ಇಸ್ಲಾಮಾಬಾದ್: ಯಾವ ನಾಯಕ ಸಕಾಲದಲ್ಲಿ ಯೂಟರ್ನ್ ತೆಗೆದುಕೊಳ್ಳುವುದಿಲ್ಲವೋ ಆತ ನಿಜವಾದ ನಾಯಕನೇ ಅಲ್ಲ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕನಾಗಿ ಅವರ ಕ್ರಿಕೆಟ್ ದಿನಗಳನ್ನು ಮೆಲುಕು ಹಾಕಿದರು. "ನಾವು ಯಾವಾಗಲೂ ಕ್ರೀಡಾ ತಂತ್ರ ರೂಪಿಸುತ್ತಿದ್ದೆವು. ಆದರೆ ಎದುರಾಳಿ ತಂಡ ನಮ್ಮ ವಿರುದ್ಧ ರಣತಂತ್ರ ರೂಪಿಸಿದ್ದೇ ಆದಲ್ಲಿ, ನಾವು ನಮ್ಮ ಸ್ಟ್ರಾಟಜಿ ಬದಲಾಯಿಸಿಕೊಳ್ಳುತ್ತಿದ್ದೆವು ಎಂದರು. ಅಡಾಲ್ಫ್ ಹಿಟ್ಲರ್ ಮತ್ತು ನೆಪೋಲಿಯನ್ ಬೋನಾಪಾರ್ಟೆಯ ಉದಾಹರಣೆಯನ್ನು ಇಮ್ರಾನ್ ಖಾನ್ ಈ ಸಂದರ್ಭದಲ್ಲಿ ನೀಡಿದರು ಎಂದ ಜಿಯೋ ನ್ಯೂಸ್ ವರದಿ ಮಾಡಿದೆ.


ಆ ವರದಿಯ ಪ್ರಕಾರ, "ಹಿಟ್ಲರ್ ಮತ್ತು ನೆಪೋಲಿಯನ್ ಸರಿಯಾದ ಸಮಯದಲ್ಲಿ ಯೂಟರ್ನ್ ತೆಗೆದುಕೊಳ್ಳದ ಕಾರಣ ಅವರು ಸಾಕಷ್ಟು ಸೋಲುಗಳನ್ನು ಅನುಭವಿಸಬೇಕಾಯಿತು. ಇದೇ ಸಂದರ್ಭದಲ್ಲಿ ಶುಕ್ರವಾರ ಅಕೌಂಟಬಿಲಿಟಿ ಕೋರ್ಟ್'ನಲ್ಲಿ ನೀಡಿದ ಹೇಳಿಕೆ ಯೂಟರ್ನ್ ಅಲ್ಲ, ಆದರೆ ಅದು ಸುಳ್ಳು" ಎಂದು ಇಮ್ರಾನ್ ಖಾನ್ ಹೇಳಿದರು.


ಮಲೇಷಿಯಾಗೆ ಇಮ್ರಾನ್ ಖಾನ್ : ಪಾಕಿಸ್ತಾನದಲ್ಲಿ ಆರ್ಥಿಕ ಸಂಕಷ್ಟ ಎದುರಾದ ಬೆನ್ನಲೇ ಪ್ರಧಾನಿ ಇಮ್ರಾನ್ ಖಾನ್ ಮಲೇಷಿಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಐಎಂಎಫ್ ಪರಿಹಾರ ಪ್ಯಾಕೇಜ್ ಮೇಲೆ ಪಾಕಿಸ್ತಾನದ ಅವಲಂಬನೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಅಲ್ಲಿ ಅವರು ಹಣಕಾಸಿನ ನೆರವು ಕೋರುವ ಸಾಧ್ಯತೆಯಿದೆ ಎನ್ನಲಾಗಿದೆ. 


ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ಪ್ರಕಾರ, ಇಮ್ರಾನ್ ಖಾನ್ ನವೆಂಬೆರ್ 21 ಮತ್ತು 22ರಂದು ಮಲೇಷಿಯಾಗೆ ತೆರಳಲಿದ್ದು, ಈ ಸಂದರ್ಭದಲ್ಲಿ ಉನ್ನತ ಮಟ್ಟದ ನಿಯೋಗವನ್ನು ಕರೆದೊಯ್ಯಲಿದ್ದಾರೆ ಎನ್ನಲಾಗಿದೆ. ಇದು ಇಮ್ರಾನ್ ಖಾನ್ ಅವರ ಮೊದಲ ಭೇಟಿಯಾಗಿದ್ದು, ಮಲೇಶಿಯಾ ಪ್ರಧಾನಮಂತ್ರಿ ಮಹಾತಿರ್ ಮೊಹಮ್ಮದ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. 


ಪಾಕಿಸ್ತಾನ ಮತ್ತು ಮಲೇಶಿಯಾ ಎರಡೂ ರಾಷ್ಟ್ರಗಳೂ ಉತ್ತಮ ಬಾಂಧವ್ಯ ಹೊಂದಿದ್ದು, ಇದೀಗ ಪ್ರಧಾನಿ ಇಮ್ರಾನ್ ಖಾನ್ ಖಾನ್ ಭೇಟಿಯಿಂದ ಆ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.