ನವದೆಹಲಿ: ಕೋವಿಡ್ -19 ನ ಹೊಸ ರೂಪಾಂತರವು ಭಾರತದಲ್ಲಿ ಕೋವಿಡ್ ಸೂಕ್ತ ನಡವಳಿಕೆಗೆ "ಎಚ್ಚರಿಕೆಯ ಗಂಟೆ" ಯಾಗಿ ಕಾರ್ಯನಿರ್ವಹಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ (WHO Scientist Dr Soumya Swaminathan) ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಜನರು ಜಾಗರೂಕರಾಗಿರಬೇಕು ಮತ್ತು ಮಾಸ್ಕ್ ಗಳನ್ನು (Mask) ಬಳಸುವುದನ್ನು ಮುಂದುವರಿಸಬೇಕು. ಮಾಸ್ಕ್ ಗಳನ್ನು "ನಿಮ್ಮ ಜೇಬಿನಲ್ಲಿರುವ ಲಸಿಕೆಗಳು" ಇದ್ದಂತೆ ಎಂದು ಹೇಳಿದರು. 


ಇದನ್ನೂ ಓದಿ : 21st Indo-Russia Annual Summit: ಡಿಸೆಂಬರ್ 6 ಕ್ಕೆ ಭಾರತಕ್ಕೆ ರಷ್ಯಾದ ಅಧ್ಯಕ್ಷ ಪುಟಿನ್ ಭೇಟಿ


ಎಲ್ಲಾ ವಯಸ್ಕರಿಗೆ ಸಂಪೂರ್ಣವಾಗಿ ಲಸಿಕೆ (Vaccination) ಹಾಕುವುದು, ಸಾಮೂಹಿಕ ಕೂಟಗಳನ್ನು ತಪ್ಪಿಸುವುದು, ವ್ಯಾಪಕವಾದ ಜೀನೋಮ್ ಅನುಕ್ರಮ ಮತ್ತು ಪ್ರಕರಣಗಳಲ್ಲಿ ಯಾವುದೇ ಅಸಾಮಾನ್ಯ ಬೆಳವಣಿಗೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದು ಓಮಿಕ್ರಾನ್ ವಿರುದ್ಧ ಹೋರಾಡಲು ವಿಜ್ಞಾನಿಗಳ ಇತರ ಕೆಲವು ಸಲಹೆಗಳಾಗಿವೆ. ಇದು ಓಮಿಕ್ರಾನ್ ವಿರುದ್ಧ ಹೋರಾಡಲು ನಮಗೆ ವಿಜ್ಞಾನ ಆಧಾರಿತ ತಂತ್ರದ ಅಗತ್ಯವಿದೆ ಎಂದು ಅವರು ಹೇಳಿದರು.


ಈ ರೂಪಾಂತರವು ಡೆಲ್ಟಾಕ್ಕಿಂತ (Delta variant) ಹೆಚ್ಚು ಹರಡಬಹುದು. ಆದರೂ ಅಧಿಕೃತವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದರು.


ವಿಶ್ವ ಆರೋಗ್ಯ ಸಂಸ್ಥೆ(WHO)ಯಿಂದ "ಆತಂಕದ ರೂಪಾಂತರ" ಎಂದು ಕರೆಯಲ್ಪಡುವ 'ಓಮಿಕ್ರಾನ್' ಹಿಂದಿನ ರೂಪಾಂತರಗಳಿಗಿಂತ ಹೆಚ್ಚು ಸಾಂಕ್ರಾಮಿಕವಾಗಿದೆ. ಆದಾಗ್ಯೂ ಇದು ಇತರ ತಳಿಗಳಿಗೆ ಹೋಲಿಸಿದರೆ ಹೆಚ್ಚು ಅಥವಾ ಕಡಿಮೆ ತೀವ್ರವಾದ COVID-19 ಅನ್ನು ಉಂಟುಮಾಡುತ್ತದೆಯೇ ಎಂದು ತಜ್ಞರಿಗೆ ಇನ್ನೂ ತಿಳಿದಿಲ್ಲ ಎಂದರು.


ಇದನ್ನೂ ಓದಿ : Dengue ನಿಂದ ಸಿಗಲಿದೆ ಶಾಶ್ವತ ಮುಕ್ತಿ! ಸೊಳ್ಳೆಗಳೇ ನಿಮ್ಮನ್ನು ಡೆಂಗ್ಯೂನಿಂದ ರಕ್ಷಿಸಲಿವೆ


ಹೊಸ ರೂಪಾಂತರದ ಗುಣಲಕ್ಷಣಗಳನ್ನು ಗುರುತಿಸಲು ನಮಗೆ ಹೆಚ್ಚಿನ ಅಧ್ಯಯನಗಳ ಅಗತ್ಯವಿದೆ ಎಂದು ಡಾ.ಸ್ವಾಮಿನಾಥನ್ ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.