ನವದೆಹಲಿ: ವಿಲಕ್ಷಣ ಘಟನೆಯೊಂದರಲ್ಲಿ ಸನ್ಯಾಸಿನಿಯಂತೆ(Nun)ಬಟ್ಟೆ ಧರಿಸಿದ್ದ ಮಹಿಳೆಯೊಬ್ಬಳು ಸ್ಮಶಾನದ ಬಳಿ ಅಸ್ಥಿಪಂಜರಗಳೊಂದಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಈ ವಿಚಿತ್ರ ಘಟನೆ ನಡೆದಿರುವುದು ಇಂಗ್ಲೆಂಡಿನ ಹಳೆಯ Hull General ಸ್ಮಶಾನದ ಪಕ್ಕದಲ್ಲಿ. ಈ ಭಯಾನಕ ಮತ್ತು ವಿಚಿತ್ರ ದೃಶ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದೆ.  


COMMERCIAL BREAK
SCROLL TO CONTINUE READING

ಇಂಗ್ಲೆಂಡಿನ ಸ್ಪ್ರಿಂಗ್ ಬ್ಯಾಂಕ್ ಪಶ್ಚಿಮ ಪ್ರದೇಶ(Spring Bank West)ದ ಸ್ಮಶಾನದ ಸಮೀಪ ಕಾರಿನಲ್ಲಿ ಹೋಗುತ್ತಿದ್ದ ಪ್ರಯಾಣಿಕರೊಬ್ಬರು ಮಾನವನ ಅಸ್ಥಿಪಂಜರಗಳೊಂದಿಗೆ ಕ್ರೈಸ್ತ ಸನ್ಯಾಸಿನಿ ಡ್ಯಾನ್ಸ್ ಮಾಡುತ್ತಿರುವ ದೃಶ್ಯವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಈ ದೃಶ್ಯವನ್ನು ನೋಡಿ ನನಗೆ ನಂಬಲು ಸಾಧಶ್ಯವಾಗಲಿಲ್ಲವೆಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ಇದೇಕೆ ಸನ್ಯಾಸಿನಿ ಈ ರೀತಿ ಅಸ್ಥಿಪಂಜರಗಳೊಂದಿಗೆ ನೃತ್ಯ ಮಾಡುತ್ತಿದ್ದಾರೆಂದು ನನಗೆ ಆಶ್ಚರ್ಯವಾಯಿತು ಅಂತಾ ಅವರು ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Coronavirus: ಇನ್ನೂ ಎಷ್ಟು ದಿನ ಇರುತ್ತೆ ಈ ಸಾಂಕ್ರಾಮಿಕ ರೋಗ? ಕಳವಳಕಾರಿ ವಿಷಯ ಹೇಳಿದ ಡಬ್ಲ್ಯುಎಚ್‌ಒ


ಈ ಘಟನೆ ಶನಿವಾರ(ಸೆಪ್ಟೆಂಬರ್ 11)ರಂದು ನಡೆದಿದೆ. ಬಳಿಕ ಸನ್ಯಾಸಿನಿ ಅಸ್ಥಿಪಂಜರಗಳನ್ನು ಹಿಡಿದುಕೊಂಡು ನೃತ್ಯ ಮಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾ(Soical Media)ದಲ್ಲಿ ಸಖತ್ ವೈರಲ್ ಆಗಿವೆ. ವೈರಲ್ ಆಗಿರುವ ಚಿತ್ರಗಳಲ್ಲಿ ನನ್ (Nun) ರೀತಿಯ ಬಟ್ಟೆ ಧರಿಸಿದ್ದ ಮಹಿಳೆ ಮಾನವನ ಅಸ್ಥಿಪಂಜರದೊಂದಿಗೆ ನೃತ್ಯ ಮಾಡುತ್ತಿದ್ದಾಳೆ. ಅಲ್ಲದೆ ನಾಯಿ ರೀತಿಯ ಪ್ರಾಣಿಯೊಂದು ಆಕೆಯ ಸುತ್ತ ಸುತ್ತಾಡಿರುವುದು ಕಂಡು ಬಂದಿದೆ.  


ಸ್ಮಶಾನದ ಪಕ್ಕ ನಿಂತು ನೃತ್ಯ ಮಾಡಿರುವ ಈ ದೃಶ್ಯವನ್ನು ಅನೇಕ ಸ್ಥಳೀಯರು ನೋಡಿದ್ದಾರೆ. ಈ ಮಧ್ಯೆ ವಿಲಕ್ಷಣ ದೃಶ್ಯವನ್ನು ಚಿತ್ರೀಕರಿಸಿರುವ ಇನ್ನೊಬ್ಬ ವ್ಯಕ್ತಿ, ‘ಕೇವಲ ಸ್ಟಂಟ್ ಗಾಗಿ, ತಮಾಷೆ ಅಥವಾ ಶೂಟಿಂಗ್ ನ ಭಾಗವಾಗಿ ನನ್(Nun) ನೃತ್ಯವನ್ನು ಮಾಡಿರಬಹುದು’ ಎಂದು ಹೇಳಿದ್ದಾರೆ.


ಇದನ್ನೂ ಓದಿ: Spook fest: 13 ಹಾರರ್ ಸಿನಿಮಾ ನೋಡಿ 95 ಸಾವಿರ ರೂ. ಜೇಬಿಗಿಳಿಸಿಕೊಳ್ಳಿ..!


ನನ್(Nun) ನೃತ್ಯ ಮಾಡಿರುವ Hull General ಸ್ಮಶಾನವು ಅತ್ಯಂತ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಇದನ್ನು ಕಳೆದ 50 ವರ್ಷಗಳಿಗಿಂತಲೂ ಹೆಚ್ಚು ಕಾಲ ಬಳಸಲಾಗಿಲ್ಲ. ಈ ಸ್ಮಶಾನವನ್ನು 1847 ರಲ್ಲಿ ನಿರ್ಮಿಸಲಾಗಿತ್ತು ಮತ್ತು 1972ರವರೆಗೆ ಇದು ಬಳಕೆಯಲ್ಲಿತ್ತು. ಈ ಪ್ರಸಿದ್ಧ ಸ್ಮಶಾನವು ಹೆಚ್ಚಿನ ಸಂಖ್ಯೆಯ ಪ್ರಮುಖ ಸ್ಮಾರಕಗಳು ಮತ್ತು ಸಮಾಧಿ ಸ್ಥಳಗಳನ್ನು ಒಳಗೊಂಡಿದೆ. ವಿಶೇಷವಾಗಿ 1849ರಲ್ಲಿ ಏಕಾಏಕಿ ಕಾಲರಾ ರೋಗದಿಂದ ಸಾವನ್ನಪ್ಪಿದ ಅನೇಕರನ್ನು ಇಲ್ಲಿಯೇ ಸಮಾಧಿ ಮಾಡಲಾಗಿದೆಯಂತೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.