ನವದೆಹಲಿ: ಕೊಟ್ಯಾದೀಶನಾಗಿರುವ ವ್ಯಕ್ತಿಯೊಬ್ಬ ಏಕಾಏಕಿ ಹೇಗೆಲ್ಲಾ ಪಾತಾಳಕ್ಕೆ ಇಳಿದು ಜೀರೋಪತಿಯಾಗಬಹುದು ಎನ್ನುವುದನ್ನು ಹುಡುಕುತ್ತಾ ಹೋದಾಗ ನಮಗೆ ಈಗ ಸ್ಯಾಮ್ ಬ್ಯಾಂಕ್‌ಮ್ಯಾನ್-ಫ್ರೈಡ್‌ ಸ್ಟೋರಿ ಕಣ್ಣ ಮುಂದೆ ಬರುತ್ತದೆ.


COMMERCIAL BREAK
SCROLL TO CONTINUE READING

ಹೌದು, ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ ಕೇವಲ ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಸುಮಾರು 16 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದ್ದ ಸ್ಯಾಮ್ ಸೋಮವಾರದಿಂದ ಶುಕ್ರವಾರ ಎನ್ನುವಷ್ಟರಲ್ಲಿ ಅವರ ಸಂಪತ್ತು ಈಗ ಶೂನ್ಯಕ್ಕೆ  ಇಳಿದಿದೆ....! ಆ ಮೂಲಕ ಈಗ ಅವರು ಇತಿಹಾಸದಲ್ಲಿಯೇ ಅತಿ ದೊಡ್ಡದಾದ ಸಂಪತ್ತಿನ ವಿನಾಶಕ್ಕೆ ಸಾಕ್ಷಿಯಾಗಿದ್ದಾರೆ.


ಕ್ರಿಪ್ಟೋ ಸಾಮ್ರಾಜ್ಯದಿಂದಲೇ ಸುಮಾರು 26 ಬಿಲಿಯನ್ ಡಾಲರ್ ಆಸ್ತಿಯನ್ನು ಗಳಿಸಿದ್ದ 26 ವರ್ಷದ ಸ್ಯಾಮ್ ಕೆಲವೇ ವಾರದ ಹಿಂದಷ್ಟೇ ಅದು 16 ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದ್ದರು. ಆದರೆ ಅದು ಏಕಾಏಕಿ ಶುಕ್ರವಾರಕ್ಕೆ ಶೂನ್ಯಕ್ಕೆ ಕುಸಿದಿದೆ.ಈಗ ಶುಕ್ರವಾರದಂದು ಸ್ಯಾಮ್ ಬ್ಯಾಂಕ್‌ಮ್ಯಾನ್-ಫ್ರೈಡ್  ಎಫ್‌ಟಿಎಕ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಅವರ ಸಂಸ್ಥೆ ದಿವಾಳಿಯಾಗಿರುವುದನ್ನು ದೃಡಪಡಿಸಿತು.


ಇದನ್ನೂ ಓದಿ: I am a CEO : ಕೆಜಿಎಫ್‌ ಸ್ಟೈಲ್‌ನಲ್ಲಿ ಹೊಸ ಕಂಪನಿ ಹೆಸರೇಳಿದ ಡ್ರೋನ್‌ ಪ್ರತಾಪ್‌ 


1992 ರಲ್ಲಿ ಜನಿಸಿದ ಸ್ಯಾಮ್ ಬ್ಯಾಂಕ್ಮನ್-ಫ್ರೈಡ್ ಕ್ಯಾಲಿಫೋರ್ನಿಯಾದಲ್ಲಿ ಬಾಲ್ಯದ ದಿನಗಳನ್ನು ಕಳೆದರು. ಪ್ರೌಢಶಾಲಾ ವಿದ್ಯಾರ್ಥಿಯಾಗಿ, ಅವರು ಕೆನಡಾ/ಯುಎಸ್‌ಎ ಮ್ಯಾಥ್‌ಕ್ಯಾಂಪ್‌ಗೆ ಹಾಜರಾಗಿದ್ದರು, ಇದು ಗಣಿತಶಾಸ್ತ್ರದ ಪ್ರವೀಣ ವಿದ್ಯಾರ್ಥಿಗಳಿಗೆ ಬೇಸಿಗೆ ಕಾರ್ಯಕ್ರಮವಾಗಿದೆ,  ಮುಂದೆ ಅದರ ಹಳೆಯ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಗ್ಯಾರಿ ವಾಂಗ್ ಭವಿಷ್ಯದಲ್ಲಿ ಸ್ಯಾಮ್ ಅವರ ಪಾಲುದಾರರಾಗುತ್ತಾರೆ.


ಬ್ಯಾಂಕ್‌ಮ್ಯಾನ್-ಫ್ರೈಡ್ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ (MIT) ಭೌತಶಾಸ್ತ್ರದಲ್ಲಿ ಪದವಿ ಪಡೆದು ನಂತರ ಅವರು ಜೇನ್ ಸ್ಟ್ರೀಟ್ ಕ್ಯಾಪಿಟಲ್‌ಗಾಗಿ ಕರೆನ್ಸಿಗಳು, ಫ್ಯೂಚರ್‌ಗಳು ಮತ್ತು ವಿನಿಮಯ-ವಹಿವಾಟು ಹಣವನ್ನು ವ್ಯಾಪಾರದಲ್ಲಿ ತೊಡಗಿಸಿದರು.


ಇದನ್ನೂ ಓದಿ : Rahul Gandhi : ಪುಟ್ಟ ಬಾಲಕಿಯ ಜೊತೆ ರಾಹುಲ್ ಮಾತುಕತೆ, ವಿಡಿಯೋ ವೈರಲ್‌


ನ್ಯೂಯಾರ್ಕ್ ಮೂಲದ ಸಂಸ್ಥೆಯಲ್ಲಿ ಮೂರು ವರ್ಷಕ್ಕೂ ಹೆಚ್ಚು ಅವಧಿಯ ನಂತರ, ಅವರು ಕ್ರಿಪ್ಟೋ ಟ್ರೇಡಿಂಗ್‌ಗೆ ತೆರಳಿದ್ದಲ್ಲದೆ 2017 ರಲ್ಲಿ ಅಲ್ಮೇಡಾ ರಿಸರ್ಚ್ ಅನ್ನು ಸ್ಥಾಪಿಸಿದರು. ಅದು ಪ್ರಮುಖ ಕ್ರಿಪ್ಟೋಕರೆನ್ಸಿಗಳನ್ನು ವ್ಯಾಪಾರ ಮಾಡುವುದರ ಜೊತೆಗೆ, ಕಂಪನಿಯು ಇತರ ಡಿಜಿಟಲ್ ಉತ್ಪನ್ನಗಳಲ್ಲಿ ತೊಡಗಿಸಿಕೊಂಡಿತು.


ಎಫ್‌ಟಿಎಕ್ಸ್ ಕುಸಿತವು ಎಸ್‌ಬಿಎಫ್‌ನ ಹೆಚ್ಚಿನ ಸಂಪತ್ತನ್ನು ನಾಶಮಾಡುವ ಮೊದಲು, ಅವರು ಡಿಜಿಟಲ್ ಆಸ್ತಿ ಉದ್ಯಮದಲ್ಲಿ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಫೋರ್ಬ್ಸ್ ಅವರ ನಿವ್ವಳ ಮೌಲ್ಯವು $26.5 ಶತಕೋಟಿಗೆ ಏರಿದೆ ಎಂದು ಅಂದಾಜಿಸಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.