ಡಾಲರ್ ಎದುರು ಮಂಡಿಯೂರಿದ ಅಫ್ಘನ್ ಕರೆನ್ಸಿ.. ಬೆಲೆ ಏರಿಕೆಗೆ ಕಂಗೆಟ್ಟ ಅಫ್ಘಾನಿಸ್ತಾನದ ನಿವಾಸಿಗಳು

ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಮತ್ತು ಹದಗೆಡುತ್ತಿರುವ ಆರ್ಥಿಕತೆಯಿಂದ ಅಫ್ಘಾನಿಸ್ತಾನ ಕಂಗೆಟ್ಟಿದೆ. ಹಲವಾರು ಕಾಬೂಲ್ ನಿವಾಸಿಗಳು ಅಫ್ಘನ್ ಕರೆನ್ಸಿ ವಿರುದ್ಧ ಡಾಲರ್‌ನ ಹೆಚ್ಚುತ್ತಿರುವ ಮೌಲ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

Written by - Zee Kannada News Desk | Last Updated : Nov 26, 2021, 06:12 PM IST
  • ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಮತ್ತು ಹದಗೆಡುತ್ತಿರುವ ಆರ್ಥಿಕತೆಯಿಂದ ಅಫ್ಘಾನಿಸ್ತಾನ ಕಂಗೆಟ್ಟಿದೆ. ಹಲವಾರು ಕಾಬೂಲ್ ನಿವಾಸಿಗಳು ಅಫ್ಘನ್ ಕರೆನ್ಸಿ ವಿರುದ್ಧ ಡಾಲರ್‌ನ ಹೆಚ್ಚುತ್ತಿರುವ ಮೌಲ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಡಾಲರ್ ಎದುರು ಮಂಡಿಯೂರಿದ ಅಫ್ಘನ್ ಕರೆನ್ಸಿ.. ಬೆಲೆ ಏರಿಕೆಗೆ ಕಂಗೆಟ್ಟ ಅಫ್ಘಾನಿಸ್ತಾನದ ನಿವಾಸಿಗಳು title=
file photo

ಕಾಬೂಲ್ ( ಅಫ್ಘಾನಿಸ್ತಾನ): ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಮತ್ತು ಹದಗೆಡುತ್ತಿರುವ ಆರ್ಥಿಕತೆಯಿಂದ ಅಫ್ಘಾನಿಸ್ತಾನ ಕಂಗೆಟ್ಟಿದೆ. ಹಲವಾರು ಕಾಬೂಲ್ ನಿವಾಸಿಗಳು ಅಫ್ಘನ್ ಕರೆನ್ಸಿ ವಿರುದ್ಧ ಡಾಲರ್‌ನ ಹೆಚ್ಚುತ್ತಿರುವ ಮೌಲ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಇದನ್ನೂ ಓದಿ-WHO Alert! Europನಲ್ಲಿ Covid-19 ರೌದ್ರ ನರ್ತನ, ಕೆಲವೇ ತಿಂಗಳಲ್ಲಿ ಸಾವಿನ ಸಂಖ್ಯೆ 7 ಲಕ್ಷ ಎಂದು ಆತಂಕ ವ್ಯಕ್ತಪಡಿಸಿದ WHO

ನಿವಾಸಿಗಳ ಪ್ರಕಾರ, ಡಾಲರ್ ವಿರುದ್ಧ ಅಫ್ಘನ್ ಕರೆನ್ಸಿಯ ಸವಕಳಿಯು ಸರಕುಗಳ ಬೆಲೆಯನ್ನು ಹೆಚ್ಚಿಸಿದೆ. ಇದರಿಂದಾಗಿ ಸ್ಥಳೀಯರು ದಿನಸಿ ವಸ್ತುಗಳನ್ನು ಕೊಳ್ಳಲು ಪರಿತಪಿಸುವಂತಾಗಿದೆ ಎಂದು ಟೋಲೋ ನ್ಯೂಸ್ (Tolo News) ವರದಿ ಮಾಡಿದೆ.

ಇದನ್ನೂ ಓದಿ-ಕೊರೊನಾ ನಿರ್ವಹಣೆಗಾಗಿ ತುರ್ತು 23,123 ಕೋಟಿ ರೂ.ಪ್ಯಾಕೇಜ್ ಘೋಷಿಸಿದ ಕೇಂದ್ರ ಸರ್ಕಾರ

'ದಿನದಿಂದ ದಿನಕ್ಕೆ ಡಾಲರ್ ಬೆಲೆ ಏರುತ್ತಿದೆ ಮತ್ತು ಅಫ್ಘಾನಿಸ್ತಾನದ ಕರೆನ್ಸಿ ಮಾರುಕಟ್ಟೆಯಲ್ಲಿ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಅಫ್ಘನ್ ಕರೆನ್ಸಿಯ ವಿರುದ್ಧ ಡಾಲರ್ ಮೌಲ್ಯವು ಏರಿಕೆಯಾಗುತ್ತಿದ್ದಂತೆ, ಆಹಾರ ಪದಾರ್ಥಗಳ ಬೆಲೆಯೂ ಹೆಚ್ಚಾಗುತ್ತದೆ" ಎಂದು ನಂಗರ್ಹಾರ್ ನಿವಾಸಿ ಅಬ್ದುಲ್ ವಾಹೆದ್ ಸಂಕಟ ತೋಡಿಕೊಂಡಿದ್ದಾರೆ.

"ಡಾಲರ್ ಬೆಲೆ ಏರಿದೆ. ಇದು ಜನರಿಗೆ ಹಾನಿಯಾಗಿದೆ. ನಿರುದ್ಯೋಗ ಮತ್ತು ಡಾಲರ್ ಬೆಲೆ ಏರಿಕೆ ಜನರನ್ನು ಸಂಕಷ್ಟಕ್ಕೆ ದೂಡಿದೆ" ಎಂದು ಕಾಬೂಲ್ ನಿವಾಸಿ ಅಹ್ಮದ್ ಶೋಯಾಬ್ ಹೇಳಿದರು.

ಏತನ್ಮಧ್ಯೆ, ಅಫ್ಘಾನಿಸ್ತಾನ ಮಾತ್ರವಲ್ಲದೆ ವಿಶ್ವ ಮಾರುಕಟ್ಟೆಯಲ್ಲೂ ಡಾಲರ್ ಮೌಲ್ಯ ಏರಿಕೆಯಾಗಿದೆ ಎಂದು ತಾಲಿಬಾನ್ ವಕ್ತಾರರು ಹೇಳಿದ್ದಾರೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News