ಲಂಡನ್: ಬ್ರಿಟನ್ನ ರಾಜಕುಮಾರ ಹ್ಯಾರಿಗೆ ನೀಡಿದ ಸಂದರ್ಶನವೊಂದರಲ್ಲಿ, ಒಬಾಮ ಅಧ್ಯಕ್ಷರಿಂದ ಹೊರಗುಳಿದ ನಂತರ ಅವರ ಜೀವನದ ಬದಲಾವಣೆಯನ್ನು ಹೇಳಿದರು. ಒಬಾಮಾ ಅವರು, "ನಾನು ಅಧ್ಯಕ್ಷರಾಗಿರುವಾಗ, ನನ್ನ ಕಾರಣದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿತ್ತು, ಆದರೆ ಈಗ ಸ್ವತಃ ನಾನೇ ಜಾಮ್ ನಲ್ಲಿ  ಸಿಲುಕಿಕೊಂಡಿದ್ದೇನೆ" ಎಂದು ಹೇಳಿದರು.


COMMERCIAL BREAK
SCROLL TO CONTINUE READING

ಹೆಂಡತಿ ಮಿಚೆಲ್ ಒಬಾಮರ ಬಗ್ಗೆ ಮಾತನಾಡಿದ ಒಬಾಮ ಆಕೆ ರಾಜಕೀಯವನ್ನು ಮಾಡಬಲ್ಲ ಮಹಿಳೆಯಲ್ಲ. ಆದರೆ ಇವರು ಇನ್ನೂ ಪ್ರಥಮ ಮಹಿಳೆಯಾಗಿ ಉತ್ತಮ ಕೆಲಸ ಮಾಡಿದರು. ನನ್ನ ಎಲ್ಲಾ ನಿರ್ಧಾರಗಳಲ್ಲಿ ಮಿಚೆಲ್ ನನ್ನೊಂದಿಗೆ ಸಹಕರಿಸಿದ್ದಾರೆ. ಅನೇಕ ವರ್ಷಗಳ ಮದುವೆಯ ನಂತರ, ನಾವು ಉತ್ತಮ ಸ್ನೇಹಿತರಾಗಿದ್ದೇವೆ ಎಂದು ಹೇಳಿದ್ದಾರೆ.


ಅಂತರ್ಜಾಲವು ಜನರ ಯೋಚನಾ ಶಕ್ತಿ ಕ್ಷೀಣಿಸುತ್ತಿದೆ-
ಅಂತರ್ಜಾಲವು ಸಮಾಜಕ್ಕೆ ದೊಡ್ಡ ಅಪಾಯವಾಗಿದೆ. ನಿಮ್ಮ ಪ್ರಸ್ತುತ ಚಿಂತನೆಯಲ್ಲಿ ನೀವು ಬಂಧಿಸಲ್ಪಟ್ಟಿದ್ದರಿಂದಾಗಿ ಯೋಚಿಸುವುದು ಜನರ ಸಾಮರ್ಥ್ಯವನ್ನು ಕಡಿಮೆಗೊಳಿಸುತ್ತದೆ. ದಿನೇ-ದಿನೇ ಜನರ ಯೋಚನಾ ಶಕ್ತಿ ಕ್ಷೀಣಿಸುತ್ತಿದೆ ಎಂದು  ಬರಾಕ್ ಒಬಾಮ ಅವರ ಪ್ರಿನ್ಸ್ ಹ್ಯಾರಿಯೊಂದಿಗಿನ ಸಂದರ್ಶನವು ಬಿಬಿಸಿ ರೇಡಿಯೋ 4 ರಲ್ಲಿ ಪ್ರಸಾರವಾಯಿತು.


ನಾಯಕರು ಏನಾದರು ಹೊಸತನ್ನು ಅಳವಡಿಸಬೇಕು-
ಅಂತರ್ಜಾಲವು ಸಮಾಜಕ್ಕೆ ತಂದೊಡ್ಡುತ್ತಿರುವ ಅಪಾಯವನ್ನು ಕಡಿಮೆಗೊಳಿಸಲು ನಾಯಕರು ಏನಾದರು ಹೊಸತನ್ನು ಅಳವಡಿಸಬೇಕು. ಏಕೆಂದರೆ, ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನಾವು ಇಷ್ಟಪಡುವ ರೀತಿಯ ಸುದ್ದಿ ಅಥವಾ ಮಾಹಿತಿಯನ್ನು ನಾವು ಸ್ವೀಕರಿಸುತ್ತೇವೆ. ಇದರಿಂದಾಗಿ, ಇತರ ಕಡೆ ದೃಷ್ಟಿಕೋನಕ್ಕೆ ಜನರು ತಿಳಿದಿರುವುದಿಲ್ಲ ಎಂದು ಒಬಾಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.