ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋಗಳು ವೈರಲ್ ಆಗುವುದು ಇತ್ತೀಚಿಗೆ ಸಾಮಾನ್ಯ ಸಂಗತಿಯಾಗಿದೆ. ಇಂತಹ ವೈರಲ್ ವಿಡಿಯೋಗಳಲ್ಲಿ ಹಲವು ಬಗೆಯ ವಿಡಿಯೋಗಳನ್ನು ನೋಡುತ್ತೇವೆ. ಈಗ ಚಿಂಪಾಂಜಿಯೊಂದರ ವಿಡಿಯೋ ವೈರಲ್ ಆಗಿದೆ. ಇದು ಅಂತಿಂತ ಚಿಂಪಾಂಜಿಯಲ್ಲ. ಮನುಷ್ಯರನ್ನು ಅನುಕರಿಸುವ ಚಿಂಪಾಂಜಿ...
ಈ ವೀಡಿಯೊದಲ್ಲಿ, ಚಿಂಪಾಂಜಿ ಮನುಷ್ಯನಂತೆ ತನ್ನ ಕೋಣೆಯನ್ನು ಸ್ವಚ್ಛಗೊಳಿಸುತ್ತಿದೆ. ಚಿಂಪಾಂಜಿ ಸಾಮಾನ್ಯ ಮನುಷ್ಯರಂತೆ ಕೈಯಲ್ಲಿ ಪೊರಕೆ ಹಿಡಿದು ತನ್ನ ಕೋಣೆಯಲ್ಲಿದ್ದ ಎಲ್ಲಾ ಎಲೆಗಳನ್ನು ತೆಗೆಯಲು ಪ್ರಯತ್ನಿಸುತ್ತಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಚೀನಾದ ಶೆನ್ಯಾಂಗ್ ನಗರದ ಮೃಗಾಲಯದಲ್ಲಿರುವ ಚಿಂಪಾಂಜಿಯ ಕುರಿತು ಈ ವಿಡಿಯೋದಲ್ಲಿ ಹೇಳಲಾಗಿದೆ. ಮೃಗಾಲಯದ ಅಧಿಕಾರಿಯೊಬ್ಬರು ಸ್ಥಳೀಯ ಮಾಧ್ಯಮದೊಂದಿಗೆ ಮಾತನಾಡುತ್ತಾ, ಚಿಂಪಾಂಜಿಯ ಕೊಠಡಿಯಲ್ಲಿ ಉದ್ದೇಶಪೂರ್ವಕವಾಗಿ ಬಹಳಷ್ಟು ಎಲೆಗಳನ್ನು ಇರಿಸಲಾಗುತ್ತಿತ್ತು. ಆದ್ದರಿಂದ ಅದು ಕಾಡಿನಂತೆ ಇರುತ್ತದೆ. ಎಲೆಗಳನ್ನು ಇಟ್ಟುಕೊಳ್ಳಲು ಎರಡು ಪ್ರಯೋಜನಗಳಿವೆ ಎಂದು ಅವರು ಹೇಳಿದರು. ಮೊದಲು ಚಿಂಪಾಂಜಿಗಳಿಗೆ ತಮ್ಮ ಮನೆ ಭಾವನೆ ಮೂಡುತ್ತದೆ ಮತ್ತು ಎರಡನೆಯದಾಗಿ ಅದು ಪ್ರಾಣಿಗಳ ದೇಹದ ವಾಸನೆ ಕಡಿಮೆಯಾಗುತ್ತದೆ ಎಂದು ತಿಳಿಸಿದರು. ಒಂದು ದಿನ ಚಿಂಪಾಂಜಿಯ ಕೊಠಡಿ ಮುಂದೆ ಸಾಗುವ ವೇಳೆ ಚಿಂಪಾಂಜಿ ಕಸ ಗುಡಿಸಿ ಸ್ವಚ್ಛಗೊಳಿಸುತ್ತಿರುವುದನ್ನು ನೋಡಿದೆ ಎಂದು ಅವರು ತಿಳಿಸಿದ್ದಾರೆ.
ಈ ಚಿಂಪಾಂಜಿಯ ಐಕ್ಯೂ ಮಟ್ಟವು 4 ರಿಂದ 5 ವರ್ಷಕ್ಕೆ ಸಮಾನವಾಗಿರುತ್ತದೆ. ಚಿಂಪಾಂಜಿ ಜನರನ್ನು ನಕಲು ಮಾಡುತ್ತದೆ ಎಂದು ಒಬ್ಬ ಅಧಿಕಾರಿ ಹೇಳಿದ್ದಾರೆ. ಉದಾಹರಣೆಗೆ ಮಗು ಮೃಗಾಲಯಕ್ಕೆ ಬಂದಾಗ ಚಿಂಪಾಂಜಿಯನ್ನು ನೋಡಿ ನಕ್ಕರೆ, ಚಿಂಪಾಂಜಿ ಅದನ್ನು ನಕಲು ಮಾಡಲು ಪ್ರಯತ್ನಿಸುತ್ತದೆ ಎಂದು ಅವರು ಹೇಳಿದ್ದಾರೆ.