗುರಿಯತ್ತ ಚಲಿಸುತ್ತದೆ. ಕೆಲವೇ ಸೆಕೆಂಡುಗಳಲ್ಲಿ, ಟಾರ್ಪಿಡೊ ಶತ್ರು ಜಲಾಂತರ್ಗಾಮಿ ನೌಕೆಯನ್ನು ನಾಶಪಡಿಸುತ್ತದೆ.

ಕರೋನಾಗೆ 'ಭಯಪಡಬೇಡಿ'! ನಿಮ್ಮ ಜೇಬಿನಲ್ಲಿರುವ ನೋಟು, ಮೊಬೈಲ್‌ನಿಂದ ವೈರಸ್ ಆಗಲಿದೆ ಕಣ್ಮರೆ

ಭಾರತದ ಕ್ಷಿಪಣಿ ಸಾಮರ್ಥ್ಯ ಹೆಚ್ಚುತ್ತಿರುವ ಕಾರಣ ಚೀನಾ-ಪಾಕಿಸ್ತಾನದಲ್ಲಿ ಉದ್ವಿಗ್ನತೆ:-
ಭಾರತದ ಸ್ಥಳೀಯ ಕ್ಷಿಪಣಿಗಳ ಪರೀಕ್ಷೆಯ ವೇಗವನ್ನು ನೋಡಿದ ಚೀನಾ, ಇದು ಭಾರತದೊಂದಿಗಿನ ಉದ್ವಿಗ್ನತೆಯನ್ನು ಹೆಚ್ಚಿಸಿದೆ ಮತ್ತು ತನ್ನ ಶಕ್ತಿಯನ್ನು ವೇಗವಾಗಿ ಹೆಚ್ಚಿಸಲು ಪ್ರೇರೇಪಿಸಿದೆ ಎಂದು ಚಿಂತಿಸಿರಬೇಕು. ಸಿಕ್ಕಿಂ, ಅರುಣಾಚಲ ಪ್ರದೇಶ, ಉತ್ತರಾಖಂಡ ಮತ್ತು ಲಡಾಖ್ ಗಡಿಯಲ್ಲಿರುವ ಪ್ರದೇಶಗಳಲ್ಲಿ ಹೊಸ ಚೀನಾದ ಕ್ಷಿಪಣಿ ತಾಣಗಳು ಬಂದಿವೆ. ಅಂತಹ ಪರಿಸ್ಥಿತಿಯಲ್ಲಿ ಯಾವುದೇ ವಾಯು ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಆಕಾಶ್ ವಾಯು ರಕ್ಷಣಾ ವ್ಯವಸ್ಥೆಯನ್ನು ಸೂಕ್ಷ್ಮ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ. ಈಗ ಭಾರತ ಪರಮಾಣು ಸಾಮರ್ಥ್ಯದ ಅಗ್ನಿ 5 ಕ್ಷಿಪಣಿ ಸರಣಿಯನ್ನು ಮುನ್ನಡೆಸುತ್ತಿದೆ. ಇದರ ಫೈರ್‌ಪವರ್ 5,000 ಕಿ.ಮೀ ಗಿಂತ ಹೆಚ್ಚು.

ಚೀನಾ ಮತ್ತು ಪಾಕಿಸ್ತಾನದ ಸವಾಲನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ವಾಯುಪಡೆಯು ತನ್ನ ಶಕ್ತಿಯನ್ನು ನಿರಂತರವಾಗಿ ಹೆಚ್ಚಿಸುತ್ತಿದೆ. ಭಾರತೀಯ ವಾಯುಪಡೆಯು ಮೂರು ರೀತಿಯ ಡೆಲ್ಟಾ ವಿಮಾನಗಳನ್ನು ಹೊಂದಿದೆ. ಅವುಗಳಲ್ಲಿ ಮಿರಾಜ್ 2000, ರಫಾಲ್ ಮತ್ತು ತೇಜಸ್ ಸೇರಿವೆ. ಡೆಲ್ಟಾ ವಿಮಾನಗಳ ಇತಿಹಾಸ ಹಳೆಯದು ಎಂದು ರಕ್ಷಣಾ ತಜ್ಞ ಗ್ರೂಪ್ ಕ್ಯಾಪ್ಟನ್ ಜೆ.ಎ.ವಿನೋದ್ ಹೇಳುತ್ತಾರೆ. ವಿಮಾನಗಳ ನಿಯಂತ್ರಣವನ್ನು 80ರ ದಶಕದಿಂದ ಭಾರತೀಯ ವಾಯುಸೇನೆಯಲ್ಲಿ ಗಣಕೀಕರಿಸಲು ಪ್ರಾರಂಭಿಸಲಾಯಿತು ಮತ್ತು ಇಲ್ಲಿಂದಲೇ ಡೆಲ್ಟಾ ವಿಂಗ್‌ನ ನೈಜ ಕೆಲಸವು ಮಿರಾಜ್ ಯುಗದಿಂದ ಪ್ರಾರಂಭವಾಯಿತು.

Trending News