Amazon ಸಾರಥ್ಯವಹಿಸಲಿರುವ Andy Jassy ಯಾರು, ಇಲ್ಲಿದೆ ಅವರ ಮಾಹಿತಿ
Andy Jassy New CEO Of Amazon - AWS ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಆಂಡಿ ಜಸ್ಸಿ ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಜೆಫ್ ಬೆಜೋಸ್ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ. ಇನ್ನೊಂದೆಡೆ ಜೆಫ್ ಬೆಜೋಸ್ ಅವರನ್ನು ಮಂಡಳಿಯ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ನವದೆಹಲಿ: Andy Jassy New CEO Of Amazon - ಇ-ಕಾಮರ್ಸ್ ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ದಿಗ್ಗಜ ಕಂಪನಿ ಅಮೆಜಾನ್ ಕಂಪನಿಯ ಸಿಇಓ ಜೆಫ್ ಬೆಜೋಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ ಹಾಗೂ ಆಂಡಿ ಜಸ್ಸಿ ಅವರಿಗೆ ತಮ್ಮ ಸ್ಥಾನದ ಜವಾಬ್ದಾರಿ ವಹಿಸಿದ್ದಾರೆ. ಆದರೆ, ಇದೀಗ ಎಲ್ಲರ ಮನದಲ್ಲಿ ಒಂದೇ ಪ್ರಶ್ನೆ ಇದೆ. ಅದೇನೆಂದರೆ ಈ ಆಂಡಿ ಜಸ್ಸಿ ಯಾರು? ಅವರಿಗೇಕೆ ಇಷ್ಟೊಂದು ದೊಡ್ಡ ಜವಾಬ್ದಾರಿ ವಹಿಸಲಾಗುತ್ತಿದೆ? ಈ ಲೇಖನದಲ್ಲಿ ನಾವು ನಿಮಗೆ ನಿಮ್ಮ ಈ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದು, ಈ ಆಂಡಿ ಜಸ್ಸಿ ಯಾರು ಎಂಬುದನ್ನು ಹೇಳಲಿದ್ದೇವೆ.
ಯಾರು ಈ ಆಂಡಿ ಜಸ್ಸಿ?
ಆಂಡಿ ಜಸ್ಸಿ ಬಗ್ಗೆ ಬಹುತೇಕ ಜನರಿಗೆ ಗೊತ್ತಿಲ್ಲ. ಆದರೆ, ಕಳೆದ ಒಂದು ದಶಕದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜಸ್ಸಿ ಒಂದು ದೊಡ್ಡ ಹೆಸರಾಗಿದೆ. ಜಸ್ಸಿ ಅಮೆಜಾನ್ ವೆಬ್ ಸೇವೆಯ ಮುಖ್ಯಸ್ಥರಾಗಿದ್ದರು ಹಾಗೂ ತಂತ್ರಜ್ಞಾನದ ವಿಷಯದಲ್ಲಿ ಅವರು ಅಮೆಜಾನ್ ಗೆ ಹೊಸ ಆಯಾಮ ನೀಡಿದ್ದಾರೆ. ಜಸ್ಸಿ ತಂತ್ರಜ್ಞಾನದಲ್ಲಿ ಆಗಾಧ ಜ್ಞಾನ ಹೊಂದಿದ್ದಾರೆ. ಅವರ ನಿರ್ಣಯಗಳ ಕಾರಣವೇ ತಂತ್ರಜ್ಞಾನದ ಕ್ಷೇತ್ರದಲ್ಲಿ ಅಮೆಜಾನ್ ಕ್ಲೌಡ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ತನ್ನ ಪ್ರತಿಸ್ಪರ್ಧಿಗಲಾಗಿರುವ ಒರಾಕಲ್ ಕಾರ್ಪ್ ಹಾಗೂ ಮೈಕ್ರೊಸೊಫ್ಟ್ ಕಾರ್ಪ್ ಗಳನ್ನು ಹಿಂದಿಕ್ಕಿದೆ.
ಇದನ್ನು ಓದಿ- ವಿಶ್ವದ ನಂ.1 ಶ್ರೀಮಂತ ಸಿಇಒ ರಾಜೀನಾಮೆ ನಿರ್ಧಾರ ಏಕೆ..? Amazonನಲ್ಲಿ ಅಂತಾದ್ದೇನಾಗಿತ್ತು..?
ವಿದ್ಯಾಭ್ಯಾಸದ ಬಳಕೆ ಕಂಪನಿಗೆ ಸೇರಿದ್ದರು
53 ವರ್ಷದ ಜೆಸ್ಸಿ 1997ರಲ್ಲಿ ಹಾರ್ವರ್ಡ್ ಬಿಜಿನೆಸ್ ಸ್ಕೂಲ್ ನಿಂದ ತಮ್ಮ ಪದವಿ ಶಿಕ್ಷಣ ಮುಗಿಸಿ ಅಮೆಜಾನ್ ಕಂಪನಿ ಸೇರಿಕೊಂಡಿದ್ದರು. ಬಳಿಕ ಅವರು ಅಮೆಜಾನ್ ವೆಬ್ ಸರ್ವಿಸಿಸ್ ಸ್ಥಾಪಿಸಿದರು ಹಾಗೂ ಲಕ್ಷಾಂತರ ಜನರು ಇದರ ಬಳಕೆ ಮಾಡಬೇಕು ಎಂಬ ಉದ್ದೇಶದಿಂದ ಕ್ಲೌಡ್ ಕಂಪ್ಯೂಟಿಂಗ್ ಪ್ಲಾಟ್ ಫಾರ್ಮ್ ಅಭಿವೃದ್ಧಿಗೊಳಿಸಿದರು. ಹೀಗಾಗಿ ಜಸ್ಸಿ ಅವರೇ ಈ ಹುದ್ದೆಗೆ ಪ್ರಮುಖ ಹಕ್ಕುದಾರ ಎಂದು ಹೇಳಲಾಗುತ್ತಿತ್ತು. ಜೆಸ್ಸಿ, ಜೆಫ್ ಬೆಜೋಸ್ ಅವರನ್ನೊಳಗೊಂಡ ಅಧಿಕಾರಿಗಳ ಗ್ರೂಪ್ S ತಂಡದ ಸದಸ್ಯರಾಗಿದ್ದಾರೆ. 2016 ರಲ್ಲಿ ಜೆಫ್ ಬೆಜೋಸ್, ಜೆಸ್ಸಿಯನ್ನು AWSನ CEO ಆಗಿ ಬಡ್ತಿ ನೀಡಿದ್ದರು.
ಇದನ್ನು ಓದಿ- ಆ ಸ್ಥಾನ ನನ್ನದು, ಬಾ ಕೆಳಗಿಳಿ, ಮತ್ತೆ ವಿಶ್ವದ ನಂ.1 ಧಣಿ ಪಟ್ಟ ಅಲಂಕರಿಸಿದ Jeff Bezos
ಪ್ರಶಂಸೆ ವ್ಯಕ್ತಪಡಿಸಿದ ಜೆಫ್ ಬೆಜೋಸ್
ಜೆಸ್ಸಿ ಕುರಿತು ಮಾತನಾಡಿರುವ ವಿಶ್ವದ ಆಗರ್ಭ ಶ್ರೀಮಂತ ವ್ಯಕ್ತಿ ಜೆಫ್ ಬೆಜೋಸ್(Jeff Bezos), ಜೆಸ್ಸಿಯನ್ನು ಕಂಪನಿಯ ಎಲ್ಲರೂ ಗುರುತಿಸುತ್ತಾರೆ. ಅವರು ಅಮೆಜಾನ್ ಗಾಗಿ ತುಂಬಾ ಸಮಯದಿಂದ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರೊಬ್ಬ ಉತ್ತಮ ಲೀಡರ್ ಸಾಬೀತಾಗುವ ಭರವಸೆ ನನಗಿದೆ ಎಂದಿದ್ದಾರೆ. ಜಸ್ಸಿ 2006ರಿಂದ AWSನಿಂದ ತಮ್ಮ ಲೀಡರ್ ಪಯಣ ಆರಂಭಿಸಿದ್ದಾರೆ.
ಇದನ್ನು ಓದಿ- Elon Musk ಅಬ್ಬಬ್ಬಾ..! ಈತನ ಸಂಪಾದನೆಯೇ..! ಒಂದೇ ವರ್ಷದಲ್ಲಿ 160 ಬಿಲಿಯನ್ ಡಾಲರ್ ಲಾಭ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.