ನ್ಯೂಯಾರ್ಕ್: ಶೀಘ್ರದಲ್ಲೇ  ಅಮೆರಿಕಾದ ಇತಿಹಾಸದಲ್ಲಿ ಸುಪ್ರಸಿದ್ಧ ಸರಣಿ ಕೊಲೆಗಾರರ ​​ಪಟ್ಟಿಗೆ ಇನ್ನೊಂದು ಹೆಸರು ಸೇರ್ಪಡೆಯಾಗಲಿದೆ. ಹೌದು, ಈಗ ಆಯೋವಾದಲ್ಲಿ ರೈತನೊಬ್ಬ ಕಳೆದ 30 ವರ್ಷಗಳಲ್ಲಿ ಸುಮಾರು 70 ಮಹಿಳೆಯರನ್ನು ಕೊಂದಿದ್ದಾನೆ ಎಂದು ಆತನ ಪುತ್ರಿ ಹೇಳಿರುವುದು ಇದಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ.


COMMERCIAL BREAK
SCROLL TO CONTINUE READING

ಆದರೆ ಪೊಲೀಸರು ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ, ಜೊತೆಗೆ ಆತನ ಪುತ್ರಿ ತನ್ನ ತಂದೆ ಹೆಣಗಳನ್ನು ಎಲ್ಲಿ ಹೂತಿದ್ದಾನೆ ಎನ್ನುವ ವಿಷಯವು ಸಹ ತಿಳಿದಿದೆ ಎಂದು ಪೊಲೀಸರಿಗೆ ಹೇಳಿದ್ದಾಳೆ.


ಇದನ್ನೂ ಓದಿ: ಟೋಲ್ ಹೋರಾಟ ಹಿನ್ನೆಲೆ: ಟೋಲ್‌ಗೇಟ್ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ


ಲೂಸಿ ಸ್ಟುಡೆ ಪ್ರಕಾರ, ಆಕೆಯ ತಂದೆ, ಸೀರಿಯಲ್ ಕಿಲ್ಲರ್ ಡೊನಾಲ್ಡ್ ಡೀನ್ ಸ್ಟುಡೆ, ಹತ್ಯೆಗೈದಿರುವ ಮಹಿಳೆಯರ ಹೆಣವನ್ನು  100 ಅಡಿ ಆಳದ ಬಾವಿಗೆ ಎಸೆಯುತ್ತಿದ್ದರು. ಅಯೋವಾದ ಥರ್ಮನ್‌ನಲ್ಲಿರುವ ಕೃಷಿಭೂಮಿಯ ಮೇಲೆ ಶವಗಳನ್ನು ಸಾಗಿಸಲು ಚಳಿಗಾಲದಲ್ಲಿ ಟೊಬೊಗ್ಗನ್ ಮತ್ತು ಬೇಸಿಗೆಯಲ್ಲಿ ಚಕ್ರದ ಕೈಬಂಡಿಯನ್ನು ಬಳಸುವುದನ್ನು ಬಳಸುತ್ತಿದ್ದರು ಎಂದು ಆಕೆ ಹೇಳಿದ್ದಾಳೆ.


ಆದರೆ ಈಗ ಆಕೆಯ ಹೇಳಿಕೆಗಳು ನಿಜವೋ ಸುಳ್ಳೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಹೆಚ್ಚಿನ ಸಂಶೋಧನೆ ನಡೆಸುತ್ತಿದ್ದಾರೆ. ಆದಾಗ್ಯೂ, ಫ್ರೀಮಾಂಟ್ ಕೌಂಟಿ ಶೆರಿಫ್ ಕೆವಿನ್ ಐಸ್ಟ್ರೋಪ್ ಪ್ರಕಾರ, ಎರಡು ಶೋಧ ನಾಯಿಗಳು ಬಾವಿಯಲ್ಲಿ ಹೆಣಗಳ ಉಪಸ್ಥಿತಿಯನ್ನು ಪತ್ತೆ ಹಚ್ಚಿವೆ ಎನ್ನಲಾಗಿದೆ.


ಇದನ್ನೂ ಓದಿ: Gandhada Gudi: ತಮ್ಮ ಊಟದ ತಟ್ಟೆ ತಾವೇ ತೊಳೆಯುತ್ತಿದ್ದ ಪುನೀತ್‌! ಇದು ʻರಾಜರತ್ನʼನ ಸರಳತೆ


ಈ ಕುರಿತಾಗಿ ಪ್ರತಿಕ್ರಿಯಿಸಿರುವ ಐಸ್ಟ್ರೋಪ್ "ಇದೀಗ, ನಮಗೆ ಮೂಳೆ ಕೂಡ ಸಿಕ್ಕಿಲ್ಲ. ನಾಯಿಗಳ ಶೋಧನೆಯಂತೆ, ಇದು ಬಹಳ ದೊಡ್ಡ ಸಮಾಧಿ ಸ್ಥಳ ಎನ್ನುವುದು ಸ್ಪಷ್ಟವಾಗಿದೆ, ಎಂದು ಅವರು ಹೇಳಿದರು. ನ್ಯೂಸ್‌ವೀಕ್ ಪ್ರಕಾರ, ಕಾನೂನು ಜಾರಿ ಅಧಿಕಾರಿಗಳು ಡೊನಾಲ್ಡ್ ಸ್ಟುಡೆ ಮಹಿಳೆಯರನ್ನು ಕೊಲ್ಲುವ ಮೊದಲು ತನ್ನ 5 ಎಕರೆ ಕಾಡಿನ ಬೆಟ್ಟಗಳು ಮತ್ತು ಹೊಲಗಳನ್ನು ಆಮಿಷವೊಡ್ಡಿದ್ದಾರೆಂದು ಭಾವಿಸುತ್ತಾರೆ, ಅವರಲ್ಲಿ ಹೆಚ್ಚಿನವರು ಲೈಂಗಿಕ ಕಾರ್ಯಕರ್ತರು ಅಥವಾ ನೆರೆಯ ಒಮಾಹಾ, ನೆಬ್ರಸ್ಕಾದಲ್ಲಿ ಸಿಕ್ಕಿಬಿದ್ದ ಬೀದಿ ಜನರು ಎನ್ನಲಾಗಿದೆ. ಸಿರಿಯಲ್ ಕಿಲ್ಲರ್ ಡೊನಾಲ್ಡ್ 75 ನೇ ವಯಸ್ಸಿನಲ್ಲಿ ಮಾರ್ಚ್ 2013 ರಲ್ಲಿ, ನಿಧನರಾದರು.


ಒಂದು ವೇಳೆ ಇದು ಪುತ್ರಿಯ ಹೇಳಿಕೆಯಂತೆ ಇದು ಸಾಬೀತು ಆಗಿದ್ದೆ ಆದಲ್ಲಿ ಡೊನಾಲ್ಡ್ ಡೀನ್ ಸ್ಟುಡೆ ಅಮೆರಿಕಾದ ಇತಿಹಾಸದಲ್ಲಿ ಅತ್ಯಂತ ಕುಖ್ಯಾತ ಸರಣಿ ಕೊಲೆಗಾರರಲ್ಲಿ ಸ್ಥಾನ ಪಡೆಯುತ್ತಾನೆ. ಇನ್ನೊಂದೆಡೆಗೆ ಪುತ್ರಿ  ಲುಸಿ ಸ್ಟಡಿ "ಈಗ ನಾನು ಈ ಸ್ಥಳಗಳನ್ನು ಅಗೆದು ಕೊಲೆಯಾಗಿರುವ ಮಹಿಳೆಯರಿಗೆ ಸೂಕ್ತ ಸಮಾದಿ ಸ್ಥಳವನ್ನು ನೀಡುವುದಾಗಿ ಹೇಳಿದ್ದಾಳೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.