WHO Big Statement: ಭಾರತದಲ್ಲಿ ಕಂಡುಬಂದ Covid-19ನ `ಬಿ.1.617 ರೂಪಾಂತರಿ ಕಳವಳ ಹೆಚ್ಚಿಸಿದೆ
WHO Big Statement: ವಿಶ್ವ ಆರೋಗ್ಯ ಸಂಘಟನೆಯ ಪ್ರಕಾರ ಎಲ್ಲಕ್ಕಿಂತ ಮೊದಲು ಭಾರತದಲ್ಲಿ ಪತ್ತೆಯಾದ B.1.617ನ ಮೂರು ರೂಪಾಂತರಿಗಳಿದ್ದು, B.1.617.2 ಇದೀಗ ಕಳವಳಕ್ಕೆ ಕಾರಣ` ಎಂದಿದೆ ಮತ್ತು ಉಳಿದೆರಡು ರೂಪಾಂತರಿಗಳ ಹರಡುವಿಕೆಯ ದರ ತುಂಬಾ ಕಡಿಮೆಯಾಗಿದೆ.
United Nations: ವಿಶ್ವ ಆರೋಗ್ಯ ಸಂಘಟನೆಯ (WHO On India Coronavirus) ಪ್ರಕಾರ ಎಲ್ಲಕ್ಕಿಂತ ಮೊದಲು ಭಾರತದಲ್ಲಿ ಪತ್ತೆಯಾದ B.1.617ನ ಮೂರು ರೂಪಾಂತರಿಗಳಿದ್ದು, B.1.617.2 ಇದೀಗ ಕಳವಳಕ್ಕೆ ಕಾರಣ' ಎಂದಿದೆ ಮತ್ತು ಉಳಿದೆರಡು ರೂಪಾಂತರಿಗಳ ಹರಡುವಿಕೆಯ ದರ ತುಂಬಾ ಕಡಿಮೆಯಾಗಿದೆ.
ಬಿ .1.617 ರೂಪಾಂತರಿ ಮೊದಲು ಭಾರತದಲ್ಲಿ (India) ಕಂಡುಬಂದಿತ್ತು ಮತ್ತು ಇದನ್ನು ಬಿ .1.617.1, ಬಿ .1.617.2 ಮತ್ತು ಬಿ .1.617.3 ಎಂದು ಮೂರು ರೂಪಾಂತರಿಗಳಾಗಿ ವಿಂಗಡಿಸಲಾಗಿದೆ. ಮಂಗಳವಾರ ಪ್ರಕಟವಾದ COVID-19 ಸಾಪ್ತಾಹಿಕ ಎಪಿಡೆಮಿಯೋಲಾಜಿಕಲ್ ಅಪ್‌ಡೇಟ್‌ನಲ್ಲಿ, WHO ಈ ವರ್ಷ ಮೇ 11 ರಂದು B.1.617.1 ಮತ್ತು B.1.617.2 ರೂಪಾಂತರಿಗಳಿ (Coronavirus)ಗೆ ಲಭ್ಯವಿರುವ ಡೇಟಾವನ್ನು ಬಳಸಿಕೊಂಡು, B.1.617 ರೂಪಾಂತರಿಯನ್ನು ಜಾಗತಿಕ "Variant Of Concern" (ಕಾಳಜಿಗೆ ಕಾರಣವಾಗುವ ಒಂದು ರೂಪಾಂತರಿ) (VoC).
ಜನರ ಪ್ರಾಣಕ್ಕೆ ಅತ್ಯಂತ ಅಪಾಯಕಾರಿ B.1.617.2
ಈ ಕುರಿತು ಹೇಳಿಕೆ ನೀಡಿರುವ WHO "ಮೇ 11 ರಿಂದ ಇಂದಿನವರೆಗೆ B.1.617.2 ವೇರಿಯಂಟ್ ಜನರ ಪ್ರಾಣಕ್ಕೆ ತುಂಬಾ ಅಪಾಯಕಾರಿ ಎಂದು ಸಾಬೀತಾಗಿದ್ದು, ಉಳಿದೆರಡು ವೇರಿಯಂಟ್ ಗಳು ಹರಡುವ ದರ ತೀರಾ ವಿರಳವಾಗಿದೆ" ಎಂದಿದೆ. ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆಯ (WHO) ಮೂಲಕ ಜಾರಿಗೊಳಿಸಲಾಗಿರುವ ಅಪ್ಡೇಟ್ ನಲ್ಲಿ " ಇಂದಿಗೂ ಕೂಡ B.1.617.2 ವೇರಿಯಂಟ್ 'VoC'ಯಾಗಿದೆ ಹಾಗೂ ನಾವು ಸೋಂಕು ಹರಡುವ ದರ ಮತ್ತು ಈ ಸೋಂಕಿನಿಂದ ಇತರೆ ದೇಶಗಳಲ್ಲಿ ಹೆಚ್ಚಾಗುತ್ತಿರುವ ಸೋಂಕಿನ ಪ್ರಕರಣಗಳ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ. ಈ ರೂಪಾಂತರಿಯ ಪ್ರಭಾವದ ಕುರಿತಾದ ಅಧ್ಯಯನ WHOದ ಉನ್ನತ ಆದ್ಯತೆಯಾಗಿದೆ" ಎಂದಿದೆ .
ಸೋಮವಾರ WHO ಕೊವಿಡ್ 19 ನ ಮುಖ್ಯ ರೂಪಾಂತರಿಗಳಿಗೆ ಹೆಸರು ಸೂಚಿಸಲು ಹೊಸ ವಿಧಾನವನ್ನು ಘೋಷಿಸಿತ್ತು. ಗ್ರೀಕ್ ವರ್ಣಮಾಲೆಯ ಆಧಾರದ ಮೇಲೆ (ಅಂದರೆ ಅಲ್ಫಾ, ಬೀಟಾ, ಗಾಮಾ, ಡೆಲ್ಟಾ, ಕಪ್ಪಾ ಇತ್ಯಾದಿ ) ಇವುಗಳಿಗೆ ಹೆಸರು ನೀಡುವುದು ಹಾಗೂ ನೆನಪಿನಲ್ಲಿಟ್ಟುಕೊಳ್ಳುವುದು ಇದೀಗ ಮತ್ತಷ್ಟು ಸುಲಭವಾಗಿದೆ.
ಇದನ್ನೂ ಓದಿ-ಪಾಕ್ ವ್ಯಾಕ್, ಇದು ಮೇಡ್ ಇನ್ ಪಾಕಿಸ್ತಾನ್ ಕೊವಿಡ್ ವ್ಯಾಕ್ಸಿನ್..!
ಸೋಂಕಿನ ಪ್ರಕರಣಗಳಲ್ಲಿ ಸತತ ಮೂರನೇ ವಾರವೂ ಕೂಡ ಇಳಿಕೆಯಾಗಿದೆ
ಭಾರತದಲ್ಲಿ, ಕಳೆದ ವಾರ 13,64,668 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ಇದು ಹಿಂದಿನ ವಾರಗಳಿಗಿಂತ ಶೇಕಡಾ 26 ರಷ್ಟು ಕಡಿಮೆಯಾಗಿದೆ ಎಂದು ಅಪ್ಡೇಟ್ ನಲ್ಲಿ ಹೇಳಲಾಗಿದೆ. ಈ ಅವಧಿಯಲ್ಲಿ ಬ್ರೆಜಿಲ್‌ನಲ್ಲಿ 420,981, ಅರ್ಜೆಂಟೀನಾದಲ್ಲಿ 219,910, ಯುಎಸ್‌ನಲ್ಲಿ 153,587 ಮತ್ತು ಕೊಲಂಬಿಯಾದಲ್ಲಿ 150,517 ಹೊಸ ಪ್ರಕರಣಗಳು ವರದಿಯಾಗಿವೆ.
ಇದನ್ನೂ ಓದಿ-Corona Virus Nomination By WHO: ಭಾರತದಲ್ಲಿ ದೊರೆತೆ Covid-19 ರೂಪಾಂತರಿಗಳಿಗೆ ನಾಮಕರಣ ಮಾಡಿದ WHO
ಆಗ್ನೇಯ ಏಷ್ಯಾ ಪ್ರಾಂತ್ಯದಲ್ಲಿ ಹಿಂದಿನ ವಾರಕ್ಕಿಂತ 1.5 ದಶಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ಮತ್ತು 29,000 ಕ್ಕೂ ಹೆಚ್ಚು ಸಾವುಗಳು ವರದಿಯಾಗಿದ್ದು, ಕ್ರಮವಾಗಿ ಶೇ.24 ಹಾಗೂ ಶೇ.8 ರಷ್ಟು ಇಳಿಕೆಯಾಗಿದೆ "ಸತತ ಮೂರನೇ ವಾರದಲ್ಲಿಯೂ ಕೂಡ ಸೋಂಕು ಪ್ರಕರಣಗಳು ಕಡಿಮೆಯಾಗಿವೆ ಮತ್ತು ಮಾರ್ಚ್ 2021 ರ ಆರಂಭದ ನಂತರ ಮೊದಲ ಬಾರಿಗೆ ಸಾವಿನ ಪ್ರಕರಣಗಳು ಕಡಿಮೆಯಾಗಿವೆ" ಎಂದು ಅದು ಹೇಳಿದೆ. ಇನ್ನೊಂದೆಡೆ ದಕ್ಷಿಣ ಏಷ್ಯಾ ಕ್ಷೇತ್ರದಲ್ಲಿ ಅತಿ ಹೆಚ್ಚು ಸಾವುಗಳು ಭಾರತದಲ್ಲಿ ಸಂಭವಿಸಿವೆ ಎನ್ನಲಾಗಿದ್ದು, ಭಾರತದ ಬಳಿಕ ಇಂಡೋನೇಷ್ಯಾ ಹಾಗೂ ನೇಪಾಳದಲ್ಲಿ ಅಧಿಕ ಸಾವುಗಳು ವರದಿಯಾಗಿವೆ ಎಂದು ಅಪ್ಡೇಟ್ ನಲ್ಲಿ ಹೇಳಲಾಗಿದೆ.
ಇದನ್ನೂ ಓದಿ-'Patient Su': ಸಿಕ್ ಹಾಕೊಂಡ್ಲು 'ಪೇಶಂಟ್ ಸೂ', ಇನ್ನು ಚೀನಾ 'ಖೇಲ್ ಖತಂ'