I am a CEO : ಕೆಜಿಎಫ್‌ ಸ್ಟೈಲ್‌ನಲ್ಲಿ ಹೊಸ ಕಂಪನಿ ಹೆಸರೇಳಿದ ಡ್ರೋನ್‌ ಪ್ರತಾಪ್‌

ಡ್ರೋನ್‌ ಪ್ರತಾಪ್‌ ಮತ್ತೇ ಸುದ್ದಿಯಲ್ಲಿದ್ದು, ಹೊಸ ಡ್ರೋನ್‌ ಕಂಪನಿ ತೆರೆಯುವುದಾಗಿ ತಿಳಿಸಿದ್ದಾರೆ. ಅಲ್ಲದೆ, ತಮಗೆ ಬೆಂಬಲ ನೀಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

Written by - Krishna N K | Last Updated : Nov 12, 2022, 12:52 PM IST
  • ಕೆಜಿಎಫ್‌ ಸ್ಟೈಲ್‌ನಲ್ಲಿ ಹೊಸ ಕಂಪನಿ ಹೆಸರೇಳಿದ ಡ್ರೋನ್‌ ಪ್ರತಾಪ್‌
  • ಪ್ರತಾಪ್‌ ಡ್ರೋನಾರ್ಕ್‌ಎರೋಸ್ಪೇಸ್‌ ಕಂಪನಿ ಪ್ರಾರಂಭ
  • ಅದರ ಹಬ್ಸ್‌ ಬಂದ್ಬಿಟ್ಟು, ಬೆಂಗಳೂರು, ನಾಸಿಕ್‌, ಪುಣೆ, ದುಲೆ, ಈ ನಾಲ್ಕು ಸಿಟಿಗಳಲ್ಲಿ ಇವೆ.
I am a CEO : ಕೆಜಿಎಫ್‌ ಸ್ಟೈಲ್‌ನಲ್ಲಿ ಹೊಸ ಕಂಪನಿ ಹೆಸರೇಳಿದ ಡ್ರೋನ್‌ ಪ್ರತಾಪ್‌ title=

ಬೆಂಗಳೂರು : ಡ್ರೋನ್‌ ಪ್ರತಾಪ್‌ ಮತ್ತೇ ಸುದ್ದಿಯಲ್ಲಿದ್ದು, ಹೊಸ ಡ್ರೋನ್‌ ಕಂಪನಿ ತೆರೆಯುವುದಾಗಿ ತಿಳಿಸಿದ್ದಾರೆ. ಅಲ್ಲದೆ, ತಮಗೆ ಬೆಂಬಲ ನೀಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ಡ್ರೋನ್‌ ಪ್ರತಾಪ್‌ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಡ್ರೋನ್‌ ಕಂಡು ಹಿಡಿದಿರುವುದಾಗಿ ಅದೇಷ್ಟೋ ಗಣ್ಯ ವ್ಯಕ್ತಿಗಳನ್ನು ಮತ್ತು ರಾಜಕೀಯ ದರೀಣರನ್ನು ಹಾಗೂ ಸಂಘ ಸಂಸ್ಥೆಗಳಿಗೆ ಮಣ್ಣೇರಚಿದ್ದ ಎಂಬ ವಿಚಾರ ಜನ ಬಾಯಲ್ಲಿ ಇಂದಿಗೂ ಹರಿದಾಡುತ್ತಿದೆ. ಆದ್ರೆ ಅದ್ಯಾವುದೂ ನಿಜವಲ್ಲ ಎಲ್ಲಾ ಸುಳ್ಳು ಎಂದು ಪ್ರತಾಪ್‌ ಇಂದಿಗೂ ವಾದಿಸುತ್ತಾರೆ. ಅದೇನೇ ಇರಲಿ ಸದ್ಯ ಪ್ರತಾಪ್‌ ಹೊಸ ಕಂಪನಿ ಜೊತೆ ಜನರ ಮುಂದೆ ಬಂದಿದ್ದಾರೆ.

ಇದನ್ನೂ ಓದಿ: IAS ಅಧಿಕಾರಿ ಟೀನಾ ದಾಬಿ ನ್ಯೂ ಲುಕ್‌ : ಯಾವ ಹಿರೋಯಿನ್‌ಗೂ ಕಮ್ಮಿ ಇಲ್ಲ ಇವರು..!

 
 
 
 

 
 
 
 
 
 
 
 
 
 
 

A post shared by Prathap N M (@droneprathap)

ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಮೂಲಕ ಮಾಹಿತಿ ನೀಡಿರುವ ಪ್ರತಾಪ್‌, ನಾನು ಡ್ರೋನಾರ್ಕ್‌ಎರೋಸ್ಪೇಸ್‌ ಎಂಬ ಕಂಪನಿ ಪ್ರಾರಂಭಿಸಿದ್ದೇನೆ.  I am a founder and CEO of the Dronerkaerospace company. ಅದರ ಹಬ್ಸ್‌ ಬಂದ್ಬಿಟ್ಟು, ಬೆಂಗಳೂರು, ನಾಸಿಕ್‌, ಪುಣೆ, ದುಲೆ, ಈ ನಾಲ್ಕು ಸಿಟಿಗಳಲ್ಲಿ ಇವೆ. ವ್ಯವಸಾಯಕ್ಕೆ ಸಂಬಂಧಿಸಿದಂತೆ ಡ್ರೋನ್‌ ತಯಾರು ಮಾಡುತ್ತೇವೆ. ಈಗಾಗಲೇ ನಮಗೆ ಆರ್ಡರ್‌ ಬಂದಿದೆ. ಎಲ್ಲರೂ ಬೆಂಬಲಿಸಿ ಎಂದು ಪ್ರತಾಪ್‌ ಮನವಿ ಮಾಡಿದ್ದಾರೆ. ಸದ್ಯ ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News