ಕೈವ್ ನತ್ತ ಧಾವಿಸುತ್ತಿರುವ ಶತ್ರು ಪಡೆ, ಹೊಸ ವೀಡಿಯೊ ಬಿಡುಗಡೆ ಮಾಡಿದ ರಷ್ಯಾದ ರಕ್ಷಣಾ ಸಚಿವಾಲಯ

Russia Ukrain War Update: 'ರಷ್ಯಾದ ಸೈನಿಕರು ದೊಡ್ಡ ಪ್ರಮಾಣದಲ್ಲಿ ಕೈವ್‌ನಲ್ಲಿ ಸೇರುತ್ತಿದ್ದಾರೆ.  ಮುಂದಿನ ದಿನಗಳಲ್ಲಿ ಕೈವ್‌ಗಾಗಿ ನಡೆಯುವ  ಪ್ರಮುಖ ಹೋರಾಟ ಇದಾಗಲಿದೆ ಎಂದು ಉಕ್ರೇನ್ ಅಧಿಕಾರಿಗಳು ರಷ್ಯಾದ ವೀಡಿಯೊವನ್ನು ಬಿಡುಗಡೆ ಮಾಡಿದ ನಂತರ, ಹೇಳಿದ್ದಾರೆ. 

Written by - Ranjitha R K | Last Updated : Mar 7, 2022, 02:01 PM IST
  • ಉಕ್ರೇನ್ ಮೇಲೆ 12 ನೇ ದಿನವೂ ಮುಂದುವರೆದಿದೆ ದಾಳಿ
  • ವಿಡಿಯೋ ಬಿಡುಗಡೆ ಮಾಡಿದ ರಷ್ಯಾ
  • ಶೀಘ್ರದಲ್ಲೇ ಕೈವ್ ವಶಪಡಿಸಿಕೊಳ್ಳಲಿದೆಯಾ ರಷ್ಯಾ
  ಕೈವ್ ನತ್ತ ಧಾವಿಸುತ್ತಿರುವ ಶತ್ರು  ಪಡೆ,  ಹೊಸ ವೀಡಿಯೊ ಬಿಡುಗಡೆ ಮಾಡಿದ ರಷ್ಯಾದ ರಕ್ಷಣಾ ಸಚಿವಾಲಯ   title=
ಉಕ್ರೇನ್ ಮೇಲೆ 12 ನೇ ದಿನವೂ ಮುಂದುವರೆದಿದೆ ದಾಳಿ

ನವದೆಹಲಿ :  ಕೈವ್ (Kyiv) ಸಮೀಪದ ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ರಷ್ಯಾ ನಿಯೋಜಿಸಿದೆ (Russia Ukraine war). ಮುಂದಿನ ಕೆಲವೇ ದಿನಗಳಲ್ಲಿ, ಮಾಸ್ಕೋದ ಸೈನ್ಯವು ರಾಜಧಾನಿ ಕೈವ್ ಅನ್ನು ವಶಪಡಿಸಿಕೊಳ್ಳಲಿದೆ ಎಂದೇ ಹೇಳಲಾಗುತ್ತಿದೆ.  ಉಕ್ರೇನ್‌ನ ಆಂತರಿಕ ಸಚಿವರ ಸಲಹೆಗಾರ ವಾಡಿಮ್ ಡೆನಿಸೆಂಕೊ ಸರ್ಕಾರಿ ಉಕ್ರೇನಿಯನ್ ಟಿವಿಗೆ ಮುಂದಿನ ಕೆಲವು ದಿನಗಳಲ್ಲಿ ಪ್ರಮುಖ ಯುದ್ಧವನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ (Russia Ukraine war updates). 

ಕೈವ್‌ನ ಹೊರವಲಯದಲ್ಲಿರುವ ರಷ್ಯಾದ ಟ್ಯಾಂಕ್‌ಗಳು :
ಇದೇ ವೇಳೆ ರಷ್ಯಾದ (Russia) ರಕ್ಷಣಾ ಇಲಾಖೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯ ಮಾಸ್ಕೋ ಟ್ಯಾಂಕ್‌ಗಳು ಕೈವ್ (Kyiv) ಕಡೆಗೆ ವೇಗವಾಗಿ ಚಲಿಸುತ್ತಿರುವುದನ್ನು ಕಾಣಬಹುದು. ರಷ್ಯಾದ ಸೈನಿಕರು ಅಧಿಕ ಸಂಖ್ಯೆಯಲ್ಲಿ ಕೈವ್‌ನತ್ತ ಧಾವಿಸುತ್ತಿದ್ದಾರೆ. ಕೈವ್‌ಗಾಗಿ ನಡೆಯುವ ಹೋರಾಟವು ಮುಂದಿನ ದಿನಗಳಲ್ಲಿ ನಡೆಯಲಿರುವ ಪ್ರಮುಖ ಯುದ್ಧವಾಗಿದೆ ಎನ್ನುವುದನ್ನು  ನಾವು ಅರ್ಥಮಾಡಿಕೊಂಡಿದ್ದೇವೆ ಎಂದು ಉಕ್ರೇನಿಯನ್ ಅಧಿಕಾರಿ ಹೇಳಿದ್ದಾರೆ. 

 ಇದನ್ನೂ ಓದಿ : Russia-Ukraine War: ರಷ್ಯಾನಲ್ಲಿ Marshal Law ಜಾರಿಗೆ Vladimir Putin ನಕಾರ, ಉಕ್ರೇನ್ ಬೆಂಬಲಿಸುವ ದೇಶಗಳಿಗೆ ಹೊಸ ಧಮ್ಕಿ

ಬಲಗೊಳ್ಳುತ್ತಿದೆ ರಷ್ಯಾದ ಹಿಡಿತ :
ರಷ್ಯಾದ ಹೆಲಿಕಾಪ್ಟರ್‌ಗಳು ಖಾರ್ಕಿವ್ (Kharkiv) ಮೇಲೆ ಸುಳಿದಾಡುತ್ತಿವೆ ಎಂದು ಮೇಯರ್ ಇಹೋರ್ ತೆರೆಖೋವ್ ಹೇಳಿದ್ದಾರೆ. ರಾಷ್ಟ್ರವನ್ನುದ್ದೇಶಿಸಿ ಮಾಡಿದ ರಾತ್ರಿಯ ಭಾಷಣದಲ್ಲಿ, ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಉಕ್ರೇನ್‌ನ ಮಿಲಿಟರಿ, ಕೈವ್ ಪ್ರದೇಶದಲ್ಲಿ ಹೋರಾಡುವ ಎಲ್ಲಾ ಸೈನಿಕರನ್ನು ಹಿಂಬಾಲಿಸುತ್ತದೆ ಎಂದು ಹೇಳಿದ್ದಾರೆ (Russia Ukraine Crisis). 

ಝೆಲೆನ್ಸ್ಕಿ ಪಾಶ್ಚಿಮಾತ್ಯ ನಾಯಕರು ಮಾಸ್ಕೋ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ರಷ್ಯಾದ ವಿರುದ್ಧದ ನಿರ್ಬಂಧಗಳನ್ನು ಹೇರಿದರೆ ಸಾಕಾಗುವುದಿಲ್ಲ ಎಂದು,  ಡ ಅವರು ಹೇಳಿದ್ದಾರೆ. 

ಇದನ್ನೂ ಓದಿ :Child Army: Vladimir Putin ಬಳಿ ಇದೆ ಈ ಅಪಾಯಕಾರಿ ಚೈಲ್ಡ್ ಆರ್ಮಿ, 10 ಲಕ್ಷಕ್ಕೂ ಅಧಿಕ ಫೈಟರ್ ಗಳಿಗೆ ಸಿಕ್ಕಿದೆ ಈ ವಿಶೇಷ ತರಬೇತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News