ಕೀವ್‌ (ಉಕ್ರೇನ್): ಕೀವ್‌ನಲ್ಲಿ (Kyiv) ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಾಯಿಗೆ ಔಷಧಿ ತರಲು ಮನೆಯಿಂದ ಹೊರಟಿದ್ದ ಉಕ್ರೇನಿಯನ್ (Ukraine) ಮಹಿಳೆಯ ಮೇಲೆ  ರಷ್ಯಾ ಸೇನೆ ದಾಳಿ ನಡೆಸಿದೆ ಎಂದು ವರದಿಯಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ:ಉಕ್ರೇನ್ ಮೇಲೆ ರಷ್ಯಾ ರಾಸಾಯನಿಕ ದಾಳಿ ಕುರಿತು ನ್ಯಾಟೋ ಮುಖ್ಯಸ್ಥರು ಹೇಳಿದ್ದೇನು?


ವಲೇರಿಯಾ ಮಕ್ಸೆಟ್ಸ್ಕಾ ಎಂಬ ಮಹಿಳೆ USAID ಪಾಲುದಾರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ವಲೇರಿಯಾ ರಷ್ಯನ್ನರಿಂದ (Russia Ukraine War) ಮುತ್ತಿಗೆಯಲ್ಲಿರುವ ನಿವಾಸಿಗಳಿಗೆ ಸಹಾಯ ಮಾಡಲು ಕೀವ್ ನಲ್ಲಿ ಉಳಿಯಲು ಯೋಜಿಸಿದ್ದರು. ಆದರೆ ಅವರ ತಾಯಿ ಐರಿನಾ ಔಷಧಿ ಖಾಲಿಯಾದಾಗ ಮೆಡಿಸಿನ್ ತರಲು ಹೊರಟಿದ್ದರು.


ಔಷಧಿ ತರಲು ವಲೇರಿಯಾ, ಐರಿನಾ ಮತ್ತು ಅವರ ಚಾಲಕ ಯಾರೋಸ್ಲಾವ್ ಹೊರಟಿದ್ದ ವೇಳೆ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. USAID ನ ನಿರ್ವಾಹಕರಾದ ಸಮಂತಾ ಪವರ್ ಅವರು ಘಟನೆಯಲ್ಲಿ ಎಲ್ಲಾ ಮೂರು ಜನರು ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದ್ದಾರೆ. 


ಇದನ್ನೂ ಓದಿ:China: ಸರ್ಕಾರದಲ್ಲಿ No.2 ಸ್ಥಾನದಲ್ಲಿರುವ ಮುಖಂಡ ನಿವೃತ್ತಿಯಾಗುತ್ತಿದ್ದಾರೆ, Jinping ಸ್ಟೇಟಸ್ ಕೂಡ ತಿಳಿದುಕೊಳ್ಳಿ


ವಲೇರಿಯಾ ಉಕ್ರೇನ್‌ನ ಡೊನೆಟ್ಸ್ಕ್‌ನಲ್ಲಿ ಹುಟ್ಟಿ ಬೆಳೆದರು. 2014 ರಲ್ಲಿ ಕ್ರಿಮಿಯನ್ ಪರ್ಯಾಯ ದ್ವೀಪದ ಮೇಲೆ ರಷ್ಯಾ (Russia) ಆಕ್ರಮಣ ಮಾಡಿದ ನಂತರ, ಅವರು ಮಾನವೀಯ ಪ್ರತಿಕ್ರಿಯೆಯ ಭಾಗವಾಗಿ ಕೆಲಸ ಮಾಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.