ಪುತ್ರಜಯ/ನವದೆಹಲಿ: ವಿವಾದಾತ್ಮಕ ಭಾರತೀಯ ಇಸ್ಲಾಮಿಕ್ ಬೋಧಕ ಝಾಕಿರ್ ನಾಯಕ್ ಅವರನ್ನು ಭಾರತಕ್ಕೆ ಕಳುಹಿಸಲಾಗುವುದಿಲ್ಲ ಎಂದು ಮಲೇಶಿಯಾದ ಪ್ರಧಾನಿ ಮಹಾದಿರ್ ಮೊಹಮ್ಮದ್ ಸ್ಪಷ್ಟಪಡಿಸಿದ್ದಾರೆ. 2016ರಲ್ಲಿ ಭಾರತವನ್ನು ತೊರೆದಿದ್ದ ಝಾಕಿರ್ ನಾಯಕ್ ಮಲೇಶಿಯಾಗೆ ತೆರಳಿ, ಅಲ್ಲಿ ಶಾಶ್ವತ ಪೌರತ್ವ ಪಡೆದಿದ್ದಾರೆ.


COMMERCIAL BREAK
SCROLL TO CONTINUE READING

ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಜನವರಿ ತಿಂಗಳಲ್ಲಿ ಝಾಕಿರ್ ರನ್ನು ಭಾರತಕ್ಕೆ ವಾಪಸ್ ಕಳುಹಿಸಬೇಕು ಎಂದು ಭಾರತ ಮಲೇಶಿಯಾಗೆ ಮನವಿ ಮಾಡಿತ್ತು.  ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಮಲೇಶಿಯ ಪ್ರಧಾನಿ ಝಾಕೀರ್​ ನಾಯ್ಕರಿಗೆ ಶಾಶ್ವತ ಸದಸ್ಯತ್ವವನ್ನು ನೀಡಿದ್ದೇವೆ. ಅವರಿಂದ ನಮಗೆ ಯಾವುದೇ ತೊಂದರೆ ಆಗುತ್ತಿಲ್ಲ. ಭಾರತ ಸರ್ಕಾರದ ಸುಪರ್ದಿಗೆ ನೀಡಿ ಗಡಿಪಾರು ಮಾಡುವ ಪ್ರಶ್ನೆಯೇ ಇಲ್ಲ ಎಂದು ಮಲೇಷ್ಯಾ ಪ್ರಧಾನಿ ಮಹತಿರ್​ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ..



ತನ್ನ ಪ್ರಚೋದನಕಾರಿ ಹೇಳಿಕೆಗಳ ಕಾರಣದಿಂದಾಗಿ ನಾಯಕ್ನನ್ನು ಹಿಂದಕ್ಕೆ ಕಳುಹಿಸಲು ಭಾರತ ಒತ್ತಾಯಿಸಿದೆ ಎಂದು ಸುದ್ದಿಗಳಲ್ಲಿ ಹೇಳಲಾಗಿದೆ. ಭಯೋತ್ಪಾದಕ ಚಟುವಟಿಕೆಗಳಲ್ಲಿ ಸೇರಲು ಯುವಜನರ ಪ್ರೇರೇಪಣೆ ಸೇರಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಝಾಕಿರ್ ನಾಯಕ್  2016 ರಿಂದಲೂ ಮಲೇಶಿಯಾದಲ್ಲಿಯೇ ಬೀಡು ಬಿಟ್ಟಿದ್ದು, ಮತ್ತೆ ಭಾರತಕ್ಕೆ ಮರಳುತ್ತಾರೆ ಎನ್ನುವ  ನಿರೀಕ್ಷೆಯಿತ್ತು. ಆದರೆ ಈಗ ಝಾಕಿರ್ ನಾಯಕ್ ನನ್ನು ಭಾರತಕ್ಕೆ ಕಳಿಸುವುದಿಲ್ಲ ಎಂದು ಹೇಳುವ ಮೂಲಕ ಮಲೇಶಿಯಾ ಪಿಎಂ ಇದಕ್ಕೆ ತೆರೆ ಎಳೆದಿದ್ದಾರೆ.