Viral News: ಚಿಂಪಾಜಿಯೊಡನೆ ಸಂಬಂಧ; ಮಹಿಳೆಗೆ ಮೃಗಾಲಯಕ್ಕೆ ಬರದಂತೆ ನಿಷೇಧ..!
ತನಗೆ ನಿಷೇಧ ಹೇರಿರುವ ಮೃಗಾಲಯದ ಅಧಿಕಾರಿಗಳ ವಿರುದ್ಧ ಮಹಿಳೆ ಬೇಸರ ವ್ಯಕ್ತಪಡಿಸಿದ್ದು, ನಾನು ಮಾಡಿರುವ ತಪ್ಪಾದರೂ ಏನು ಎಂದು ಪ್ರಶ್ನಿಸಿದ್ದಾರೆ.
ನವದೆಹಲಿ: ಪ್ರಾಣಿಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ… ಪ್ರತಿಯೊಬ್ಬರೂ ಪ್ರಾಣಿಗಳನ್ನು ಪ್ರೀತಿಸುತ್ತಾರೆ. ಕೆಲವು ಪ್ರಾಣಿಗಳನ್ನು ಸಾಕಿ ಪೋಷಿಸುತ್ತಾರೆ. ಮಾನವರು ಪ್ರಾಣಿ ಪ್ರೇಮಿಗಳಾಗುವುದು ಕಾಮನ್, ಆದರೆ ಇಲ್ಲೊಬ್ಬ ಮಹಿಳೆ ನಿಜವಾಗಿಯೂ ಚಿಂಪಾಂಜಿ ಜೊತೆ ಲವ್ ನಲ್ಲಿ ಬಿದ್ದಿದ್ದಾರೆ. ಅಚ್ಚರಿಯಾದರೂ ಇದು ನಿಜ. ಚಿಂಪಾಂಜಿ(Chimpanzee)ಯೊಡನೆ ಸಂಬಂಧವಿಟ್ಟುಕೊಂಡಿರುವ ಮಹಿಳೆಗೆ ಮೃಗಾಲಯಕ್ಕೆ ಬರದಂತೆ ನಿಷೇಧ ಹೇರಲಾಗಿದೆ.
ಬೆಲ್ಜಿಯಂನಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಉತ್ತರ ಬೆಲ್ಜಿಯಂನಲ್ಲಿರುವ ಆಂಟ್‌ವಾರ್ಪ್ ಮೃಗಾಲಯ(Antwerp Zoo)ಕ್ಕೆ ಕಳೆದ 4 ವರ್ಷಗಳಿಂದ ‘ಆಡಿ ಟಿಮ್ಮರ್‌ಮ್ಯಾನ್ಸ್’(Adie Timmermans) ಎಂಬ ಮಹಿಳೆ ಪ್ರತಿ ವಾರಕ್ಕೊಮ್ಮೆ ಭೇಟಿ ನೀಡುತ್ತಿದ್ದರಂತೆ. ಈ ವೇಳೆ ಅವರಿಗೆ ಮೃಗಾಲಯದಲ್ಲಿನ ‘ಚಿತಾ’ ಹೆಸರಿನ 38 ವರ್ಷದ ಚಿಂಪಾಂಜಿಯೊಡನೆ ವಿಶೇಷ ನಂಟು ಬೆಳೆದಿದೆಯಂತೆ.
ಪ್ರತಿವಾರವೂ ತಪ್ಪದೇ ಮೃಗಾಲಯ(Zoo)ಕ್ಕೆ ಬರುತ್ತಿದ್ದ ಮಹಿಳೆ ಚಿಂಪಾಂಜಿ(Chimpanzee)ಯನ್ನು ಭೇಟಿಯಾಗಿ ಕೆಲ ಸಮಯ ಅದರ ಜೊತೆ ಕಾಲ ಕಳೆಯುತ್ತಿದ್ದರಂತೆ. ಹೀಗೆ ನಿರಂತರವಾಗಿ ಆಗಮಿಸುತ್ತಿದ್ದ ಅವರು ‘ಚಿತಾ’ ಜೊತೆಗೆ ಹೆಚ್ಚು ಕಾಲ ಕಳೆಯಲು ಶುರು ಮಾಡಿದ್ದರಂತೆ. ಪರಿಣಾಮ ಆ ಚಿಂಪಾಂಜಿ ಬೇರೆ ಚಿಂಪಾಂಜಿಗಳೊಡನೆ ಕಾಲ ಕಳೆಯುವುದನ್ನೇ ನಿಲ್ಲಿಸಿಬಿಟ್ಟಿದೆ. ಇದರಿಂದ ಗಲಿಬಿಲಿಗೊಂಡ ಮೃಗಾಲಯದ ಅಧಿಕಾರಿಗಳಿಗೆ ಚಿಂಪಾಂಜಿಗೆ ಏನಾಗಿರಬಹುದು ಅಂತಾ ತಲೆಕೆಡಿಸಿಕೊಂಡಿದ್ದಾರೆ. ಆದರೆ ಮಹಿಳೆ ಮಾತ್ರ ಮೃಗಾಲಯಕ್ಕೆ ಬರುವುದು ಮತ್ತು ಚಿಂಪಾಂಜಿ ಭೇಟಿಯಾಗುವುದನ್ನು ನಿಲ್ಲಿಸಿರಲಿಲ್ಲವಂತೆ. ನಿರ್ದಿಷ್ಟವಾಗಿ ಚಿತಾ ಚಿಂಪಾಂಜಿಯೊಡನೆ ಮಾತ್ರ ಮಹಿಳೆ ಹೆಚ್ಚುಹೊತ್ತು ಕಾಲ ಕಳೆಯುತ್ತಿರುವುದು ಮೃಗಾಲಯದ ಅಧಿಕಾರಿಗಳ ಗಮನಕ್ಕೆ ಬಂದಿದೆ.
ಇದನ್ನೂ ಓದಿ: Afghanistan political crisis: G7 ರಾಷ್ಟ್ರಗಳ ತುರ್ತು ಸಭೆ ಕರೆದ ಬ್ರಿಟನ್
ಮಹಿಳೆ ಚಿಂಪಾಂಜಿ(Chimpanzee)ಯೊಡನೆ ಸಂಬಂಧ ಹೊಂದಿದ್ದಾರೆಂಬ ವಿಷಯ ಗೊತ್ತಾದ ತಕ್ಷಣ ಅಧಿಕಾರಿಗಳು ಮಹಿಳೆಯನ್ನು ಭೇಟಿಯಾಗಿ ಹೀಗೆ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ. ‘ಚಿಂಪಾಂಜಿಯೊಡನೆ ನೀವು ಈ ರೀತಿ ಹೆಚ್ಚು ಹೊತ್ತು ಕಾಲ ಕಳೆಯುತ್ತಿರುವುದು ಸರಿಯಲ್ಲ. ಇದು ಚಿಂಪಾಂಜಿಯ ಸಹಜ ಬೆಳವಣಿಗೆಯ ಮೇಲೆ ಪರಿಣಾಮ ಬೀರಲಿದೆ. ಚಿತಾ ಇತರ ಚಿಂಪಾಂಜಿಗಳೊಡನೆ ಬೆರೆಯುವುದನ್ನೇ ನಿಲ್ಲಿಸಿದೆ. ಇನ್ನುಮುಂದೆ ನೀವು ನಮ್ಮ ಮೃಗಾಲಯಕ್ಕೆ ಬರಬೇಡಿ’ ಅಂತಾ ಮಹಿಳೆಗೆ ಆದೇಶಿಸಿದ್ದಾರೆ.
ಇದನ್ನೂ ಓದಿ: Covid-19 Research: ಕೊವಿಡ್ ನಿಂದ ಬಳಲುತ್ತಿರುವ ಅಧಿಕ BP ಹಾಗೂ ಮಧುಮೇಹದ ಯುವಕರಲ್ಲಿ Brain Stroke ಅಪಾಯ ಹೆಚ್ಚು- ಅಧ್ಯಯನ
ಮೃಗಾಲಯ(Zoo)ಕ್ಕೆ ಬರದಂತೆ ತನಗೆ ನಿಷೇಧ ಹೇರಿರುವ ಅಧಿಕಾರಿಗಳ ನಡೆಗೆ ಮಹಿಳೆ ಬೇಸರ ವ್ಯಕ್ತಪಡಿಸಿದ್ದಾರೆ. ‘ಮೃಗಾಲಯದ ಅಧಿಕಾರಿಗಳ ನಿರ್ಧಾರದಿಂದ ನನಗೆ ಬೇಸರವಾಗಿದೆ. ನಾನು ಮಾಡಿರುವ ತಪ್ಪಾದರೂ ಏನು? ನಾನು ಚಿತಾ ಚಿಂಪಾಂಜಿಯನ್ನು ತುಂಬಾ ಪ್ರೀತಿಸುತ್ತಿದ್ದೇನೆ. ದಯವಿಟ್ಟು ನಮ್ಮಿಬ್ಬರನ್ನು ದೂರ ಮಾಡಬೇಡಿ ಅಂತಾ ಅಳಲು ತೋಡಿಕೊಂಡಿದ್ದಾರೆ. ಆದರೆ ಮೃಗಾಲಯದ ಅಧಿಕಾರಿಗಳು ಮಾತ್ರ ಯಾವುದೇ ಕಾರಣಕ್ಕೂ ನಿಮಗೆ ಮೃಗಾಲಯಕ್ಕೆ ಎಂಟ್ರಿ ನೀಡುವುದಿಲ್ಲವೆಂದು ಆ ಮಹಿಳೆಗೆ ಖಂಡತುಂಡವಾಗಿ ಹೇಳಿದ್ದಾರಂತೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ