ನವದೆಹಲಿ: ಕೊರೊನಾವೈರಸ್ ಚಿಕಿತ್ಸೆಗಳ ಹುಡುಕಾಟದಲ್ಲಿ ಸುರಕ್ಷತಾ ಪರಿಶೀಲನೆ ಬಾಕಿ ಇರುವುದರಿಂದ ಅಮಾನತುಗೊಳಿಸಲಾಗಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ (Hydroxychloroquine) ಔಷಧದ ಕ್ಲಿನಿಕಲ್ ಪ್ರಯೋಗಗಳು ಪುನರಾರಂಭಗೊಳ್ಳಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ತಿಳಿಸಿದೆ.


COMMERCIAL BREAK
SCROLL TO CONTINUE READING

"ಲಭ್ಯವಿರುವ ಮರಣ ದತ್ತಾಂಶದ ಆಧಾರದ ಮೇಲೆ ... ಹೈಡ್ರಾಕ್ಸಿಕ್ಲೋರೊಕ್ವಿನ್ ನ್ನು ಪುನರಾರಂಭಿಸುವ ಬಗ್ಗೆ ವಿಚಾರಣೆಯಲ್ಲಿ ಕಾರ್ಯನಿರ್ವಾಹಕ ಗುಂಪು ಪ್ರಮುಖ ತನಿಖಾಧಿಕಾರಿಗಳೊಂದಿಗೆ ಸಂವಹನ ನಡೆಸುತ್ತದೆ" ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ವಾಸ್ತವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಈ ಹಿಂದೆ ಅಮೇರಿಕಾ ಸೇರಿದಂತೆ ವಿಶ್ವದ ವಿವಿಧ ದೇಶಗಳು ಈ ಡ್ರಗ್ಸ್ ನ್ನು ಭಾರತದಿಂದ ಆಮದು ಮಾಡಿಕೊಂಡಿದ್ದವು. ವಿಶ್ವದ ಅಧಿಕ ಭಾಗ ಇದರ ಉತ್ಪಾದನೆ ಭಾರತದಲ್ಲಾಗುತ್ತದೆ.